ನಟಿ ಮಾಲಶ್ರೀ ಯವರ ‘ಒಳಗೆ ಸೇರಿದರೆ ಗುಂಡು ಹುಡುಗಯಾಗುವಳು ಗಂಡು’ ಈ ಹಾಡು ಇಂದಿಗೂ ಫೇಮಸ್. ಆದರೆ ಸಿನಿಮಾದಲ್ಲಿ ಅಭಿನಯಕ್ಕಾಗಿ ಹುಡುಗಿಯರು ಮ-ದ್ಯಪಾನವನ್ನು ಧೂ-ಮಪಾನವನ್ನು ಮಾಡಿದರೆ ಅದರಿಂದ ಅಷ್ಟೇನೂ ಎಫೆಕ್ಟ್ ಆಗಲ್ಲ. ಆದರೆ ಅದೇ ನಾಯಕಿಯರು ಕಂಠಪೂರ್ತಿ ಕುಡಿದು ಬೀದಿಯಲ್ಲಿ ರಂಪಾಟ ಮಾಡಿದರೆ ಅದು ನಿಜಕ್ಕೂ ಅವರ ಬಗೆಗಿನ ಗೌರವ ಅಭಿಮಾನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಆಲ್ಕೋಹಾಲ್ ಸೇವನೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿಲ್ಲ ಇಂದು ಸಾಕಷ್ಟು ಮಹಿಳೆಯರು ಕೂಡ ಈ ವಿಷಯದಲ್ಲಿ ಮುಂದೆ ಇದ್ದಾರೆ. ಆದರೆ ಎಲ್ಲಾ ನಟಿಯರು ಕುಡಿದು ಪಾರ್ಟಿ ಮಾಡಿ ಗಮ್ಮತ್ತು ಮಾಡುತ್ತಾರೆ ಎಂದೇ ಜನ ಭಾವಿಸುತ್ತಾರೆ ಆದರೆ ಈ ಅಭಿಪ್ರಾಯ ಖಂಡಿತ ತಪ್ಪು. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಎಷ್ಟು ದೊಡ್ಡ ಸ್ಟಾರ್ ನಟಿಯರು ಆಗಿದ್ದರು ಇದುವರೆಗೆ ಒಂದು ತೊಟ್ಟು ಎಣ್ಣೆಯನ್ನು ಮುಟ್ಟದ ನಟಿಯರು ಇದ್ದಾರೆ.
ಅವರ ಬಗ್ಗೆ ತಿಳಿದರೆ ನಿಮಗೆ ಖಂಡಿತವಾಗಿಯೂ ಅವರ ಮೇಲಿನ ಅಭಿಮಾನ ಇನ್ನಷ್ಟು ಜಾಸ್ತಿ ಆಗುತ್ತೆ. ನಟಿ ರಕ್ಷಿತಾ ಪ್ರೇಮ್ ಹಾಗೂ ರಚಿತಾ ರಾಮ್. ಚಂದನವನದ ಹೆಸರಾಂತ ನಟಿಯರು ಇವರು. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ನಟಿ ರಕ್ಷಿತಾ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೈನಲ್ಲಿ ಶಾಂಪೈನ್ ಹಿಡಿದು ವೇದಿಕೆಯ ಮೇಲಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಟ್ರೋಲ್ ಗಳೂ ಕೂಡ ಆಗಿದ್ದವು.
ಆದರೆ ಇದು ಕೇವಲ ಫೋಟೋಗೆ ಫೋಸ್ ಕೊಟ್ಟಿದ್ದೆ ಹೊರತು, ಇಷ್ಟು ದೊಡ್ಡ ಸ್ಟಾರ್ ನಟಿಯರು ಆಗಿದ್ದರು ರಚಿತಾ ರಾಮ್ ಆಗಲಿ ರಕ್ಷಿತಾ ಆಗಲಿ ಒಂದು ತೊಟ್ಟು ಆಲ್ಕೋಹಾಲ್ ಕೂಡ ಸೇವನೆ ಮಾಡಿಲ್ಲ. ಮುಂದಿನ ಹೆಸರು ನಟಿ ರಾಧಿಕಾ ಪಂಡಿತ್. ಕನ್ನಡಿಗರ ಅಚ್ಚು ಮೆಚ್ಚಿನ ನಟಿ ಈಕೆ. ಇದೀಗ ಸಿನಿಮಾ ರಂಗದಿಂದ ತುಸು ದೂರ ಉಳಿದಿರುವ ಇವರು ಕೂಡ ಇದುವರೆಗೂ ಮ-ದ್ಯಪಾನವನ್ನಾಗಲಿ ಧೂ-ಮಪಾನವನ್ನಾಗಲಿ ಮಾಡಿಲ್ಲ.
ಇನ್ನು ಇತ್ತೀಚಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಉದಯೋನ್ಮಖ ನಟಿ ಅಶಿಕಾ ರಂಗನಾಥ್. ಇವರು ಕೂಡ ಆಲ್ಕೋಹಾಲ್ ಸೇವನೆಯನ್ನು ಮಾಡುವುದಿಲ್ಲ. ಇನ್ನು ಸಕ್ಕತ್ ಬೋಲ್ಡ್ ಪಾತ್ರಗಳಲ್ಲಿಯು ಕಾಣಿಸಿಕೊಳ್ಳುವ ನಟಿಯರಾದ ಪ್ರಿಯಾಮಣಿ ಹಾಗೂ ಹರಿಪ್ರಿಯಾ. ಈ ನಟಿಯರೂ ಕೂಡ ಯಾವುದೇ ದು-ಶ್ಚಟಗಳಿಗೆ ಬ-ಲಿಯಾಗಿಲ್ಲ.
ಇನ್ನು ಕನ್ನಡದ ಪಡ್ಡೆ ಹುಡುಗರ ಕನಸಿನ ರಾಣಿ, ಮೋಹಕ ತಾರೆ ರಮ್ಯಾ ಇಷ್ಟು ದೊಡ್ಡ ಸ್ಟಾರ್ ನಟಿ ಆಗಿದ್ದರು ಯಾವತ್ತೂ ಮ-ದ್ಯಪಾನ ಮಾಡಿಲ್ಲ. ಅಪ್ಪಟ ಕನ್ನಡತಿ ಅಧಿತಿ ಪ್ರಭುದೇವ ಕೂಡ ಆಲ್ಕೋಹಾಲ್ ಸೇವನೆ ಮಾಡಲ್ಲ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸದ್ಯ ಬ್ರೇಕ್ ತೆಗೆದುಕೊಂಡಿರುವ ಪ್ರಣೀತಾ ಸುಭಾಷ್ ಕೂಡ ಆಲ್ಕೋಹಾಲ್ ಸೇವನೆ ಮಾಡಿದವರಲ್ಲ.
ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ಗಳಲ್ಲಿಯೂ ನಟಿಸಿರುವ ಶ್ರದ್ಧಾ ಶ್ರೀನಾಥ್ ಪಾರ್ಟಿಗಳಿಗೆ ಹೋದರೂ ಕುಡಿಯುವುದಿಲ್ಲ. ಹಾಗೆಯೇ ಇತ್ತೀಚಿಗೆ ತೆರೆಕಂಡ ಗುರುಶಿಷ್ಯರ ಸಿನಿಮಾ ನಾಯಕಿ ನಿಷ್ವಿಕಾ ನಾಯ್ಡು ಕೂಡ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸುತ್ತಾರೆ ಹೊರತು, ಯಾವ ಚ-ಟಗಳನ್ನೂ ಬೆಳೆಸಿಕೊಂಡಿಲ್ಲ.
ಇನ್ನು ಹಿರಿಯ ನಟಿಯರಾದ ಶೃತಿ ಆಗಲಿ ತಾರಾಮ್ಮ ಆಗಲಿ ಇವರ್ಯಾರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟು ವರ್ಷ ಇದ್ರೂ, ಸಾಕಷ್ಟು ಸಿನಿಮಾ ಇವೆಂಟ್ ಗಳಲ್ಲಿ ಭಾಗವಹಿಸಿದರು ಒಂದು ಹನಿ ಆಲ್ಕೋಹಾಲ್ ನ್ನೂ ಕೂಡ ಮುಟ್ಟಿಲ್ಲ. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.