ಇಂದಿನ ಯುವಕರಾಗಲಿ ಯುವತಿಯರಾಗಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು, ನಾವು ಹೆಸರು ಗಳಿಸಬೇಕು ಜಗತ್ತಿನ ಅತ್ಯಂತ ಜನ ನಮ್ಮನ್ನು ಗುರುತಿಸಬೇಕು ಎಂದೆಲ್ಲ ಅಂದುಕೊಂಡರೆ ಅದು ಬಹಳ ಕಷ್ಟದ ವಿಷಯವೇನು ಅಲ್ಲ. ಕಾಲೇಜಿನಲ್ಲಿ ನೂರು ಜನರ ನಡುವೆ ನಿಂತು ಕಾಂಪಿಟೇಶನ್ ನಲ್ಲಿ ಭಾಗವಹಿಸಿ ತಮ ಟ್ಯಾಲೆಂಟ್ ತೋರಿಸುವ ಅಗತ್ಯವಿಲ್ಲ, ನನಗೆ ಪ್ರೈಸ್ ಬಂದಿಲ್ಲ ಅಂತ ನೊಂದುಕೊಳ್ಳುವ ಹಾಗೂ ಇಲ್ಲ.
ಯಾಕಂದ್ರೆ ಎಲ್ಲರಿಗೂ ಈಗ ಸೋಶಿಯಲ್ ಮೀಡಿಯಾ ಎನ್ನುವ ಬಹುದೊಡ್ಡ ವೇದಿಕೆ ಇದೆ. ಲಕ್ಷಾಂತರ ಜನ ಸೋಶಿಯಲ್ ಮೀಡಿಯಾದ ಮೂಲಕವೇ ತಮ್ಮ ಪ್ರತಿಭೆಯ ಅನಾವರಣಗೊಳಿಸಿಕೊಳ್ಳುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಬೇಕಾದರೂ ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಬಹುದು. ಸೋಶಿಯಲ್ ಮೀಡಿಯಾ ಸ್ಟಾರ್ ಆಗಬಹುದು. ಈಗ ಹೆಣ್ಣು ಮಕ್ಕಳಿಗೂ ಕೂಡ ಮೊದಲಿನಂತೆ ಎಲ್ಲದಕ್ಕೂ ರಿಸ್ಟ್ರಿಕ್ಷನ್ ಇಲ್ಲ.
ಹಾಗಾಗಿ ಸಾಮಾಜಿಕ ಜಾಲತಾಣದ ವೇದಿಕೆ ಬಳಸಿಕೊಂಡು ಸಾಕಷ್ಟು ವಿಡಿಯೋಗಳನ್ನು ಮಾಡುವುದರ ಮೂಲಕ ಫೇಮಸ್ ಆಗುತ್ತಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡವರಲ್ಲಿ ಬಿಂದು ಗೌಡ ಕೂಡ ಒಬ್ಬರು. ಬಿಂದು ಗೌಡ ಬೆಂಗಳೂರಿನಲ್ಲಿ 1999 ರಲ್ಲಿ ಜನಿಸಿದರು. ಇಲ್ಲಿಗೆ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಬಿಂದು ಗೌಡ ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಈ ಹಿಂದೆ ಟಿಕ್ ಟಾಕ್ ವಿಡಿಯೋಗಳನ್ನ ಮಾಡಿ ಬಿಂದು ಗೌಡ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದರು. ಇನ್ನು ಹೆಚ್ಚಾಗಿ ಮೋಟಿವೇಷನಲ್ ಶೇರ್ ಮಾಡುತ್ತಿದ್ದ ಬಿಂದುಗೌಡ ಟಿಕ್ ಟಾಕ್ ನಲ್ಲಿಯೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದರು. ಇದೀಗ ಇನ್ಸ್ಟಾಗ್ರಾಮ್ ಮಾಡೆಲ್ ಟಿಕ್ ಟಾಕ್ ಸ್ಟಾರ್ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಎನಿಸಿಕೊಂಡಿರುವ ಬಿಂದುಗೌಡ ತಮ್ಮ ಹಾಟ್ ಲುಕ್ ಹಾಗೂ ಕ್ಯೂಟ್ ಸ್ಮೈಲ್ ನಿಂದಲೇ ಫೇಮಸ್ ಆದವರು.
ಬಿಂದು ಗೌಡ ಅವರು ನಟನೆ ನೃತ್ಯ ಟ್ರಾವೆಲಿಂಗ್ ಬ್ಲಾಗಿಂಗ್ ಈ ಎಲ್ಲಾ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಅದರಲ್ಲೂ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಬಿಂದುಗೌಡ ಇದುವರೆಗೆ ಸಾಕಷ್ಟು ಇನ್ಸ್ಟಾಗ್ರಾಮ್ ರಿಯಲ್ ಗಳನ್ನು ಮಾಡಿದ್ದು, ಏಳು ಲಕ್ಷಕ್ಕೂ ಅಧಿಕ ಫಾಲೋವರ್ ಗಳನ್ನ ಹೊಂದಿದ್ದಾರೆ. ಬಿಂದು ಗೌಡ ಅವರ ಕ್ರಿಯೇಟಿವ್ ಹಾಗೂ ಇಂಫಾರ್ಮೇಟಿವ್ ವಿಷಯಗಳಿಗೆ ಜನರು ಹೆಚ್ಚು ಫಿದಾ ಆಗಿದ್ದಾರೆ.
ಇನ್ನು ಬಿಂದು ಗೌಡ ಅವರು ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ. ಇವರಿಗೆ ಸಾಕಷ್ಟು ಹೆಸರುಗಳಿಗೆ ಪ್ರಮೋಷನ್ ಮಾಡಿರುವ ಇವರು ಹಲವು ಬ್ಯೂಟಿ ಪ್ರೊಡಕ್ಟ್ ಗಳ ಪ್ರಮೋಷನ್ ಕೂಡ ಮಾಡಿದ್ದಾರೆ. ಬ್ಯೂಟಿ ಪ್ರಾಡಕ್ಟ್ ಗಳನ್ನ ಮಾತ್ರವಲ್ಲದೆ ಬಟ್ಟೆಗಳು, ನ್ಯೂಟ್ರಿಷನ್ ಮತ್ತು ಎಲೆಕ್ಟ್ರಾನಿಕ್ ಪ್ರಾಡಕ್ಟ್ ಗಳ ಪ್ರಮೋಷನ್ ಕೂಡ ಮಾಡುವ ಬಿಂದುಗೌಡ ಈ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಬಿಂದು ಗೌಡ ಇನ್ಸ್ಟಾಗ್ರಾಮ್ ನಲ್ಲಿ ಈವರೆಗೆ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ ಇವರ ಲಿಪ್ ಸಿಂಕ್ ವಿಡಿಯೋಗಳು ತುಂಬಾನೇ ಫೇಮಸ್ ಆಗಿವೆ. ಇನ್ನು ಆಧುನಿಕ ಶೈಲಿಯ ಬಟ್ಟೆಗಳನ್ನ ಹಾಗೂ ಸಾಂಪ್ರದಾಯಿಕ ಶೈಲಿಯ ಬಟ್ಟೆಗಳನ್ನ ಎರಡು ರೀತಿಯ ಬಟ್ಟೆಗಳಲ್ಲಿಯೂ ಬಿಂದು ಗೌಡ ಮಿಂಚುತ್ತಾರೆ. ಯಾವ ಸಿನಿಮಾ ಕಾರ್ಯವರೆಗೂ ಕಮ್ಮಿ ಇಲ್ಲದ ರೀತಿಯಲ್ಲಿ ಸೊಂಟ ಬಳುಕಿಸುವ ಬಿಂದು ಗೌಡ ಅವರ ನೃತ್ಯವನ್ನು ನೀವು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು. ಇತ್ತೀಚಿಗೆ ಬಿಂದುಗೌಡ ಮಾಡಿರುವ ಚೇಂಜ್ ಓವರ್ ವಿಡಿಯೋ ಒಂದಕ್ಕೆ ಲಕ್ಷಾಂತರ ವೀಕ್ಷಣೆ ಬಂದಿದೆ.
View this post on Instagram