PhotoGrid Site 1658052582101

ಜಿಮ್ ನಲ್ಲಿ ವರ್ಕೌಟ್ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡ ಸೀರಿಯಲ್ ನಟಿ ಶೋಭಾ ಶೆಟ್ಟಿ! ಇಲ್ಲಿವೆ ನೋಡಿ ಮುದ್ದು ಚೆಲುವೆಯ ಫೋಟೋಸ್!!

ಸುದ್ದಿ

ಧಾರವಾಹಿ ನೋಡುವ ವೀಕ್ಷಕರಿಗೆ ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಹಾಗೇ ಸ್ಟಾರ್ ಸುವರ್ಣದ ರುಕ್ಕು ಧಾರವಾಹಿಯಲ್ಲಿ ನಟಿಸಿದ ಶೋಭಾ ಶೆಟ್ಟಿ ಗೊತ್ತಿರಲೇ ಬೇಕು.‌ ಇವರು ಹೆಚ್ಚಿನ‌ ಮಂದಿಗೆ ತನುವಾಗಿಯೇ ಪರಿಚಯ. ಹೌದು, ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯ ತಂಗಿ ತನು ಪಾತ್ರ ಮಾಡಿದ್ದ ಶೋಭಾ ಶೆಟ್ಟಿ, ಅದರಿಂದ ಜನಪ್ರಿಯತೆ ಪಡೆದುಕೊಂಡವರು. ಶೋಭಾ ಶೆಟ್ಟಿಯವರು ಮೂಲತಃ ಮಂಗಳೂರಿನವರು.

ಇವರು, ಮೊದಲು ಹಾಸ್ಯ ಧಾರಾವಾಹಿ ಪಡುವಾರಳ್ಳಿ ಪಡ್ಡೆಗಳು ಅನ್ನುವ ಧಾರವಾಹಿಯಲ್ಲಿ ನಟಿಸಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಧಾರವಾಹಿ ನಂತರ ಶೋಭಾ ಶೆಟ್ಟಿ ಪೌರಾಣಿಕ ಧಾರಾವಾಹಿಯಾದ ಶ್ರೀಗುರು ರಾಘವೇಂದ್ರ ವೈಭವ ದಲ್ಲಿ ಪಂಕಜ ಆಗಿ ವೀಕ್ಷಕರ ಮನ ಸೆಳೆದಿದ್ದರು.‌ ಅದಾದ ನಂತರ ಕಾರ್ತಿಕ ದೀಪ ಧಾರಾವಾಹಿಯಲ್ಲಿ ಶೋಭಾ ಶೆಟ್ಟಿಯವರು, ದ್ವಿಪಾತ್ರದಲ್ಲಿ ನಟಿಸಿದ್ದರು. ‌ಅದಾದ ನಂತರ ದೀಪವೂ ನಿನ್ನದೇ ಗಾಳಿಯು ನಿನ್ನದೇ, ಗೃಹಲಕ್ಷ್ಮಿ ಧಾರವಾಹಿಯಲ್ಲಿ ವಿಲನ್ ಆಗಿ ನಟಿಸಿದ್ದರು.

ಅದಾದ ನಂತರವೇ ಶೋಭಾ ಶೆಟ್ಟಿ ನಟಿಸಿದ್ದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ.ಆದರೆ ಆ ಧಾರವಾಹಿಯಿಂದ ತನು‌ ಪಾತ್ರದಲ್ಲಿ ಮಿಂಚಿದ್ದ ಶೋಭಾ ಶೆಟ್ಟಿ, ಅದರಿಂದ ಅರ್ಧಕ್ಕೆ ಹೊರ ಬಂದಿದ್ದರು.‌ ಅಗ್ನಿಸಾಕ್ಷಿ ತನು ಪಾತ್ರ. ಮುಂದೆ ಕಾರಣಾಂತರಗಳಿಂದ ಶೋಭಾ ಅವರು ತನು ಪಾತ್ರದಿಂದ ಹೊರಬಂದರೂ ಜನ ಅವರನ್ನು ಇಂದಿಗೂ ಅದೇ ಪಾತ್ರದಿಂದ ಗುರುತಿಸುತ್ತಾರೆ. ಆ ಬಳಿಕ ಬಿಗ್ ಬ್ರೇಕ್ ನಂತರ ರುಕ್ಕುವಾಗಿ ಸ್ಟಾರ್ ಸುವರ್ಣದಲ್ಲಿ ನಟಿಸಿದ್ದರು. ಡಾನ್ಸಿಂಗ್ ರಿಯಾಲಿಟಿ ಶೋನಲ್ಲೂ ಶೋಭಾ ಶೆಟ್ಟಿ‌ ಕಾಣಿಸಿದ್ದರು.

PhotoGrid Site 1658052623728

ಇನ್ನು ಕನ್ನಡ ಭಾಷೆಯ ಅನೇಕ ನಟಿಯರು ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ. ಬೇರೆ ರಾಜ್ಯದಲ್ಲಿ ಕರ್ನಾಟಕದ ಕಲಾವಿದರಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ.‌ ಹಾಗಾಗಿ ಕನ್ನಡದಲ್ಲಿ ಪೋಷಕ ಪಾತ್ರ, ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿದವರು ತೆಲುಗು, ತಮಿಳಿನಲ್ಲಿ ಲೀಡ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಲ್ಲಿ ಸಂಭಾವನೆ ಕೂಡ ಚೆನ್ನಾಗಿದೆಯಂತೆ. ಇಂತಹ ಕಾರಣಕ್ಕೆ ಕನ್ನಡದ ಕಲಾವಿದರು ಪರಭಾಷೆಗಳಲ್ಲಿಯೇ ಸಾಕಷ್ಟು ಬ್ಯುಸಿಯಾಗುತ್ತಿದ್ದಾರೆ.

ಅದೇ ರೀತಿ ಶೋಭಾ ಶೆಟ್ಟಿ ಕೂಡ ತೆಲುಗು ಧಾರವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ತೆಲುಗಿನಲ್ಲಿಯೇ ಅವರು ಸಕತ್ ಬ್ಯುಸಿಯಾಗಿದ್ದಾರೆ. ತೆಲುಗಿನ ‘ಲಹಿರಿ ಲಹಿರಿ ಲಹಿರಿಲೋ’ ಧಾರಾವಾಹಿಯಲ್ಲಿ ಅವರು ಲೀಡ್ ಪಾತ್ರದಲ್ಲಿ ಮಾಡಿದ್ದಾರೆ. ಹೀಗೆ ಸಕ್ಸಸ್ ಫುಲ್ ಆಗಿ‌ ಕನ್ನಡ ಹಾಗೂ ತೆಲುಗು ಧಾರವಾಹಿ ಲೋಕದಲ್ಲಿ ಮಿಂಚುತ್ತಿರುವ ಶೋಭಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿದ್ದಾರೆ.

ಇವರು ಹೆಚ್ಚಾಗಿ ರೀಲ್ಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಇನ್ನು ಅನೇಕ ಫೋಟೋ ಶೂಟ್ ಗಳಲ್ಲಿ ಕೂಡ ಶೋಭಾ ಶೆಟ್ಟಿ ಶೈನ್ ಆಗಿದ್ದಾರೆ. ಶೋಭಾ ಶೆಟ್ಟಿಯವರು ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸ್ವಲ್ಪ‌ಚಬ್ಬಿ ಚಬ್ಬಿಯಾಗಿ ಇದ್ದರು.‌ ಆದರೆ ಇದೀಗ ತುಂಬಾ ಸ್ಲಿಮ್ ಆಗಿದ್ದಾರೆ. ಇದಕ್ಕೆ ಕಾರಣ ಅವರ ವರ್ಕೌಟ್.

PhotoGrid Site 1658052600917

ಹೌದು, ಜಿಮ್ ಹೋಗಿ ವರ್ಕೌಟ್ ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಇದೀಗ ತಮ್ಮ ಪೋಸ್ಟ್ ವರ್ಕೌಟ್ ಫೋಟೊ ಒಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಾಹಿತಿ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *