ಈ ಹಿಂದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಟಿವಿ ಇದ್ದು ಟಿವಿಯಲ್ಲಿ ಸಿನಿಮಾ ಧಾರವಾಹಿಗಳನ್ನ ನೋಡಿಕೊಂಡು ಜನ ಕಾಲ ಕಳೆಯುತ್ತಿದ್ದರು. ಆದರೆ ಒಮ್ಮೆ ಕರೆಂಟ್ ಹೋಯ್ತು ಅಂದ್ರೆ ಮುಗೀತು ಯಾವ ಮನೋರಂಜನೆಯು ಇರುತ್ತಿರಲಿಲ್ಲ. ಅದರಲ್ಲೂ ಮಳೆಗಾಲದಲ್ಲಂತೂ ಒಮ್ಮೆ ಕರೆಂಟ್ ಹೋದ್ರೆ ಮತ್ತೆ ವಾಪಸ್ ಬರಲು ಮೂರು ದಿನ ಆದ್ರೂ ಆಗಬಹುದು. ಆದರೆ ಜನರ ಈ ಎಲ್ಲಾ ಸಮಸ್ಯೆಗೆ ಪರ್ಯಾಯವಾಗಿ ಬಂದಿದ್ದೆ ಮೊಬೈಲ್ – ಇಂಟರ್ನೆಟ್.
ಇದೀಗ ಕರೆಂಟ್ ಹೋಯ್ತು ಅಂತ ಜನ ತಲೆ ಕೆಡಿಸಿಕೊಳ್ಳುವ ಹಾಗಿಲ್ಲ. ಕೈಯಲ್ಲಿ ಮೊಬೈಲ್ ಒಂದಿದ್ದರೆ ಸಾಕು ಇಡೀ ಪ್ರಪಂಚವೇ ಕೈಯಲ್ಲಿ ಇದ್ದಹಾಗೆ ತಮ್ಮ ಬೆರಳ ತುದಿಯಲ್ಲಿ ಪ್ರಪಂಚದ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಮಟ್ಟಿಗೆ ಇಂದು ಇಂಟರ್ನೆಟ್ ಸಹಾಯಕಾರಿಯಾಗಿದೆ. ಕರೆಂಟ್ ಇಲ್ಲ ಅಂತ ಟಿವಿ ನೋಡದೆ ಇರಬೇಕಾಗಿಲ್ಲ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಅದರಿಂದಲೇ ಈ ಎಲ್ಲಾ ಮನೋರಂಜನೆಯು ಸಿಕ್ಕಿಬಿಡುತ್ತೆ.
ಹೌದು, ಇಂದು ಮೊಬೈಲ್ ನಿಂದಾಗಿ ನಾವು ಯಾವುದೇ ಸ್ಥಳದಲ್ಲಿ ಕುಳಿತು ನಮಗೆ ಬೇಕಾದ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದರಲ್ಲೂ ಸಾಮಾಜಿಕ ಜಾಲತಾಣದಿಂದಾಗಿ ಜನರು ಇಂದು ರಾತ್ರೋ ರಾತ್ರಿ ಸೆಲೆಬ್ರಿಟಿಗಳಾಗಿ ಬಿಡುತ್ತಿದ್ದಾರೆ. ಗೂಗಲ್ ಮೂಲಕ ಯಾವುದೇ ಮಾಹಿತಿಯನ್ನ ಬೇಕಾದರೂ ನಾವೇ ಪಡೆದುಕೊಳ್ಳಬಹುದು. ಇದೀಗ ಎಷ್ಟು ಮಂದಿ ಯಾವುದೇ ಕಾಯಿಲೆಗೆ ವೈದ್ಯರನ್ನೇ ಸಂಪರ್ಕಿಸದೆ ಔಷಧಿ ತೆಗೆದುಕೊಳ್ಳುವ ಮಟ್ಟಕ್ಕೆ ಇಂಟರ್ನೆಟ್ ಬಳಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದು ಕೆಟ್ಟದು ಎಲ್ಲವೂ ಲಭ್ಯ. ನಮಗೆ ಯಾವುದು ಬೇಕು ಅದನ್ನ ಅಷ್ಟೇ ನಾವು ಆಯ್ದುಕೊಳ್ಳಬಹುದು. ಇಂದು ಸಾಮಾಜಿಕ ಜಾಲತಾಣವನ್ನು ಕೆಲವರು ಕೇವಲ ಮನೋರಂಜನೆಗಾಗಿ ಬಳಸಿದರೆ ಇನ್ನೂ ಕೆಲವರು ಹಣ ಮಾಡುವುದಕ್ಕೂ ಬಳಸುತ್ತಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಉತ್ಪನ್ನಗಳ ಪ್ರಮೋಷನ್ ಮಾಡುವುದರ ಮೂಲಕ ಅಥವಾ ವಿಡಿಯೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಕೂಡ ಗಳಿಸಬಹುದು.
ಇಂದು ಎಲ್ಲಾ ಸಿನಿಮಾ ಸ್ಟಾರ್ ಗಳಿಗಿಂತಲೂ ಸಾಮಾನ್ಯರೇ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿದ್ದಾರೆ. ಎಲ್ಲರಿಗೂ ಲಕ್ಷಗಟ್ಟಲೆ ಫಾಲೋಗಳು ಕೂಡ ಇರುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ತಮ್ಮ ಬಳುಕುವ ಸೊಂಟ ಹಾಗೂ ಮೈಮಾಟದಿಂದ ನೃತ್ಯಗಳ ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರಿಂದ ಅವರ ಅಭಿಮಾನಿ ಬಳಗ ದಿನ ದಿನಕ್ಕೆ ಹೆಚ್ಚಾಗುತ್ತದೆ.
ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸೋಶಿಯಲ್ ಮೀಡಿಯಾಗೆ ಕನೆಕ್ಟ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಅನ್ನೋ ಅಂತಹ ವೇದಿಕೆ ಹಾಡು, ನೃತ್ಯ, ನಟನೆ ಇವುಗಳಲ್ಲಿ ಆಸಕ್ತಿ ಇರುವವರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿ ಕೊಡುತ್ತೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುವುದರ ಮೂಲಕ ಇಂದು ಅದೆಷ್ಟೋ ಜನ ಫೇಮಸ್ ಆಗಿದ್ದಾರೆ. ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದು ಸಿನಿಮಾ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮೂಲಕ ವಿಡಿಯೋ ಅಪ್ಲೋಡ್ ಮಾಡುತ್ತಾರೆ.
ಇನ್ನು ಶಾಲಾ ಕಾಲೇಜು ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ. ಹೀಗೆ ಕ್ಲಾಸ್ ರೂಮಿನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕ್ಲಾಸ್ ರೂಮಿನಲ್ಲಿ ಶಾಲೆಯ ಯೂನಿಫಾರ್ಮ್ ನಲ್ಲಿಯೇ ಅತ್ಯದ್ಭುತವಾಗಿ ಸ್ಟೆಪ್ ಹಾಕಿದ್ದಾರೆ. ಇವರಿಬ್ಬರ ಡ್ಯಾನ್ಸ್ ಕಾಂಬಿನೇಷನ್ ತುಂಬಾನೇ ಚೆನ್ನಾಗಿತ್ತು ನೀವು ಈ ವಿಡಿಯೋದಲ್ಲಿ ಈ ಮಕ್ಕಳ ಅದ್ಭುತ ನೃತ್ಯವನ್ನು ನೋಡಬಹುದು. ಈ ವಿಡಿಯೋ ನೋಡಿ ಎಂಜಾಯ್ ಮಾಡಿ.