PhotoGrid Site 1667793177002

ಜಿಮ್ ನಲ್ಲಿ ಅತಿಲೋಕ ಸುಂದರಿ ಜಾನ್ವಿ ಕಪೂರ್ ಬೆವರಿಳಿಸುವ ಅವತಾರ ನೋಡಿ ತಲೆ ತಿರುಗಿ ಬಿದ್ದ ಜಿಮ್ ಮಾಲೀಕ! ವಿಡಿಯೋ ಸಿಕ್ಕಾಪಟ್ಟೆ ಓಡಾಡುತ್ತಿದೆ ನೋಡಿ!!

ಸುದ್ದಿ

ದಿವಂಗತ ಬಹುಭಾಷಾ ನಟಿ ಶ್ರೀದೇವಿ ಅವರನ್ನ ಯಾರು ಮರೆಯುವ ಹಾಗೆಯೇ ಇಲ್ಲ ಅವರ ಅತ್ಯದ್ಭುತ ಅಭಿನಯ ಇಂದಿಗೂ ನಮ್ಮ ಕಣ್ಮುಂದೆ ಇದೆ. ನಟಿ ಶ್ರಿದೇವಿಯಂತೆ, ಮಗಳು ಜಾನ್ವಿ ಕಪೂರ್ ಕೂಡ ಅಮ್ಮನಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಒಂದಾದ ಮೇಲೆ ಮೊಂದರಂತೆ ಹೊಸ ಹೊಸ ರೀತಿಯ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಅದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತೀಯ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಮಗಳು ಜಾಹ್ನವಿ ಕಪೂರ್. ಬಾಲಿವುಡ್ ಇಂಡಸ್ಟ್ರಿಯ ಉದಯೋನ್ಮುಖ ನಟಿ ಇವರು. ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ನಟಿ ಜಾಹ್ನವಿ ಕಪೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ನಟಿ ಜಾಹ್ನವಿ ಕಪೂರ್ ಈಗಾಗಲೇ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದು, ಅವರ ಸಹೋದರಿ ಖುಷಿ ಕಪೂರ್ ಕೂಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಜಾಹ್ನವಿ ಕಪೂರ್ ಅಭಿನಯದ ಗುಡ್ ಲಕ್ ಜೆರ್ರಿ ಓಟಿಟಿ ಯಲ್ಲಿ ಬಿಡುಗಡೆ ಕಂದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಜಾನ್ವಿ ಕಪೂರ್ ಧಡಕ್, ರೂಹಿ, ಗುಂಜನ್ ಸೆಕ್ಸಿನ ಮೊದಲಾದ ಚಿತ್ರಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.

ಇದೀಗ ಮಿಲಿ ಸಿನಿಮಾ ಕೂಡ ರಿಲೀಸ್ ಗೆ ಸಿದ್ದವಾಗಿದೆ. ಜಾನ್ವಿ ನಟನೆಯ ಸಿನಿಮಾಗಳು ಅಷ್ಟು ಹಿಟ್ ಆಗದೇ ಇದ್ದರೂ ಕೂಡ ಅವರು ಹೆಚ್ಚು ಹೆಚ್ಚು ಅವಕಾಶ ಪಡೆದುಕೊಳ್ಳುವಲ್ಲಿ ಸಕ್ಸೆಸ್ ಆಗಿದ್ದಾರೆ. ಅಷ್ಟರ ಮಟ್ಟಿಗೆ ಜಾನ್ವಿ ಕಪೂರ್ ಜನರ ಪ್ರೀತಿ ಸಂಪಾದಿಸಿದ್ದಾರೆ. ಜಾಹ್ನವಿ ಕಪೂರ್ ಸಕ್ಕತ್ ಸ್ಟೈಲಿಶ್, ತುಂಬಾನೆ ಹಾಟ್ ಹಾಗೂ ಬೋಲ್ಡ್ ನಟಿ. ತಮ್ಮ ವಿವಿಧ ಬಟ್ಟೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಸಾಂಪ್ರದಾಯಿಕ ಉಡುಗೆ ಇರಲಿ ಅಥವಾ ಆಧುನಿಕ ಉಡುಗೆಯಾಗಲಿ ಎಲ್ಲವನ್ನೂ ತಮಗೆ ಒಪ್ಪುವಂತೆ ಡಿಸೈನ್ ಮಾಡಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಜಾಹ್ನವಿ ಕಪೂರ್ ಆರೆಂಜ್ ಬಣ್ಣ ಡ್ರೆಸ್ ಒಂದನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ಜಾಹ್ನವಿ ಕಪೂರ್ ಅವರು ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಆಕ್ಟಿವ್ ಆಗಿದ್ದು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಅವರ ಹಾಟ್ ಪೋಟೋಶೂಟ್ ಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಇರುತ್ತವೆ. ಜಾಹ್ನವಿ ಕಪೂರ್ ಅಮ್ಮ ಶ್ರೀದೇವಿಗಿಂತ ಬಹಳ ಡಿಫರೆಂಟ್. ಆದರೆ ಅಮ್ಮನಂತೆ ಸಿನಿಮಾ ರಂಗದಲ್ಲಿ ಹೆಚ್ಚು ಕಾಲ ಇರುರುವ ಮಹದಾಸೆಯನ್ನೂ ಹೊತ್ತಿದ್ದಾರೆ. ಅಂದಹಾಗೆ ನಟಿ ಜಾನ್ವಿ ಕಪೂರ್ ಫಿಟ್ನೆಸ್ ಫ್ರೀಕ್ ಕೂಡ ಹೌದು. ಸರಿಯಾದ ಡಯಟ್ ಹಾಗೂ ಜಿಮ್ ಚಟುವಟಿಕೆಗಳನ್ನು ಮಾಡುತ್ತಾರೆ.

ಇತ್ತೀಚಿಗೆ ಶಾರ್ಟ್ ಹಾಗೂ ಸ್ಪೆಗೆಟಿವ್ ಧರಿಸಿ ಜೀವ್ ನಲ್ಲಿ ಬೆವರಿಳಿಸಿರುವ ರೀತಿ ನೋಡಿ ಅದೆಷ್ಟೋ ಜನ ಯುವಕರು ಜಿಮ್ ಗೆ ಜಾಯಿನ್ ಆಗಿದ್ದಾರಂತೆ! ಹೌದು, ಜಾನ್ವಿಯವರು ಜಿಮ್ ನಲ್ಲಿ ವರ್ಕೌಟ್ ಮಾಡುತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿಯೂ ಜಾನ್ವಿ ಸಿಕ್ಕಾಪಟ್ಟೆ ಹಾಟ್ ಆಗಿಯೇ ಕಾಣಿಸುತ್ತಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಜಾನ್ವಿ ಫೇಮ್ ಅಂತೂ ಹೆಚ್ಚುತ್ತಿದೆ.

Leave a Reply

Your email address will not be published. Required fields are marked *