ಹೆಣ್ಣು ಮಕ್ಕಳಿಗೆ ತನ್ನ ಬಾಯ್ ಫ್ರೆಂಡ್ ಅಥವಾ ಮದುವೆಯಾಗುವ ಹುಡುಗ ಹೀಗೆ ಇರಬೇಕು ಎನ್ನುವ ಕಲ್ಪನೆ ಇರುತ್ತೆ. ತಾವು ವರಿಸುವ ಹುಡುಗ ಗುಣವಂತನಾಗಿರಬೇಕು ಎನ್ನುವುದು ಒಂದು ವಿಚಾರ ಆದರೆ ನೋಡುವುದಕ್ಕೆ ಬಹಳ ಹ್ಯಾಂಡ್ಸಮ್ ಆಗಿರಬೇಕು ಅನ್ನೋದು ಹುಡುಗಿಯರಲ್ಲಿ ಬಹಳ ಆಳವಾಗಿ ಬೇರೂರಿರುವ ಬಯಕೆ. ಸಾಕಷ್ಟು ಮುಂದೆ ಇದನ್ನು ಹೇಳಿಕೊಳ್ಳುವುದಿಲ್ಲ ಆದರೆ ಹುಡುಗಿಯರಿಗೂ ಕೂಡ ಹುಡುಗರ ದೇಹ ಸೌಂದರ್ಯ ಹೀಗೆ ಇರಬೇಕು ಎನ್ನುವ ಕಲ್ಪನೆ ಇರುತ್ತೆ.
ಅದರಲ್ಲೂ ಕ್ಲೀನ್ ಶೇವ್ ಮಾಡಿದ ಹುಡುಗರಿಗಿಂತ, ವಿರಾಟ್ ಕೊಹ್ಲಿ ತರ ಗಡ್ಡ ಬಿಟ್ಟಿದ್ದರೆ ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತೆ. ವಿರಾಟ್ ಕೊಹ್ಲಿ ಚೆನ್ನಾಗಿ ಕ್ರಿಕೆಟ್ ಆಡ್ತಾರೆ ಅಂತ ಹುಡುಗರಿಗೆ ಇಷ್ಟವಾದರೆ, ಅವರ ಗಡ್ಡದ ಲುಕ್ ಗೆ ಹುಡುಗಿಯರು ಫಿದಾ ಆಗುತ್ತಾರೆ. ಇನ್ನು ಯಾವುದೇ ಸಿನಿಮಾ ಹೀರೊಗಳನ್ನು ನೋಡಿ ಅಥವಾ ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನು ನೋಡಿ ಕ್ಲೀನ್ ಶೇವ್ ಮಾಡಿದವರಿಗಿಂತ ನೀಟ್ ಆಗಿ ಗಡ್ಡ ಬಿಟ್ಟು ಶೋಕಿ ಮಾಡುವವರೆ ಹೆಚ್ಚು.
ಅಂದಹಾಗೆ ಇತ್ತೀಚಿಗೆ ಗಡ್ಡ ಬಿಡುವುದು ಟ್ರೆಂಡ್ ಕೂಡ ಆಗಿದೆ. ಹುಡುಗರು ಕ್ಲೀನ್ ಶೇವ್ ಮಾಡುವುದಕ್ಕಿಂತ ಗಡ್ಡ ಬಿಟ್ಟು ಓಡಾಡಿದ್ರೇನೇ ಹುಡುಗಿಯರಿಗೂ ಇಷ್ಟವಾಗುತ್ತೆ. ಹೌದು, ಇತ್ತೀಚೆಗೆ ಒಬ್ಬ ಹುಡುಗ ಹುಡುಗಿ ಒಟ್ಟಾಗಿ ಹೋಗುತ್ತಿದ್ದರೆ ಅವರನ್ನು ಒಮ್ಮೆ ಗಮನಿಸಿ, ಹೆಚ್ಚಿನವರು ಗಡ್ಡ ಬಿಟ್ಟಿರುವ ಬಾಯ್ ಫ್ರೆಂಡ್ ಹೊಂದಿರುತ್ತಾರೆ. ಹೌದು, ಹುಡುಗಿಯರಿಗೆ ಗಡ್ಡ ಬಿಟ್ಟು ಹ್ಯಾಂಡ್ಸಮ್ ಆಗಿರುವ ಹುಡುಗರು ಅಂದ್ರೆ ಇಷ್ಟ.
ಇದು ಕೇವಲ ಅವರ ನೋಟ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಮಾತ್ರವಲ್ಲ ಇದಕ್ಕೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಹೌದು, ಹುಡುಗರ ಗಡ್ದದ ಜೊತೆಗೆ ಹುಡುಗಿಯರಿಗೆ ಭಾವನಾತ್ಮಕ ಸಂಬಂಧವೂ ಇದೆ ಹೇಗೆ ಅಂತೀರಾ! ಹುಡುಗಿಯರು ಬಾಲ್ಯದಲ್ಲಿ ತನ್ನ ಅಜ್ಜ, ಅಪ್ಪ ಇವರುಗಳೊಂದಿಗೆ ಕಾಲ ಕಳೆದಿರುತ್ತಾರೆ ಮಕ್ಕಳಿಗೆ ತಮ್ಮ ಗಡ್ಡವನ್ನು ನೋಡುವ ತಾತಂದಿರು ಅಂದ್ರೆ ಹೆಣ್ಣು ಮಕ್ಕಳಿಗೂ ಅಷ್ಟೇ ಇಷ್ಟ.
ಹಾಗಾಗಿ ತಾನು ಮದುವೆಯಾಗುವ ಹುಡುಗನ ಮುಖದಲ್ಲಿ ಗಡ್ಡ ಇದ್ರೆ ಅವರಿಗೆ ತಾತನನ್ನು ನೋಡಿದ ಅನುಭವ ಆಗುತ್ತೆ. ಈ ಕಾರಣಕ್ಕೆ ಹುಡುಗರು ಗಡ್ಡ ಬಿಟ್ಟರೆ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಇನ್ನು ಇದೇ ವಿಷಯ ಕುರಿತಂತೆ ಅಮೆರಿಕಾದ ಸಂಸ್ಥೆ ಎಂದು ಸಂಶೋಧನೆಯನ್ನು ಮಾಡಿದೆ ಈ ಸಮಯದಲ್ಲಿ ಹುಡುಗಿಯರನ್ನ ನೇರವಾಗಿ ಹುಡುಗರು ಗಡ್ಡ ಬಿಟ್ಟರೆ ಇಷ್ಟವಾಗುತ್ತಾ ಎನ್ನುವ ಪ್ರಶ್ನೆ ಕೇಳಲಾಗಿತ್ತು.
ನಮ್ಮ ಮೃದುವಾದ ಮುಖಕ್ಕೆ ಹುಡುಗರ ಗಡ್ಡ ತಗುಲಿದರೆ ರೋಮಾಂಚನವಾಗುತ್ತೆ ಅಂತ ಹುಡುಗಿಯರು ಉತ್ತರಿಸಿದ್ದಾರೆ. ಹುಡುಗಿಯರ ಈ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಗಡ್ಡ ಬಿಟ್ಟಿರುವ ಹುಡುಗರು ಬಹಳ ಪ್ರಭುದ್ಧರಾಗಿರುತ್ತಾರೆ. ಅವರ ಮುಖದಲ್ಲಿ ಮೆಚ್ಯುರಿಟಿ ಕಾಣಿಸಿಕೊಳ್ಳುತ್ತೆ. ಕ್ಲೀನ್ ಶೇಪ್ ಮಾಡಿರುವ ಹುಡುಗರ ಮುಖ ಅಮೂಲ್ ಬೇಬಿ ತರ ಮುದ್ದಾಗಿ ಕಾಣಿಸುತ್ತೆ.
ಆದರೆ ಈ ಮುದ್ದು ಪೆದ್ದು ಲುಕ್ ಗಿಂತ, ರಫ್ ಅಂಡ್ ಟಫ್ ಲುಕ್ ನ್ನೇ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಗಂಡಸರೇ ಇನ್ನು ಮುಂದೆ ಶೇವ್ ಮಾಡುವುದಕ್ಕಿಂತ ಮೊದಲು ಒಮ್ಮೆ ಯೋಚಿಸಿ. ಹುಡುಗಿಯರಿಗೆ ಇಷ್ಟವಾಗೋದು ನೀವು ಗಡ್ದ ಬಿಟ್ಟರೆನೇ ಇನ್ನು ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನ ಕಮೆಂಟ್ ಮಾಡಿ ತಿಳಿಸಿ.