ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಚಿತ್ರ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿದೆ ಬಿಡುಗಡೆಯಾದ ಮೊದಲ ದಿನವೇ ಅತ್ಯದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಗಣೇಶ್ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಂತೂ ಟಿಕೆಟ್ ಸಿಗದೇ ಅಭಿಮಾನಿಗಳು ಪ್ರತಿಭಟನೆಯನ್ನು ಕೂಡ ಮಾಡಿದ್ದರು. ಹೌದು, ಇಂದು ಕನ್ನಡ ಚಿತ್ರರಂಗದ ಎಲ್ಲಾ ಚಿತ್ರಗಳು ಸಿಕ್ಕಾಪಟ್ಟೆ ಹಿಟ್ ಆಗುತ್ತಿವೆ.
ವಿಶ್ವವೇ ಗುರುತಿಸುವ ಮಟ್ಟಕ್ಕೆ ಚಂದನವನ ಬೆಳೆದಿದೆ ಅಂದ್ರೆ ನಿಜಕ್ಕೂ ಸಂತಸದ ವಿಷಯ. ಸ್ಟಾರ್ ನಟ ಎನಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಇದ್ದಾರೆ. ಜನರನ್ನ ನಗಿಸುತ್ತಾ ಅಳಿಸುತ್ತಾ ಬಹಳ ಫೇಮಸ್ ಆಗಿದ್ದಾರೆ ಗಣಿ.. ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರವನ್ನು ಇಂದಿಗೂ ಜನ ಮರೆಯಲು ಸಾಧ್ಯವೇ ಇಲ್ಲ. ಅದರಂತೆ ಗಾಳಿಪಟ ಚಿತ್ರ ಕೂಡ ಬಹಳ ಫೇಮಸ್ ಆಗಿತ್ತು.
ಈ ಚಿತ್ರಗಳ ಯಶಸ್ಸಿಗೆ ಇನ್ನೊಂದು ಕಾರಣ ಯೋಗರಾಜ್ ಭಟ್ ಅವರ ನಿರ್ದೇಶನ, ಅವರ ಸಾಹಿತ್ಯ ಹಾಗೂ ಅವರ ಡೆಡಿಕೇಶನ್. ಇಂದು ಚಂದನವನ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಯೋಗರಾಜ್ ಭಟ್ ಕೂಡ ಒಬ್ಬರು. ಅವರ ನಿರ್ದೇಶನದ ಸಿನಿಮಾಗಳು ಹಿಟ್ ಆಗುತ್ತವೆ. ಅಷ್ಟೇ ಅಲ್ಲ ಕುಡಿತದ ಬಗ್ಗೆ ಅವರು ಬರೆಯುವ ಸಾಹಿತ್ಯದಿಂದಗೆ ಇತರ ಸಿನಿಮಾ ಹಾಡುಗಳು ಕೂಡ ಫೇಮಸ್ ಆಗುತ್ತವೆ. ಅದರಂತೆ ಇಂದು ಗಾಳಿಪಟ 2 ಚಿತ್ರಕೂಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ನಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
ಮೂರು ಸ್ನೇಹಿತರ ನಡುವೆ ನಡೆಯುವ ಎಮೋಷನ್, ಮಸ್ತಿ, ಫೈಟಿಂಗ್ ಇವೆಲ್ಲವನ್ನ ಕ್ರೋಡೀಕರಿಸಿ ಗಾಳಿಪಟ 2 ಸಿನಿಮಾ ನಿರ್ಮಾಣವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮೂವರು ಗಾಳಿಪಟ 2 ಸಿನಿಮಾಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಯೋಗರಾಜ್ ಭಟ್ ಅವರು ಕೂಡ ನಿರ್ದೇಶನದಲ್ಲಿ ಒಂದು ಮಟ್ಟ ಹೆಚ್ಚಾಗಿಯೇ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದು.
ಗಾಳಿಪಟ 2 ಸಿನಿಮಾ ರಿಲೀಸ್ ಆಗುತ್ತಿದ್ದ ಹಾಗೆ ಅಭಿಮಾನಿಗಳ ನಡುವೆ ನಿಂತು ಗಣೇಶ್ ಮಾತನಾಡಿದರು. ಈ ಸಮಯದಲ್ಲಿ ಗಣೇಶ್ ಅವರ ಹೆಸರಿನ ಟ್ಯಾಟುವನ್ನು ಅಭಿಮಾನಿಗಳು ಎದೆಯ ಮೇಲೆ, ಕೈ ಮೇಲೆ, ಕುತ್ತಿಗೆಯ ಮೇಲೆ ಹಾಕಿಸಿಕೊಂಡು ಬಂದಿದ್ದನ್ನ ನೋಡಿ ಗಣೇಶ್ ಭಾವುಕರಾಗಿದ್ರು. ಒಬ್ಬ ನಟನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಇವರ ಅಭಿಮಾನದ ಮುಂದೆ ಯಾವ ದುಡ್ಡು ಕಾಸು ಲೆಕ್ಕಕ್ಕೆ ಬರೋಲ್ಲ ಅಂತ ಗಣೇಶ್ ಹೇಳಿದ್ದರು.
ಇದೆಲ್ಲವೂ ಅವರ ಸರಳ ನಡೆ ನುಡಿ ವ್ಯಕ್ತಿತ್ವಕ್ಕೆ ಸಾಕ್ಷಿ. ಇನ್ನು ಗಾಳಿಪಟ 2 ಅಂತ ಉತ್ತಮ ಸಿನಿಮಾವನ್ನ ನೀಡಿದ ಯೋಗರಾಜ್ ಭಟ್ ಅವರನ್ನು ಅವರ ಅಭಿಮಾನಿಗಳು ಚಿತ್ರಮಂದಿರದ ಬಳಿ ಹೊತ್ತು ಕುಣಿದಾಡಿದ್ದಾರೆ. ಅವರನ್ನು ಅಪ್ಪಿ ಅಭಿಮಾನ ಸೂಚಿಸಿದ್ದಾರೆ. ಯೋಗರಾಜ್ ಭಟ್ ಅವರು ದೊಡ್ಡ ಡೈರೆಕ್ಟರ್ ಆಗಿದ್ದರೂ ಕೂಡ ಬಹಳ ಸರಳವಾಗಿ ಇರುವ ವ್ಯಕ್ತಿ ಹಾಗಾಗಿ ಅಭಿಮಾನಿಗಳ ಜೊತೆ ಸ್ವಲ್ಪವೂ ಅಹಂಕಾರವಿಲ್ಲದೆ ಬಿಗುಮಾನವಿಲ್ಲದೆ ಬೆರೆಯುತ್ತಾರೆ ನಿರ್ದೇಶಕ ಯೋಗರಾಜ್ ಭಟ್. ಯೋಗರಾಜ್ ಭಟ್ ಅವರನ್ನ ತಬ್ಬಿಕೊಂಡು ಅಭಿಮಾನ ಸೂಚಿಸಿ ಅವರನ್ನು ಎತ್ತಿ ಕುಣಿದಾಡಿದ ವಿಡಿಯೋವನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.