Picsart 22 08 02 13 27 39 819

ಚಿಕ್ಕ ವಯಸ್ಸಿಗೇ ದೊಡ್ಡ ಹೆಸರು ಮಾಡಿ ಇಹಲೋಕ ಸೇರಿದ 20 ಖ್ಯಾತ ನಟಿಯರು ಯಾರೆಲ್ಲ ಗೊತ್ತಾ? ಇವರೇ ನೋಡಿ ಪಾಪ!!

ಸುದ್ದಿ

ಈ ವಿಧಿ ಲಿಖಿತ ಅನ್ನುವುದನ್ನು ಯಾವುದರಿಂದಲೂ ಬದಲಾಯಿಸಲು ಸಾಧ್ಯ ಇಲ್ಲ. ಆತ ಅದೆಷ್ಟೇ ದೊಡ್ಡ ವ್ಯಕ್ತಿ ಆಗಿದ್ದರೂ ಪರಿಸ್ಥಿತಿಯ ಕೈ ಗೊಂಬೆ ಆಗಲೇ ಬೇಕು.‌ ಈ ಸಾ-ವು ಅನ್ನುವುದು ಯಾರ ಬಳಿ ಬೇಕಾದರೂ ಯಾವಾಗ ಬೇಕಾದರೂ ಬರಬಹುದು. ಇದಕ್ಕೆ ಬಡವ ಬಲ್ಲಿದ ಅನ್ನುವ ಭೇದವಿಲ್ಲ. ಇದೇ ರೀತಿ ಸಿನಿಮಾ ರಂಗದಲ್ಲಿ ಅತೀ ಸಣ್ಣ ವಯಸ್ಸಿಗೇ ಅನೇಕ ಸ್ಟಾರ್ ನಟಿಯರು ಸಾ-ವಿಗೆ ಶರಣಾಗಿದ್ದಾರೆ.

ಅಂತಹ ನಟಿಯರ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ ನಟಿ ಮಿನುಗುತಾರೆ ಕಲ್ಪನಾ ಅವರು ಒಂದು ಕಾಲದಲ್ಲಿ ತಮ್ಮ ಅಭಿನಯದಿಂದ ಅನೇಕ ಅಭಿಮಾನಿಗಳನ್ನು ಪಡೆದುಕೊಂಡವರು. ಇವರು ಬಹು ಬೇಡಿಕೆಯ ನಟಿಯಾಗಿರುವಾಗಲೇ 1979 ರಲ್ಲಿ ತನ್ನ 35 ನೇ ವಯಸ್ಸಿನಲ್ಲಿಯೇ ನಿದ್ದೆ ಮಾತ್ರೆ ಸೇವಿಸಿ ಆತ್ಮ-ಹತ್ಯೆ ಮಾಡಿಕೊಂಡು ಜೀವನವನ್ನೇ ಕಳೆದುಕೊಂಡಿದ್ದರು.

ಅದೇ ರೀತಿ ಖ್ಯಾತ ನಟಿ ಮಂಜುಳಾ ಅವರು 70 ದಶಕದಲ್ಲಿ ಕನ್ನಡ ಸಿನಿನಾ ರಂಗ ಆಳಿದ್ದ ನಟಿ. ಇವರು 1976 ರಲ್ಲಿ ತಮ್ಮ‌ ನಿವಾಸದಲ್ಲಿ ಗ್ಯಾಸ್ ಸ್ಟವ್ ಸ್ಪೋ-ಟಗೊಂಡ ಕಾರಣದಿಂದ ದುರ್ಮ-ರಣಕ್ಕೆ ತುತ್ತಾಗಿದ್ದರು. ಆಗ ಅವರ ವಯಸ್ಸು ಕೇವಲ 35 ಆಗಿತ್ತು. ಅದೇ ರೀತಿ ಸಿಲ್ಕ್ ಸ್ಮಿತಾ ಅವರು 1996 ರಲ್ಲಿ ವೈಯುಕ್ತಿಕ ಕಾರಣಗಳಿಂದಾಗಿ ಹಾಗೂ ಮಾನಸಿಕ ಒತ್ತಡದಿಂದಾಗಿ ನೊಂದು ತಮ್ಮ 36 ನೇ ವಯಸ್ಸಿನಲ್ಲಿಯೇ ಆತ್ಮ-ಹತ್ಯೆ ಮಾಡಿಕೊಂಡು ಜೀವನ ಕಳೆದುಕೊಂಡಿದ್ದರು.

ನಟಿ ಪದ್ಮಪ್ರಿಯಾ ಅವರು 80 ರ ದಶಕದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದವರು. ಇವರು 1995 ರಲ್ಲಿ ಕಿಡ್ನಿ ಫೈಲ್ಯೂರ್ ಹಾಗೂ ಹೃದಯಾಘಾತದಿಂದ ಸಾವ-ನ್ನಪ್ಪಿದ್ದರು. ಇನ್ನು ಶಿವರಾಜ್ ಕುಮಾರ್ ಜೊತೆ ಇಂದ್ರಧನುಷ್ ಚಿತ್ರದಲ್ಲಿ ‌ನಟಿಸಿದ್ದ ನಟಿ ಮುನಾರ್, ಅವರು ಪ್ರೀತಿ ತನ್ನದಾಗಲಿಲ್ಲ ಅನ್ನುವ ಕಾರಣಕ್ಕೆ 25 ನೇ ವಯಸ್ಸಿಗೇ ಸೂ-ಸೈಡ್ ಮಾಡಿಕೊಂಡಿದ್ದರು.‌

ಹಾಗೆಯೇ ನಟಿ ಸಾವಿತ್ರಿ ಅವರು 1981 ರಲ್ಲಿ ಗಂಭೀ-ರ ಆರೋಗ್ಯ ಸಮಸ್ಯೆಯಿಂದ ತಮ್ಮ‌46 ನೇ ವಯಸ್ಸಿನಲ್ಲಿಯೇ ಸಾವ-ನ್ನಪ್ಪುತ್ತಾರೆ. ಹಾಗೆಯೇ ಕನ್ನಡದ ನಟಿ ನಿವೇದಿತಾ ಜೈನ್ ಅವರು 1998 ರಲ್ಲಿ ತಮ್ಮ ಮನೆಯ ಟ್ಯಾರೇಸ್ ನಿಂದ ಕಾಲು ಜಾರಿ ಬಿದ್ದು ಗಂಭೀ-ರ ಗಾ-ಯಗಳಾಗಿತ್ತು‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿಯಾಗದೆ ತಮ್ಮ 21 ನೇ ವಯಸ್ಸಿನಲ್ಲಿ ಮ-ರಣ ಹೊಂದಿದ್ದರು.

ಇನ್ನು ನಟಿ ಸೌಂದರ್ಯ ಅವರು 2004ರಲ್ಲಿ ವಿಮಾನ ಅಪ-ಘಾತದಿಂದ ದುರ್ಮ-ರಣಕ್ಕೆ ಈಡಾಗುತ್ತಾರೆ. ಆಗ ಅವರಿಗೆ ಕೇವಲ 27 ವರ್ಷ ವಯಸ್ಸು. ಮಲಯಾಳಂ ನಟಿ ಶೋಭಾ ಅವರು ಕನ್ನಡದ ಅಪರಿಚಿತ ಸೇರಿದಂತೆ ಕೆಲ ಸಿನಿಮಾದಲ್ಲಿ ನಟಿಸಿದ್ದರು. ಇವರು ಕೇವಲ ತಮ್ಮ 17 ನೇ ವಯಸ್ಸಿಗೆ ಆತ್ಮ-ಹತ್ಯೆ ಗೆ ಶರಣಾಗಿದ್ದರು. ಹಾಗೆಯೇ ಮೊನಿಷಾ ಉಣ್ಣಿ ರಾಘವೇಂದ್ರ ರಾಜ್‌ಕುಮಾರ್ ಜೊತೆ ಚಿರಂಜೀವಿ ಸುಧಾಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.‌

ಇವರು ತಮ್ಮ‌ 22 ನೇ ವಯಸ್ಸಿನಲ್ಲಿಯೇ ನಿ-ಧನ ಹೊಂದುತ್ತಾರೆ. ಹಾಗೆಯೇ ನಟಿ ಜಯಲಕ್ಷ್ಮಿ ಅವರು ತಮ್ಮ 22 ನೇ ವಯಸ್ಸಿನಲ್ಲಿಯೇ ಆತ್ಮ-ಹತ್ಯೆ ಮಾಡಿಕೊಂಡು ಸಾ-ವಿಗೆ ಶರಣಾದರು. ಇನ್ನು ನಟಿ ಮಯೂರಿ ಇವರು ಕೂಡ ನಟ ಶಿವರಾಜ್ ಕುಮಾರ್ ಜೊತೆ ಸಾರ್ವಭೌಮ ಚಿತ್ರದಲ್ಲಿ ನಟಿಸಿ ಗುರುತಿಸಿಕೊಂಡವರು.

ಇವರು 22 ನೇ ವಯಸ್ಸಿನಲ್ಲಿಯೇ ಸೂ-ಸೈಡ್ ಮಾಡಿಕೊಂಡು ಮ-ರಣ ಹೊಂದಿದ್ದರು.‌ ನಟಿ ಹೇಮಶ್ರೀ ಯವರು ತಮ್ಮ 22 ನೇ ವಯಸ್ಸಿನಲ್ಲಿ 2012 ರಲ್ಲಿ ನಿ-ಗೂಢವಾಗಿ ಸಾವನ್ನಪ್ಪಿದರು.ಹಾಗೆಯೇ ತೆಲುಗು ನಟಿ ಪ್ರತ್ಯೂಷ ಅವರು ತಮ್ಮ 20 ನೇ ವಯಸ್ಸಿನಲ್ಲಿ ಆತ್ಮ-ಹತ್ಯೆ ಮಾಡಿಕೊಂಡಿದ್ದರು. ಈ ಮಾಹಿತಿ ಕುರಿತಾಗಿ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *