ನ್ನಡ ಚಿತ್ರರಂಗದ ಖ್ಯಾತ ನಟಿ ಸೋನು ಗೌಡ, ಇವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಫೇಮಸ್ ಆಗಿದ್ದು ಜೊತೆ ಜೊತೆಯಲಿ ಧಾರಾವಾಹಿಯ ರಾಜನಂದಿನಿ ಪಾತ್ರದ ಮೂಲಕ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ರಾಜನಂದಿನಿ ಪಾತ್ರ ಮುಗಿದ ಬಳಿಕ ಇದೀಗ ಸೋನು ಗೌಡ ಅವರು ಮತ್ತೊಂದು ಹೊಸ ಸಿನಿಮಾ ಮೂಲಕ ವೀಕ್ಷಕರ ಎದುರು ಬರಲಿದ್ದಾರೆ. ಅದು ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ. ಈ ಸಿನಿಮಾ ಕೆಲವು ತಿಂಗಳುಗಳ ಹಿಂದೆ ಶುರುವಾಗಿತ್ತು. ಹಿರಿಯನಟಿ ಪ್ರೇಮಾ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸೋನು ಗೌಡ ಅವರು ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರ ಸೋನು ಗೌಡ ಅವರಿಗೆ ನಿಜ ಜೀವನಕ್ಕೆ ಬಹಳ ಹತ್ತಿರವಾದ ಪಾತ್ರ ಆಗಿತ್ತಂತೆ. ಮನುಷ್ಯರ ಸಂಬಂಧಗಳು, ಮದುವೆ, ವಿಚ್ಛೇದನ, ಇವುಗಳ ಕುರಿತು ಕಥೆ ಇದ್ದು, ಸೋನುಗೌಡ ಅವರು ಇದೇ ಮೊದಲ ಬಾರಿಗೆ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಈ ಸಿನಿಮಾದ ಪಾತ್ರ ಸೋನು ಗೌಡ ಅವರಿಗೆ ಬಹಳ ಕಾಡಿದ ಪಾತ್ರಗಳಲ್ಲಿ ಒಂದು ಎಂದು ಪ್ರೆಸ್ ಮೀಟ್ ನಲ್ಲಿ ತಿಳಿಸಿದ್ದಾರೆ ನಟಿ ಸೋನು ಗೌಡ.
ಸೋನು ಗೌಡ ಅವರು ನಿಜ ಜೀವನದಲ್ಲಿ ಮದುವೆಯಿಂದ ಬಹಳ ನೋವು ಅನುಭವಿಸಿದ್ದಾರೆ, ಪತಿಗೆ ವಿಚ್ಛೇದನ ನೀಡಿದ್ದು, ಆ ಸಮಯದಲ್ಲಿ ಸೋನು ಅವರಿಗೆ ಬಹಳ ಕಷ್ಟವಾಗಿತ್ತು ಎಂದು ಈಗಾಗಲೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಸೋನು ಗೌಡ ಅವರು ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ಸಂಬಂಧಿಸಿದ ಹಾಗೆ, ಮತ್ತೊಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಮಾತನಾಡಿ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ರಾಪಿಡ್ ಫೈರ್ ರೌಂಡ್ ನಲ್ಲಿ ನಮ್ಮ ಸ್ಯಾಂಡಲ್ ವುಡ್ ನಟರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ.
ಇತ್ತೀಚಿನ ದಿನಗಳಲ್ಲಿ ಬಂದಿರುವ ಹೀರೋಗಳಲ್ಲಿ ಸೋನು ಅವರ ಫೇವರೆಟ್ ಪೃಥ್ವಿ ಅಂಬಾರ್ ಎಂದು ಹೇಳಿದ್ದಾರೆ. ಯಾವ ನಟನ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸೋನು ಗೌಡ, “ಚಿಕ್ಕ ವಯಸ್ಸಿನಿಂದಾನು ಅಪ್ಪು ಸರ್ ಜೊತೆ ಕೆಲಸ ಮಾಡಬೇಕು ಅಂತ ಆಸೆ ಇತ್ತು. ಈಗ ಆ ಥರ ಯಾವುದು ಇಲ್ಲ.. ಯಾರು ನನಗೆ ಕೆಲಸ ಕೊಟ್ರು ಅವರ ಜೊತೆ ಕೆಲಸ ಮಾಡ್ತೀನಿ..”ಎಂದಿದ್ದಾರೆ. ಇನ್ನು ಎಲ್ಲಾ ನಾಯಕರನ್ನು ಬಗ್ಗೆ ಒಂದು ಪದದಲ್ಲಿ ಹೇಳಬೇಕು ಎಂದು ಕೇಳಿದಾಗ, ಅದಕ್ಕೆ ಸೋನು ಗೌಡ ಅವರು ಕೊಟ್ಟ ಉತ್ತರ ಹೀಗೆ.
ಪುನೀತ್ ರಾಜ್ ಕುಮಾರ್ ಅವರು ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದಾರೆ. ದರ್ಶನ್ ಅವರನ್ನು ಮಾಸ್ ಎಂದು ಕರೆದಿದ್ದಾರೆ. ಸುದೀಪ್ ಸರ್, ಸ್ಟೈಲಿಶ್ ಎಂದು ಹೇಳಿದ್ದಾರೆ ಸೋನು. ಇನ್ನು ಸತೀಶ್ ನೀನಾಸಂ ಅವರನ್ನು, ಪರ್ಫಾರ್ಮರ್ ಎಂದು ಹೇಳಿದ್ದಾರೆ. ಯಶ್ ಅವರನ್ನು ಹಾಟ್ ಎಂದು ಹೇಳಿದ್ದಾರೆ. ಅಭಿಷೇಕ್ ಅಂಬರೀಶ್ ಅವರನ್ನು ಮಾಸ್ ಹೀರೋ ಎಂದಿದ್ದಾರೆ ಸೋನು ಗೌಡ.
ಇನ್ನು ಶ್ರೀನಗರ ಕಿಟ್ಟಿ ಅವರಿಗೆ ಇಂತಿ ನಿನ್ನ ಪ್ರೀತಿಯ ಎಂದು ಹೇಳಿದ್ದಾರೆ. ದಿಗಂತ್ ಮಂಚಾಲ್ ಅವರನ್ನು ಸ್ವೀಟ್ ಹಾರ್ಟ್ ಎಂದಿದ್ದಾರೆ ಸೋನು, ನಿಖಿಲ್ ಕುಮಾರಸ್ವಾಮಿ ಅವರನ್ನು ಭವಿಷ್ಯದ ರಾಜಕಾರಣಿ ಎಂದು ಹೇಳಿದ್ದಾರೆ. ಉಪೇಂದ್ರ ಅವರನ್ನು ರಿಯಲ್ ಸ್ಟಾರ್ ಎಂದಿರುವ ಸೋನು, ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಮೈ ಸ್ವೀಟ್ ಹಾರ್ಟ್ ಎಂದು ಕರೆದಿದ್ದಾರೆ.