ಸ್ನೇಹಿತರೆ, ಇಂದು ಸೋಶಿಯಲ್ ಮೀಡಿಯಾ ಒಂದು ಇದ್ರೆ ಸಾಕು ಜನ ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ಏನೇನೋ ಸರ್ಕಸ್ ಮಾಡುತ್ತಾರೆ ಕೆಲವರು ನಿಜವಾಗಿಯೂ ತಮ್ಮ ಟ್ಯಾಲೆಂಟ್ ತೋರಿಸಿದರೆ ಇನ್ನೂ ಕೆಲವರು, ತಮ್ಮಲ್ಲಿ ಪ್ರತಿಭೆ ಇದೆ ಎನ್ನುವ ಭ್ರಮೆಯಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಮಾಡುತ್ತಾರೆ. ಹಾಗಾಗಿ ಸಮಾಜಿಕ ಜಾಲತಾಣದಲ್ಲಿ ನಿಜವಾಗಿ ಟ್ಯಾಲೆಂಟ್ ಇರುವವರು ಹಾಗೂ ಅನಗತ್ಯ ವಿಡಿಯೋ ಮಾಡುವವರು ಕೂಡ ಲಕ್ಷಾಂತರ ಲೈಕ್ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ.
ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ನಟಿಯರು ಇನ್ನಷ್ಟು ಫೇಮಸ್ ಆಗುತ್ತಾರೆ. ಸಾಮಾನ್ಯರು ಸೆಲಿಬ್ರೆಟಿಗಳಾಗುತ್ತಾರೆ. ಹೀಗೆ ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ ನಟಿ ಅಶು ರೆಡ್ಡಿ. ಅಶು ರೆಡ್ಡಿ ಅಂದ್ರೆ ಮುಖ್ಯವಾಗಿ ನೆನಪಿಗೆ ಬರುವುದೇ ತೆಲುಗು ಭಾಷೆಯ ಬಿಗ್ ಬಾಸ್. ಹೌದು ತೆಲುಗು ಬಿಗ್ ಬಾಸ್ ಸೀಸನ್ 3ರಲ್ಲಿ ಅಶು ರೆಡ್ಡಿ ಭಾಗವಹಿಸಿದ್ದರು. ಇವರು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾರೆ.
ಅಶು ರೆಡ್ಡಿಯವರು ತೆಲುಗು ಸಿನಿಮಾ ಒಂದರಲ್ಲಿಯು ಕೂಡ ಅಭಿನಯಿಸಿದ್ದಾರೆ. ಅಶು ರೆಡ್ಡಿ ನೋಡುವುದಕ್ಕೆ ಸ್ವಲ್ಪ ಸಮಂತ ತರವೇ ಇರುವುದರಿಂದ ಅವರನ್ನು ಜೂನಿಯರ್ ಸಮಂತಾ ಎಂದೇ ಗುರುತಿಸಲಾಗುತ್ತೆ. ಅಶು ರೆಡ್ಡಿ ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಅಶು ರೆಡ್ಡಿ ವಿಡಿಯೋ ಕ್ರಿಯೇಟರ್ ಕೂಡ ಆಗಿದ್ದು ಸಾಕಷ್ಟು ವಿಡಿಯೋಗಳನ್ನು ಮಾಡಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ ವಿವಿಧ ಭಂಗಿಯ ಫೋಟೋಗಳನ್ನು ತೆಗೆಸಿ ಅವುಗಳನ್ನ ಪೋಸ್ಟ್ ಮಾಡುತ್ತಾರೆ. ಅಶು ರೆಡ್ಡಿ ಸಾಕಷ್ಟು ಹಾಟ್ ಫೋಟೋಶೂಟ್ ಕೂಡ ಮಾಡಿಸುತ್ತಾರೆ ಈಗಾಗಲೇ ಅವರ ಫೋಟೋಗಳಿಗೆ ಹಾಗೂ ಫಿಲ್ಟರ್ ಇಲ್ಲದ ಮಾತುಗಳಿಗೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ. ಅಶೋಕ್ ರೆಡ್ಡಿ ಮಾತನಾಡುವಾಗ ಯಾವುದೇ ಹಿಂಜರಿಕೆ ಇಲ್ಲದೆ ಮಾತನಾಡುತ್ತಾರೆ ಅವರು ಹೇಳುವ ಹೇಳಿಕೆಗಳು ಹಲವು ಬಾರಿ ಟ್ರೋಲ್ ಆಗುತ್ತದೆ.
ನಟಿ ಅಶು ರೆಡ್ಡಿ ಇತ್ತೀಚೆಗೆ ಕಪ್ಪು ಬಣ್ಣದ ಸೀರೆ ಉಟ್ಟು ಬಿಳಿ ಬಣ್ಣದ ರವಿಕೆ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ ಇದರಲ್ಲಿ ಹೆಚ್ಚಾಗಿ ಬೆನ್ನಿನ ಭಾಗವನ್ನು ತೋರಿಸಿ ಕೊಟ್ಟಿದ್ದಾರೆ. ಇನ್ನು ಈ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಶು ರೆಡ್ಡಿ ಹಲವರಿಗೆ ನನ್ನ ಬೆನ್ನಿನ ಭಾಗ ತುಂಬಾ ಇಷ್ಟ ಹಾಗಾಗಿಯೇ ಬೆನ್ನಿನ ಹಿಂದೆ ಮಾತನಾಡಿಕೊಳ್ಳುತ್ತಾರೆ ಅಂತ ವ್ಯಂಗ್ಯ ಮಾಡಿದ್ದಾರೆ.
ಇದು ಅವರ ಬಗ್ಗೆ ಟ್ರೋಲ್ ಮಾಡುವ ಹಾಗೂ ಅವರ ಹಿಂದುಗಡೆಯಿಂದ ಮಾತನಾಡುವವರಿಗೆ ಆಶು ರೆಡ್ಡಿ ಕೊಟ್ಟ ಚಮಕ್. ಇನ್ನು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟ ಎನಿಸಿಕೊಂಡಿರುವ ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿ ಅಶು ರೆಡ್ಡಿ. ತಮ್ಮ ಎದೆಯ ಹಿಂಭಾಗದಲ್ಲಿ ಬೆನ್ನಿನ ಬಳಿ ಪವನ್ ಕಲ್ಯಾಣ್ ಎನ್ನುವ ಹೆಸರನ್ನು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ ಅಶು ರೆಡ್ಡಿ.
ಪವನ್ ಕಲ್ಯಾಣ್ ಅವರ ಸಿನಿಮಾದ ಪ್ರಮೋಷನ್ ವಿಡಿಯೋಗಳನ್ನು ಕೂಡ ಆಗಾಗ ಪೋಸ್ಟ್ ಮಾಡುತ್ತಾರೆ. ಇನ್ನು ಈ ಕಾರಣಕ್ಕೂ ಕೂಡ ಅಶು ರೆಡ್ಡಿ ಟ್ರೊಲ್ ಆಗಿದ್ದಾರೆ. ಸದ್ಯ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿಯೇ ಹೆಚ್ಚು ಆಕ್ಟಿವ್ ಆಗಿರುವ ಮನಮೋಹಕ ನಟಿ ಅಶು ರೆಡ್ಡಿ ಅವರ ಹಾಟ್ ಫೋಟೋಗಳನ್ನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ನೋಡಬಹುದು.