PhotoGrid Site 1663127812954

ಚಂದನವನದಲ್ಲಿ ಮೊದಲು ಅತೀ ದುಬಾರಿ ಕಾರ್ ಖರೀದಿಸಿದ್ದು ನಾನೇ, ನನ್ನ ಮನೆಯಲ್ಲೇ ಸೊಗಸಾದ ಬಾರ್ ಇತ್ತು ಎಂದ ನಟ ದ್ವಾರಕೀಶ್! ಕೊನೆಗೆ ಆ ಭವ್ಯ ಬಂಗಲೆಯನ್ನು ಯಾರಿಗೆ ಮಾರಿದ್ರು ಗೊತ್ತಾ ನೋಡಿ!!

ಸುದ್ದಿ

ಬಹುಶಃ ಕನ್ನಡದಲ್ಲಿಇಂಥದ್ದೊಂದು ಜೋಡಿ ಮತ್ತೆ ಬರಲಿಕ್ಕಿಲ್ಲ. ಕನ್ನಡಿಗರನ್ನ ರಂಜಿಸೋದಕ್ಕೆ ಯಾವ ಐಟಂ ಸಾಂಗೂ ಬೇಕಾಗಿರಲಿಲ್ಲ. ಯಾವ ಡುಯೆಟ್ ಹಾಡೂ ಬೇಕಾಗಿರಲಿಲ್ಲ. ವಿಷ್ಣು ದಾದಾ ಹಾಗೂ ದ್ವಾರಕೀಶ್ ಇಬ್ಬರ ಜೋಡಿ ತೆರೆ ಮೇಲೆ ಬಂದ್ರೆ ಸಾಕಿತ್ತು. ಜನ ಮುಗಿಬಿದ್ದು ಅವರ ಚಿತ್ರಗಳನ್ನು ನೋಡುತ್ತಿದ್ರು. ವಿಷ್ಣು ದಾದಾ ಹಾಗೂ ಕನ್ನಡದ ಕುಳ್ಳ ದ್ವಾರಕೀಶ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿ ಜನರನ್ನು ರಂಜಿಸಿ, ಬೆಸ್ಟ್ ಜೋಡಿ ಎನಿಸಿಕೊಂಡಿದ್ರು.

ದ್ವಾರಕೀಶ್ ಅವರು ಸುಮಾರು ಮುನ್ನೂರುಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಕನ್ನಡದ ಕುಳ್ಳ ಎಂದೇ ಖ್ಯಾತರಾಗಿರುವ ದ್ವಾರಕೀಶ್ ಅವರು ಆಗಿನ ಕಾಲದಲ್ಲಿಯೇ ಬಹಳ ಐಷಾರಾಮಿ ಜೀವನ ನಡೆಸಿದವರು. ಆದರೆ ದುರದೃಷ್ಟವಶಾತ್ ಅವರ ಸಿನಿಮಾ ಸೋಲು, ಹಾಗೂ ಇತರ ಕಾರಣ ಕಾರಣಗಳು ದ್ವಾರಕೀಶ್ ಅವರನ್ನು ಸಂಪೂರ್ಣವಾಗಿ ಮುಳುಗಿಸಿತ್ತು.

ಎಲ್ಲವನ್ನೂ ಕಳೆದುಕೊಂಡರು. ಆನಂತರ ಮತ್ತೆ ಹೇಗೋ ಚೇತರಿಸಿಕೊಂಡರೂ ಅವರ ಮೊದಲಿನ ಜೀವನಕ್ಕೆ ಮರಳಲು ಸಾಧ್ಯವಾಗಲೇ ಇಲ್ಲ. ದ್ವಾರಕೀಶ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಅಂದಿನ ಜೀವನದ ಬಗ್ಗೆ ಮಾತನಾಡಿದ್ದಾರೆ. ದ್ವಾರಕೀಶ್ ಅವರು ಹೇಳಿದ್ದೇನು ಗೊತ್ತಾ? “ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 1981ರಲ್ಲಿ ಮೊದಲ ಇಂಪಾರ್ಟೆಂಟ್ ಹೋಂಡಾ ಕಾರನ್ನು ಬಳಸುತ್ತಿದ್ದದ್ದು ನಾನು.

ಮದ್ರಾಸ್ ನ ಶ್ರೀನಗರದಲ್ಲಿ 160*120 ಅಡಿ ವಿಸ್ತೀರ್ಣದ ನನ್ನ ಒಂದು ಮನೆ ಇತ್ತು. ಅಲ್ಲಿ ಸುಮಾರು 50 ಕಾರು ಪಾರ್ಕ್ ಮಾಡಬಹುದಾಗಿತ್ತು. ಮನೆಯಲ್ಲಿ ಒಂದು ಸುಸಜ್ಜಿತವಾದ ಬಾರ್ ಕಟ್ಟಿದ್ದೆ. ಬಾರ್ ಕಟ್ಟಿದ್ದೆ ಎನ್ನುವ ಮಾತ್ರಕ್ಕೆ ತುಂಬಾ ಕುಡಿತಿದ್ದೆ ಅಂತ ಅನ್ಕೋಬೇಡಿ. ದಿನಕ್ಕೆ ಒಂದು ಎರಡು ಪೆಗ್ ಹಾಕುತ್ತಿದ್ದೆ. ಅತ್ಯಂತ ಸುಂದರವಾದ ಬಾರ್ ಕಟ್ಟಿದ್ದೆ ಅಲ್ಲಿಯೇ ನಾನು ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಅಲ್ಲಿ ಎರಡು ಏರ್ ಕಂಡೀಷನ್ ಕೂಡ ವ್ಯವಸ್ಥೆ ಮಾಡಿದೆ.

ಆದರೆ ಅದೆಲ್ಲ ಕಳೆದುಕೊಂಡಾಗ ಎಲ್ಲಾ ಹೋಯ್ತು ಅಂತ ನಾನು ಫೀಲ್ ಮಾಡಿದವನೇ ಅಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ದ್ವಾರಕೀಶ್ ಹೊರಗಡೆಯಿಂದ ಬೇರೆ. ದೇವರು ಎಲ್ಲವನ್ನು ನನಗೆ ಕೊಟ್ಟಿದ್ಡಾನೆ. ನನ್ನನ್ನು ಗೆಲ್ಲಿಸಿದ ನನ್ನ ಕೈಲಿ ಐವತ್ತು ಸಿನಿಮಾಗಳನ್ನು ಆ ದೇವರೇ ಮಾಡಿಸಿದ್ದಾನೆ. 300 ಸಿನಿಮಾಗಳಲ್ಲಿ ಅಭಿನಯಿಸುವಂತ ಅವಕಾಶಗಳನ್ನು ಕೊಟ್ಟ. ನಾನು ಎಲ್ಲವನ್ನು ಅನುಭವಿಸಿದ್ದೇನೆ ಎಲ್ಲವನ್ನು ಲೀಲಾಜಾಲವಾಗಿ ತೆಗೆದುಕೊಂಡಿದ್ದೇನೆ.

ನಿಮ್ಮೆಲ್ಲರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿ ನನ್ನ ಮೇಲೆ ಹಾಗೆಯೇ ಇರಲಿ. ಅದು ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೂ ನಾನು ಯಂಗ್ ಆಗಿಯೇ ಇರುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನಗೆ ಬೇಕು ಅಷ್ಟೇ. ನಾನು 80 ವಯಸ್ಸಿಗೆ ಬಂದು ಮುಟ್ಟಿದ್ದೇನೆ ಏನನ್ನಾದರೂ ತಡೆಯಬಹುದು ವಯಸ್ಸನ್ನು ತಡೆಯೋಕೆ ಆಗಲ್ಲ ನನಗೂ ಸುಸ್ತಾಗುತ್ತೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು”. ಇವಿಷ್ಟು ಕನ್ನಡದ ಕುಳ್ಳ ದ್ವಾರಕೀಶ್ ಅವರ ಮನದಾಳದ ಮಾತು.

ನಟ ದ್ವಾರಕೀಶ್ ಅವರಿಗೆ ಈಗ 80ರ ಹರೆಯ. ಈಗಾಗಲೇ ಸಾಕಷ್ಟು ಸಿನಿಮಾ ಮಾಡಿರುವ ದ್ವಾರಕೀಶ್ ಕನ್ನಡ ಇಂಡಸ್ಟ್ರಿಯಲ್ಲಿ, ಕನ್ನಡಿಗರ ಮನಸ್ಸಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರು ಗಳಸ್ಯ ಕಂಠಸ್ಯ ಎನ್ನುವಂಥ ಸ್ನೇಹಿತರೂ ಆಗಿದ್ದರು. ಕೊನೆಯದಾಗಿ ಆಪ್ತ ಮಿತ್ರ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿತ್ತು ಈ ಜೋಡಿ. ದ್ವಾರಕೀಶ್ ಅವರು ನಿಮಗೂ ಇಷ್ಟವಾದ ನಟ ಆಗಿದ್ರೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *