ಭೂಮಿಕಾ ಬಸವರಾಜ್, ಸೋಶಿಯಲ್ ಮೀಡಿಯಾ ಬಳಸುವ ಅನೇಕ ಮಂದಿಗೆ ಈ ಹೆಸರು ಹೇಳಿದ ಕೂಡಲೇ ಅವರ ಮುಖ ಕಣ್ಣ ಮುಂದೆ ಬರುತ್ತದೆ. ಅಷ್ಟರಮಟ್ಟಿಗೆ ಭೂಮಿಕಾ ಬಸವರಾಜ್ ಫೇಮಸ್.ಇವರು ಸೋಶಿಯಲ್ ಮೀಡಿಯಾದ ಐಕಾನ್ ಅಂದರೂ ತಪ್ಪಾಗಲ್ಲ. ತಮ್ಮ ರೀಲ್ಸ್ ಮೂಲಕನೇ ಅವರು ಲಕ್ಷಾಂತರ ಅನುಯಾಯಿಗಳನ್ನು ಪಡೆದುಕೊಂಡಿದ್ದಾರೆ.
ಭೂಮಿಕಾ ಬಸವರಾಜ್ ಅವರ ಸ್ಪೆಷಾಲಿಟಿ ಏನು ಅಂದರೆ ಅದು ಹೆಚ್ಚಾಗಿ ಭಾರತದ ಸಾಂಪ್ರಾದಾಯಿಕ ಉಡುಗೆಯಾದ ಸೀರೆಯಲ್ಲಿ ಹೆಚ್ಚಾಗಿ ರೀಲ್ಸ್ ಮಾಡುವುದು. ಕಿವಿಗೆ ಜುಮ್ಕಿ ಅದೇ ರೀತಿ ಸೊಂಟಕ್ಕೆ ಡಾಬು ಹಾಕಿ, ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿ ಡ್ಯಾನ್ಸ್ ಮಾಡಿದರೆ ಇತ್ತ ಹುಡುಗರ ಹೃದಯ ಬಡಿತ ಕೂಡ ಒಂದೇ ಸವನೆ ಜೋರಾಗಿ ಬಡಿಯಲು ಶುರು ಮಾಡುತ್ತದೆ. ಅಷ್ಟು ಅದ್ಭುತವಾಗಿ ಅವರು ಸೀರೆಯಲ್ಲಿ ಡ್ಯಾನ್ಸ್ ಮಾಡುತ್ತಾರೆ.
ಇನ್ನು ಭೂಮಿಕಾ ಬಸವರಾಜ್ ಅವರ ಮೈಮಾಟ ಕಂಡರೆ ಯಾವ ಪಡ್ಡೆ ಹುಡುಗರು ಕೂಡ ನಿದ್ದೆ ಮಾಡಲು ಸಾಧ್ಯ ಇಲ್ಲ.ಅವರ ಸುಂದರ ಕಂಗಳು, ಹಾಗೆಯೇ ಸುಂದರ ಮೈಮಾಟಕ್ಕೆ ಒಪ್ಪುವಂತ ಬಣ್ಣದ ಸೀರೆ ಉಟ್ಟು ಟ್ರೆಂಡ್ ನಲ್ಲಿ ಇರುವಂತಹ ಹಾಡುಗಳಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ ಹಾಕುತ್ತಾರೆ. ಅವರ ಫಿಗ-ರ್ ಅಂತೂ ಸೀರೆಗೆ ಹೇಳಿ ಮಾಡಿಸಿದಂತಿದೆ.
ಭೂಮಿಕಾ ಬಸವರಾಜ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಇಷ್ಟರಮಟ್ಟಿಗೆ ಹೆಸರು ಪಡೆಯಲು ಕಾರಣ ಆಗಿದ್ದು ಅವರ ಫೇಸ್ ಟು ಫೇಸು ಅನ್ನುವ ಹಾಡಿಗೆ ಹಾಕಿದ್ದ ಸ್ಟೆಪ್. ಆ ಒಂದೇ ಡ್ಯಾನ್ಸ್ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಅದಾದ ನಂತರ ಅವರ ಫಾಲೋವರ್ಸ್ ರಾಕೆಟ್ ನಂತೆ ಮೇಲಕ್ಕೆ ಹಾರಿದೆ.ಭೂಮಿಕಾ ಬಸವರಾಜ್ ಅವರಿಗೆ ಕೇವಲ ಗಂಡು ಮಕ್ಕಳು ಮಾತ್ರ ಅಲ್ಲ ಹೆಣ್ಣು ಮಕ್ಕಳು ಕೂಡ ಫಾಲೋವರ್ಸ್ ಇದ್ದಾರೆ.
ಅವರ ಡ್ರೆಸ್ಸಿಂಗ್ ಸ್ಟೈಲ್ ನೋಡಿಯೇ ಹುಡುಗಿಯರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಇದೀಗ ಇದೇ ರೀತಿಯಲ್ಲಿ ಸೀರೆಯುಟ್ಟು ರಾ ರಾ ರೆಡ್ಡಿ ಐ ಯಾಮ್ ರೆಡಿ ಆಲ್ಬಂ ಸಾಂಗ್ ಗೆ ಸಕತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದು ಮತ್ತೆ ವೈರಲ್ ಆಗಿದೆ. ಅವರು ಯಾವುದೇ ಹಾಡಿಗೆ ಆಗಲಿ ಸೊಂಟ ಕುಣುಕಿಸಿದರೆ ಸಾಕು ಅದು ವೈರಲ್ ಆಗಿ ಬಿಡುತ್ತದೆ. ಭೂಮಿಕಾ ಬಸವರಾಜ್ ಅವರು ಮೂಲತಃ ಚಿಕ್ಕಮಗಳೂರಿನವರು.
ಇವರು ಹೆಚ್ಚಾಗಿ ಒಬ್ಬರೇ ರೀಲ್ಸ್ ಮಾಡುತ್ತಾರೆ. ಒಂದೆರಡು ಬಾರಿ ಮತ್ತೊಬ್ಬ ರೀಲ್ಸ್ ಸ್ಟಾರ್ ಆದ ಬಿಂದು ಗೌಡ ಜೊತೆ ರೀಲ್ಸ್ ಮಾಡಿದ್ದಾರೆ. ಇನ್ನು ಇವರು ಕೇವಲ ಸೀರೆಯಲ್ಲಿ ಮಾತ್ರ ಅಲ್ಲ ಮಾರ್ಡನ್ ಡ್ರೆಸ್ ನಲ್ಲಿ ಕೂಡ ಆಗಾಗ್ಗೆ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಿನ ಮಂದಿಗೆ ಭೂಮಿಕಾ ಬಸವರಾಜ್ ಅವರ ಸೀರೆಯಲ್ಲಿ ಮಾಡಿರುವ ರೀಲ್ಸ್ ಅಂದರೆನೇ ಇಷ್ಟ. ಭೂಮಿಕಾ ಬಸವರಾಜ್ ಅವರು ರೀಲ್ಸ್ ನಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಿದ್ದೇ ತಡ ಸೀರೆಯ ಅದೇ ರೀತಿ ಒಡವೆ ಗಳ ಜಾಹೀರಾತಿನಲ್ಲಿ ಮಿಂಚುತ್ತಿದ್ದಾರೆ.
ಅದೇ ರೀತಿ ಡ್ರೆಸ್ ಹಾಗೂ ಸೀರೆಯ ಸ್ಪಾನ್ಸರ್ ಶಿಪ್ ನಲ್ಲಿ ಕೂಡ ರೀಲ್ಸ್ ಮಾಡುತ್ತಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾ ಮೂಲಕ ಎಲ್ಲೆಡೆ ಗುರುತಿಸಿಕೊಂಡಿರುವ ಕಾಫಿನಾಡಿನಬೆಡಗಿ ಭೂಮಿಕಾ ಬಸವರಾಜ್ ಮುಂದೆ ಒಂದು ದಿನ ಸಿನಿಮಾ ಅಥವಾ ಧಾರವಾಹಿ, ಅದೇ ರೀತಿ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram