ಈ ಜಗತ್ತಿನಲ್ಲಿ ಇರುವ ಮನುಷ್ಯರಲ್ಲಿ ಯಾರು ಒಂದೇ ತರ ಇರಲು ಸಾಧ್ಯವೇ ಇಲ್ಲ. ಕೈಯ ಐದು ಬೆರಳು ಹೇಗೆ ಸರಿ ಇರುವುದಿಲ್ಲವೋ ಹಾಗೆ ನಾವು ಕೂಡ. ಕುಳ್ಳ ಎತ್ತರ ದಪ್ಪ ಸಣ್ಣ ಹೀಗೆ ವಿವಿಧ ಬಗೆಯಲ್ಲಿ ಮನುಷ್ಯನ ದೇಹ ಚರಿಗೆ ಇರುತ್ತೆ. ಅದರಂತೆ ಜಗತ್ತಿನ ಶಾರ್ಟೆಸ್ಟ್ ಗರ್ಲ್ಸ್ ಅಂತ ವರ್ಡ್ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿರುವ ಜ್ಯೋತಿ ಆಂಗೇ ಬಗ್ಗೆ ನೀವು ಕೇಳಿರಬಹುದು. ಇವರು ಕೇವಲ ಎರಡು ಪಾಯಿಂಟ್ ಎಂಟು ಎತ್ತರವಾಗಿದ್ದರು ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಜ್ಯೋತಿ ಆಂಗೇ ನಾಗಪುರ ಮೂಲದವರು. ಇವರು ಹುಟ್ಟಿದ್ದು ಡಿಸೆಂಬರ್ 16, 1993. ಇಂದು ಜಗತ್ತಿನ ಅತ್ಯಂತ ಸಣ್ಣ ಯುವತಿ ಎಂದು ಕರೆಸಿಕೊಂಡಿರುವ ಜ್ಯೋತಿ ಅಂಗೆ ಅವರು ತುಂಬಾ ಒಳ್ಳೆದಿದ್ದರೆ ಎನ್ನುವ ಕಾರಣಕ್ಕೆ ಬೇಸರ ಪಟ್ಟಿಕೊಳ್ಳುವ ಬದಲು ಅದನ್ನೇ ಸವಾಲಾಗಿ ಸ್ವೀಕರಿಸಿರುವ ದಿಟ್ಟ ಮಹಿಳೆ. ಜ್ಯೋತಿ ಆಂಗೇ ಈವರೆಗೆ ಸಾಕಷ್ಟು ಸಂದರ್ಶನಗಳನ್ನು ನೀಡಿದ್ದಾರೆ. ಜ್ಯೋತಿ ಈಗಾಗಲೇ ತುಂಬಾ ಫೇಮಸ್ ಆಗಿದ್ದು ಹಿಂದಿ ಬಿಗ್ ಬಾಸ್ ಸೀಸನ್ 6 ನಲ್ಲಿ ಕೂಡ ಭಾಗವಹಿಸಿದ್ದರು.
ಜ್ಯೋತಿ ಆಂಗೇ ಈಗಾಗಲೇ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ ಹಾಲಿವುಡ್ ನ ಒಂದು ಹಾರರ್ ಸಿನಿಮಾದಲ್ಲಿ ಜ್ಯೋತಿ ಆಂಗೇ ಅಭಿನಯಿಸಿರುವುದು ನಿಜಕ್ಕೂ ವಿಶೇಷ. ಇನ್ನು ಕೆಲವು ಆಲ್ಬಮ್ ಸಾಂಗ್ ನಲ್ಲಿಯೂ ಕೂಡ ಕಾಣಿಸಿಕೊಂಡಿರುವ ಜ್ಯೋತಿ ಅವರಿಗೆ ತಾನು ಮನೋರಂಜನಾ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಬೇಕು ಎನ್ನುವುದೇ ಕನಸು. ತಮ್ಮ ಕನಸಿನ ಮೊದಲ ಮೆಟ್ಟಿಲು ಎನ್ನುವಂತೆ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದರು.
ನೋಡಲು ಅತ್ಯಂತ ಸಣ್ಣಗೆ ಚಿಕ್ಕ ಮಗುವಿನ ಹಾಗೆ ಇರುವ ಜ್ಯೋತಿ ಆಂಗೇ ತುಂಬಾನೇ ಪ್ರತಿಭಾವಂತೆ. ನನ್ನನ್ನ ಯಾರು ಎಷ್ಟೇ ಡಿ ಮೋಟಿವೇಟ್ ಮಾಡಿದ್ರು ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಂದು ನಾನು ಕುಳ್ಳಗೆ ಇದ್ದೇನೆ ಎನ್ನುವ ಕಾರಣಕ್ಕೆ ಗಿನ್ನಿಸ್ ದಾಖಲೆ ಎಲ್ಲಿ ನನ್ನ ಹೆಸರು ಸೇರ್ಪಡೆಯಾಗಿದೆ ಅದಕ್ಕೆ ನನಗೆ ಖುಷಿ ಇದೆ ಅಂತ ಜ್ಯೋತಿ ಆಂಗೇ ಹೇಳಿಕೊಳ್ಳುತ್ತಾರೆ.
ಇನ್ನು ಜ್ಯೋತಿ ಆಂಗೇ ಬಾಲಿವುಡ್ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ ಅಲ್ಲಿಯೂ ಕೂಡ ಸಾಕಷ್ಟು ಎಂಟರ್ಟೈನ್ಮೆಂಟ್ ನೀಡಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಜ್ಯೋತಿ ಆಂಗೇ ಸಲ್ಮಾನ್ ಖಾನ್ ಅವರ ಜೊತೆಗೆ ಮಾತನಾಡಿದ ಒಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರೀತಿಯಿಂದ ಸಲ್ಮಾನ್ ಖಾನ್ ಅವರನ್ನು ಸಲ್ಲು ಅಂತ ಜ್ಯೋತಿ ಕರೆಯುವ ಪರಿ ನಿಜಕ್ಕೂ ಚೆನ್ನಾಗಿತ್ತು.
ನಾನು ಸಲ್ಲು ಅಲ್ಲ ಸಲ್ಮಾನ್ ಅಂತ ಸಲ್ಮಾನ್ ಖಾನ್ ಹೇಳಿದ್ರೆ ಜ್ಯೋತಿ ಪ್ರೀತಿಯಿಂದ ಸಲ್ಲು ಅಂತ ಕರೆಯಬಹುದು ಅಲ್ವಾ ಅಂತ ಕೇಳುತ್ತಾರೆ. ಅಲ್ಲದೆ ಸಲ್ಮಾನ್ ಖಾನ್ ಅವರಿಗೆ ಒಂದು ಹಿಂದಿ ಶಾಯರಿ ಕೂಡ ಹೇಳುತ್ತಾರೆ ಜ್ಯೋತಿ ಅಂಗೆ. ನೀವು ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋವನ್ನು ಎಲ್ಲಿ ನೋಡಬಹುದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಜ್ಯೋತಿ ಅಂಗೆ ತಮ್ಮ ದೈಹಿಕ ಊನವನ್ನೂ ಮೀರಿ ಬೆಳೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ.
View this post on Instagram