ಕನ್ನಡ ಸಿನಿಮಾ ಇಂಡಸ್ಟ್ರಿ ಇಂದು ಕೇವಲ ಕನ್ನಡ ನಾಡಿನಲ್ಲಿ ಮಾತ್ರ ಉಳಿದಿಲ್ಲ ಭಾಷೆಗಳ ಥಿಯೇಟರ್ ನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿನ ಕನ್ನಡ ಸಿನಿಮಾಗಳು ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿವೆ. ಇಂದು ಕನ್ನಡಿಗರು ಮಾತ್ರವಲ್ಲ ತಮಿಳು, ತೆಲುಗು, ಹಿಂದಿ ಮಲಯಾಳಂ ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ಕನ್ನಡ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಹೀಗೆ ಸಿನಿಪ್ರಿಯರ ನಿರೀಕ್ಷೆ ಸತ್ಯ ಮಾಡಿರುವಲ್ಲಿ ಚಾರ್ಲಿ 777 ಸಿನಿಮಾ ಕೂಡ ಒಂದು.
ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಚಾರ್ಲಿ 777 ತೆರೆಕಂಡು ಬಾರಿ ಯಶಸ್ಸು ಗಳಿಸಿದೆ. ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಂದರೆ ಜನರಿಗೆ ಬೆರೆಯದೇ ಆದ ನಿರೀಕ್ಷೆ ಇರುತ್ತೆ. ಯಾಕಂದ್ರೆ ಅವರ ನಿರ್ಮಾಣದ ಸಿನಿಮಾ ಆಗಿರಬಹುದು, ನಿರ್ದೇಶನದ ಅಥವಾ ನಟನೆಯ ಸಿನಿಮಾ ಆಗಿರಬಹುದು, ಎಲ್ಲವೂ ಬಹಳ ವಿಭಿನ್ನವಾಗಿ ಇರುತ್ತೆ. ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಿರ್ಮಾಣ ಹಾಗೂ ನಟನೆಯ ಚಾರ್ಲಿ 777 ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನ ಕಂಡಿದ್ದು ಮಾತ್ರವಲ್ಲದೆ ಇಂದು ಕನ್ನಡಿಗರಿಗೆ ಮಾತ್ರ ಚಿರಪರಿಚಿತರಾಗಿದ್ದ ರಕ್ಷಿತ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಚಾರ್ಲಿ 777 ಸಿನಿಮಾವನ್ನು ಕೂಡ ಮೆಚ್ಚಿಕೊಂಡಿದ್ದು ಈಗಾಗಲೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಕ್ಷಿತ್ ಶೆಟ್ಟಿ ಅವರ ಬಳಿ ನೇರವಾಗಿ ಮಾತನಾಡಿ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಂದು ಶ್ವಾನ ಹಾಗೂ ಮನುಷ್ಯನ ನಡುವಿನ ಬಾಂಧವ್ಯವನ್ನು ತೆರೆದಿಡುವಂತಹ ಸಿನಿಮಾ ಇದು. ಹೌದು. ಚಾರ್ಲಿ 777 ಸಿನಿಮಾವನ್ನ ನೋಡಿ ಕಣ್ಣೀರಿಡದೆ ಇದ್ದವರೇ ಇಲ್ಲ. ಅದರಲ್ಲೂ ಶ್ವಾನ ಪ್ರಿಯರಿಗಂತೂ ಈ ಸಿನಿಮಾ ಹಾರ್ಟ್ ಗೆ ಹತ್ತಿರವಾಗಿದೆ.
ಇನ್ನು ಚಾರ್ಲಿ ಸಿನಿಮಾ ಯಶಸ್ಸು ಕಂಡಿದ್ದು ಸಾಕಷ್ಟು ಹಣ ಕೂಡ ಗಳಿಸಿದೆ. ಸುಮಾರು ನೂರು ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ ಎಂದು ಈ ಹಿಂದೆ ರಕ್ಷಿತ್ ಶೆಟ್ಟಿ ಸಂದರ್ಶನ ಒಂದರಲ್ಲಿ ಹೇಳಿದ್ರು. ಇನ್ನು ತಾವು ನಿರ್ಮಾಣ ಮಾಡಿದ ಚಾರ್ಲಿ 777 ಸಿನಿಮಾದಿಂದ ಬಂದಿರುವ ಹಣ ಎಷ್ಟು ಹಾಗೂ ಅದನ್ನು ಹೇಗೆ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದರ ಬಗ್ಗೆಯೂ ರಕ್ಷಿತ್ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದರು.
ನಾಯಿಯನ್ನು ಕಾಪಾಡುವ ಸಂಸ್ಥೆಗೆ ಒಂದಿಷ್ಟು ಹಣ ಮೀಸಲಿಡಲು ತೀರ್ಮಾನಿಸಿದ್ದಾರೆ ರಕ್ಷಿತ ಶೆಟ್ಟಿ. ಇನ್ನೂ ತಮಗೆ ಬಂದ ಲಾಭಾಂಶದಲ್ಲಿ 10% ಹಣವನ್ನು ಸಿನಿಮಾದಲ್ಲಿ ನಟಿಸಿದವರಿಗೆ ಮತ್ತೆ ಶೇರ್ ಮಾಡುತ್ತೇನೆ ಅಂತ ರಕ್ಷಿತ್ ಶೆಟ್ಟಿ ಹೇಳಿದ್ರು ಈ ಬಗ್ಗೆ ಈ ಸಿನಿಮಾದಲ್ಲಿ ನಟಿಸಿದ ಸಂಗೀತ ಶೃಂಗೇರಿ ಮಾತನಾಡಿದ್ದಾರೆ. ರಕ್ಷಿತ್ ಶೆಟ್ಟಿ ಘೋಷಣೆ ಮಾಡಿದ ಹಾಗೆ ಮತ್ತೊಮ್ಮೆ ರೀ ಪೇಮೆಂಟ್ ಮಾಡಿದ್ದಾರಾ ಎನ್ನುವುದಕ್ಕೆ ಸಂಗೀತ ಶೃಂಗೇರಿ ಉತ್ತರ ನೀಡಿದ್ದಾರೆ.
ಚಾರ್ಲಿ 777 ಸಿನಿಮಾದಲ್ಲಿ ನಟಿಸಿ ಯಶಸ್ಸು ಕಂಡ ನಂತರ ಸಂಗೀತ ಶೃಂಗೇರಿ ಅವರಿಗೆ ಬೇಡಿಕೆಯು ಹೆಚ್ಚಾಗಿದೆ. ಈಗಾಗಲೇ ಹಲವು ಪ್ರಾಜೆಕ್ಟ್ ಗಳು ಅವರ ಕೈಯಲ್ಲಿದೆ. ಈ ಸಿನಿಮಾದಲ್ಲಿ ನಮಗೆ ಇನ್ನೂ ಮತ್ತೆ ಹಣ ನೀಡಿಲ್ಲ ಆದರೆ ನನಗೆ ಅದರ ಬಗ್ಗೆ ಯೋಚನೆ ಇಲ್ಲ ಸಿನಿಮಾ ಗೆದ್ದ ನಂತರ ನಮಗೆ ಟ್ರಿಪ್ ಕರೆದುಕೊಂಡು ಹೋಗಿದ್ದು ನಿಜಕ್ಕೂ ಉತ್ತಮ ಅನುಭವ. ಚಾರ್ಲಿ ಸಿನಿಮಾ ಕಾಗಿ ಸಾಕಷ್ಟು ಶ್ರಮ ವಹಿಸಲಾಗಿದೆ ಕೆಲವು ವರ್ಷಗಳ ಕಮಿಟ್ಮೆಂಟ್ ಇದರಲ್ಲಿ ಇತ್ತು.
ಹಾಗಾಗಿ ಈ ಸಿನಿಮಾದಲ್ಲಿ ನಟಿಸಿದೆ ನನಗೆ ಸಂತೋಷದ ವಿಚಾರ ಅಂತ ‘ಸಂಗೀತ ಶೃಂಗೇರಿ’ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ಸಂಭಾವನೆ ಕೂಡ ಹೆಚ್ಚಾಗಿದೆ ಈಗ ಒಂದು ಚಿತ್ರಕ್ಕೆ ನಟ ರಕ್ಷಿತ್ ಶೆಟ್ಟಿ ಬರೋಬ್ಬರಿ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಗಾಂಧಿನಗರದಲ್ಲಿ ಮಾತು ಕೇಳಿ ಬರುತ್ತಿವೆ.