ಗರ್ಭಿಣಿ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ನಿಮಗೆ ನಿಮ್ಮ ಮಗುವಿಗೆ ವಿಶೇಷ ಶಕ್ತಿ ನೀಡುತ್ತೇನೆ ಎಂದ ನಿತ್ಯಾನಂದ ಸ್ವಾಮಿ! ಅಸಲಿ ಕಾರಣ ತಿಳಿದು ಬೆಚ್ಚಿಬಿದ್ದ ಮಹಿಳೆಯರು!!

ಸುದ್ದಿ

ನಿತ್ಯಾನಂದ ಸ್ವಾಮಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬಿಡದಿಯಲ್ಲಿ ದೊಡ್ಡ ಆಶ್ರಮ ಕಟ್ಟಿಕೊಂಡು ಆತ ಮಾಡಿರುವ ಅವಾಂತರಗಳು, ರಾಧಾಂತಗಳು ಅಷ್ಟಿಷ್ಟಲ್ಲ. ಈಗಲೂ ಕರ್ನಾಟಕ ಪೊಲೀಸ್ ಅವರಿಗೆ ಬೇಕಾಗಿರುವ ಆ’ರೋಪಿ ಆಗಿರುವ ನಿತ್ಯಾನಂದ ತನ್ನದೇ ಆದ ಕೈಲಾಸಂ ಎನ್ನುವ ರಾಷ್ಟ್ರವೊಂದನ್ನು ಕಟ್ಟಿಕೊಂಡಿದ್ದಾನೆ. ಕರ್ನಾಟಕ ಬಿಟ್ಟರೂ ನಿತ್ಯಾನಂದ ಬಗೆಗಿನ ಸಾಕಷ್ಟು ವಿಚಾರಗಳು ಮಾಧ್ಯಮದ ಮೂಲಕ ಜನರಿಗೆ ತಲುಪುತ್ತಿರುತ್ತವೆ.

ನಿತ್ಯಾನಂದ ಸ್ವಾಮಿ ತನ್ನನ್ನ ಸ್ವಘೋಷಿತ ದೇವಮಾನವ ಎಂದು ಕರೆದುಕೊಂಡಿದ್ದು ಗೊತ್ತಿರುವ ವಿಷಯ. ನಿತ್ಯಾನಂದನ ಕೈಲಾಸ ಎಲ್ಲಿದೆ ಎಂಬುದರ ಬಗ್ಗೆ ಅಥವಾ ಅದರಲ್ಲಿ ಏನಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಸಮುದ್ರದ ಮಧ್ಯದಲ್ಲಿರುವ ಸಣ್ಣ ದ್ವೀಪವೊಂದನ್ನು ಖರೀದಿಸಿ ನಿತ್ಯಾನಂದ ಅಲ್ಲಿಯೇ ತನ್ನ ಕೈಲಾಸಂ ರಾಷ್ಟ್ರವನ್ನು ನಿರ್ಮಿಸಿಕೊಂಡಿದ್ದಾನೆ ಎಂದು ಹೇಳಲಾಗಿತ್ತು.

ಆದರೆ ಈಕ್ವೆಡಾರ್ ಈ ಸುದ್ದಿಯನ್ನು ತಳ್ಳಿಹಾಕಿದ್ದು, ನಾವು ಯಾವುದೇ ವ್ಯಕ್ತಿಗೆ ಹಾಗೆ ದ್ವೀಪವನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು ಶ್ರೀಲಂಕಾದಲ್ಲಿ ಒಂದು ದ್ವೀಪವನ್ನು ತೆಗೆದುಕೊಂಡು ಅಲ್ಲಿ ಕೈಲಾಸಂ ರಾಷ್ಟ್ರವನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಮಾಹಿತಿಯು ಇದೆ. ಅದೇನೆ ಇರಲಿ ಈಗ ನಿತ್ಯಾನಂದ ಇದೀಗ ಹೊಸದೊಂದು ಘೋಷಣೆ ಲಭ್ಯವಾಗಿದೆ ಅದೇನು ಗೊತ್ತಾ ಮುಂದೆ ಓದಿ.

ವಿಶ್ವದಲ್ಲಿ ಇರುವ ಎಲ್ಲಾ ಗರ್ಭಿಣಿಯರಿಗೆ ನಿತ್ಯಾನಂದ ಹೊಸ ಆಫರ್ ನೀಡಿದ್ದಾನೆ. ಈ ಬಗ್ಗೆ ಒಂದು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ ಅದರಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾನೆ. ವಿಡಿಯೋದಲ್ಲಿ ಏನಿದೆ; ನಿತ್ಯಾನಂದ ಸ್ವಾಮಿ ಹಂಚಿಕೊಂಡಿರುವ ವಿಡಿಯೋದಲ್ಲಿ ’ವಿಶ್ವದಲ್ಲಿ ಇರುವ ಈ ಎಲ್ಲಾ ಮಹಿಳೆಯರು ನೀವು ಎಲ್ಲೇ ಗರ್ಭಿಣಿಯಾಗಿರಿ, ಆದರೆ ಹೆರಿಗೆ ಮಾತ್ರ ಕೈಲಾಸಕ್ಕೆ ಬನ್ನಿ ಇಲ್ಲಿ ಬಂದರೆ ನಿಮ್ಮ ಮಗುವಿಗೆ, ವಿಶೇಷವಾದ ಅಲೌಕಿಕ ಹಾಗೂ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್ಎ ದಯಪಾಲಿಸುತ್ತೇನೆ.

ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ವಿಶೇಷವಾದ ಶಕ್ತಿ ಸಿಗುತ್ತದೆ ಅಷ್ಟೇ ಅಲ್ಲದೇ ಇಲ್ಲಿಯೇ ಬಂದು ಹೆರಿಗೆಯಾದರೆ ನಿಮ್ಮ ಮಗುವಿಗೆ ಯಾವೆಲ್ಲಾ ಇತರ ಪ್ರಯೋಜನಗಳು ಸಿಗಲಿದೆ’. ಎಂಬುದಾಗಿಯೂ ವಿವರವಾಗಿ ಹಂಚಿಕೊಂಡಿದ್ದಾನೆ. ಈ ರೀತಿಯಾಗಿ ನಿತ್ಯಾನಂದ ಘೋಷಣೆಯೊಂದನ್ನು ಹೊರಡಿಸಿದ್ದು ವಿಶ್ವದ ಮಹಿಳೆಯರಿಗೆ ಅಚ್ಚರಿ ಮೂಡಿಸಿದೆ.

ಹೌದು, ನಿತ್ಯಾನಂದನ ಕೈಲಾಸಂ ರಾಷ್ಟ್ರದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಿಟ್ಟಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್‌ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ ಎಂದೂ ಹೇಳಲಾಗಿದೆ. ಹಾಗಾಗಿ ಕೈಲಾಸಂ ಗೆ ಬಂದು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಿ ಎಂದು ವಿಶ್ವದ ಮಹಿಳೆಯರಿಗೆ ಕರೆ ನೀಡಿದ್ದಾನೆ ನಿತ್ಯಾನಂದ ಸ್ವಾಮಿ. ನಿತ್ಯಾನಂದ ಸ್ವಾಮಿ ಇತ್ತೀಚಿಗೆ ಅತೀವ ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ಹೆಚ್ಚಿನ ಚಿಕಿತ್ಸೆಗೆ ಶ್ರೀಲಂಕಾ ಅಧಿಕಾರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಪತ್ರವನ್ನು ಬರೆದಿರುವುದಾಗಿ ಮಾಹಿತಿ ಲಭ್ಯವಾಗಿತ್ತು.

ಆದರೆ ಇದರ ಬಗ್ಗೆಯು ಹೆಚ್ಚಿನ ಮಾಹಿತಿ ಇಲ್ಲ. ಅದೇನೆ ಆಗಲಿ ನಿತ್ಯಾನಂದ ಕರ್ನಾಟಕದಲ್ಲಿ ಇಲ್ಲದೆ ಇದ್ದರೂ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತವೆ. ಸದಾ ಸುದ್ದಿಯಲ್ಲಿರುವ ನಿತ್ಯಾನಂದ ಈಗ ಮಾಡಿರುವ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *