ಈ ರಂಗೀನ್ ಲೋಕ ಅಂದರೆ ಸಿನಿಮಾ ಲೋಕ ನಾವು ಹೊರ ನೋಟಕ್ಕೆ ನೋಡವಷ್ಟು ಸುಲಭವಲ್ಲ. ಅಥವಾ ಅಲ್ಲಿ ಕಾಣುವ ಹಾಗೆ ಪ್ರತಿಯೊಬ್ಬರ ಜೀವ ಕಲರ್ ಫುಲ್ ಆಗಿರುವುದಿಲ್ಲ. ರೀಲ್ ಲೈಫ್ ನಲ್ಲಿ ಹ್ಯಾಪಿ ಆಗಿರುವವರು ರಿಯಲ್ ಲೈಫ್ ನಲ್ಲಿ ಅದೇ ರೀತಿ ಇರುವುದಿಲ್ಲ. ಇನ್ನು ಹೆಚ್ಚಿನ ನಟಿಯರು ಸಿನಿಮಾ ಲೋಕಕ್ಕೆ ಕಾಲಿಡುವ ವೇಳೆ ಬಳುಕುವ ಬಳ್ಳಿಯಂತಿರುತ್ತಾರೆ. ಆದರೆ ನಂತರ ದಪ್ಪವಾಗುತ್ತಾ ಹೋಗುತ್ತಾರೆ. ಇದು ಕೇವಲ ಅವರ ಊಟ ತಿಂಡಿಯ ಅತಿಯಾದ ಸೇವನೆ, ವ್ಯಾಯಾಮ ಇಲ್ಲದ ಬದುಕಿನಿಂದಲೇ ಆಗಿರಲ್ಲ.
ಅದಕ್ಕೆ ಅನೇಕ ಕಾರಣಗಳು ಇರುತ್ತವೆ. ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಥೈರಾಯ್ಡ್ ಸಮಸ್ಯೆಯಿಂದ, ಹಾರ್ಮೋನಲ್ ವೇರಿಯೇಷನ್ ನಿಂದ ದಪ್ಪಗಾಗುತ್ತಾರೆ. ಹೀಗೆ ದಪ್ಪಗಾಗಿರುವ ನಟಿಯರು ಅನೇಕ ಅವಮಾನಗಳಿಗೆ ಗುರಿಯಾಗುತ್ತಾರೆ. ಕೆಲವರು ಬೊಜ್ಜು ಕರಗಿಸಲು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ, ಕೆಲವರು ಸರ್ಜರಿಯಿಂದಾಗಿ ಪ್ರಾ”ಣವನ್ನೇ ಕಳೆದುಕೊಳ್ಳುತ್ತಾರೆ.
ಇನ್ನು ಕೆಲವರು ಅವಮಾನ ತಡೆಯಲಾರದೆ ಜೀವ ಕಳೆದುಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ಮಾಡಲು ಮುಂದಾದ ನಟಿಯರಲ್ಲಿ ನಮಿತಾ ಕೂಡ ಒಬ್ಬರು. ಹೌದು, 2002 ರಲ್ಲಿ ತೆರೆಕಂಡ `ಸೊಂತಂ’ ಎಂಬ ತೆಲಗು ಚಿತ್ರದಿಂದ ಸಿನಿಪಯಣ ಆರಂಭಿಸಿದ ಅವರು ನಂತರ ತೆಲಗು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದರು. ಆ ಬಳಿಕ ನಮಿತಾ ಅವರು 2005 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಅಪಾರ ಹೆಸರು ಗಳಿಸಿದರು.
ಕೇವಲ ತೆಲುಗು, ತಮಿಳು ಮಾತ್ರವಲ್ಲದೆ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 2006 ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯದ `ನೀಲಕಂಠ’ ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ನಂತರ ‘ಇಂದ್ರ’, ‘ಹೂ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡ, ತೆಲುಗು ಹಾಗೂ ತಮಿಳು ಇಂಡಸ್ಟ್ರಿ ಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಆದರೆ ಬರಬರುತ್ತಾ ಹಾರ್ಮೋನಲ್ ಚೇಂಜಸ್ ನಿಂದ ನಮಿತಾ ಅವರು ದಪ್ಪಗಾಗುತ್ತಾ ಹೋದರು.
ಆ ಕಾರಣದಿಂದ ನಮಿತಾ ಅವರನ್ನು ಮಾದಕತೆಯಾಗಿ ತೋರಿಸಲು ಶುರುಮಾಡಿದ್ದರು. ಹೀಗಾಗಿ ನಮಿತಾ ಮಾದಕ ನಟಿ ಎಂದು ಕರೆಸಿಕೊಂಡರು. ಆದರೆ ತದನಂತರ ಅವಕಾಶ ಗಳು ಕಡಿಮೆ ಆಗ ತೊಡಗಿದವು. ಇದೇ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ನಮಿತಾ ಅವರ ಬಗ್ಗೆ ಕೆಟ್ಟ ಕಾಮೆಂಟ್ ಗಳು ಬರಲು ಆರಂಭ ಆಗಿತ್ತು. ಸಿನಿಮಾದಲ್ಲಿ ಅವಕಾಶ ಸಿಗದೆ ನಮಿತಾ ಅವರು ವಿಪರೀತ ಮ-ದ್ಯದ ಚಟ ಆರಂಭಿಸಿದ್ದಾರೆ.
ಹಾಗಾಗಿ ನಮಿತಾ ದಪ್ಪವಾಗಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಇದರಿಂದ ತೀರಾ ನೊಂದ ನಮಿತಾ ಆ-ತ್ಮಹ-ತ್ಯೆ ಗೆ ಮುಂದಾಗಿದ್ದರಂತೆ. ನಂತರ ತಾವೇ ಸೋಶಿಯಲ್ ಮೀಡಿಯಾದಲ್ಲಿ ತಾನು ದಪ್ಪಗಾಗಲು ಕುಡಿತ ಕಾರಣ ಅಲ್ಲ, ಹಾರ್ಮೋನಲ್ ಪ್ರಾಬ್ಲೆಂ ಎಂದು ಹೇಳಿಕೊಂಡಿದ್ದರು. ಇನ್ನು ನಮಿತಾ ಅವರು 2017 ರಲ್ಲಿ ತಿರುಪತಿಯಲ್ಲಿ ತಮ್ಮ ಬಹುಕಾಲದ ಗೆಳೆಯ ವೀರೇಂದ್ರ ಚೌಧರಿ ಎಂಬುವವರನ್ನು ವಿವಾಹವಾಗಿದ್ದಾರೆ. ಇದೀಗ ನಮಿತಾ ಅವರು ತಾಯಿಯಾಗಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಅದರ ಜೊತೆ ನಮಿತಾ ಅವರು ಮದುವೆ ನಂತರ ತನ್ನ ದೇಹದ ತೂಕ ಇಳಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ನಮಿತಾ ಅವರು, ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮಿಸ್ ಸೂರತ್ ಆಗಿ ಹೊರಹೊಮ್ಮಿದರು. ನಂತರ 2001 ರ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು. ಅಲ್ಲಿಂದ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ನಂತರ ಸಿನಿಮಾ ಲೋಕಕ್ಕೆ ಬಂದವರು. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.