ಜನರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಉತ್ತಮ ವೇದಿಕೆ ಸಿಗುತ್ತಿಲ್ಲ ಅಂತೇನಾದರೂ ಭಾವಿಸಿದರೆ ಅದಕ್ಕೆ ಉತ್ತರವಾಗಿ ಜನರಿಗೆ ಅನುಕೂಲವಾಗಿ ದೊರೆತಿದ್ದೆ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್. ಈಗಲೂ ಟಿಕ್ ಟಾಕ್ ಇದಿಯಾ ಅಂತ ನೀವು ಕೇಳಬಹುದು. ಖಂಡಿತವಾಗಿಯೂ ಇಲ್ಲ ಟಿಕ್ ಟಾಕ್ ಚೈನಾ ಮೂಲದ ಅಪ್ಲಿಕೇಶನ್ ಆದ್ದರಿಂದ ಅದನ್ನ ಈಗಾಗಲೇ ಬ್ಯಾನ್ ಮಾಡಲಾಗಿದೆ. ಆದರೆ ಕಳೆದ ಎರಡು ಮೂರು ವರ್ಷಗಳೊಂದಿಗೆ ಟಿಕ್ ಟಾಕ್ ದೇಶದಲ್ಲಿ ಮೂಡಿಸಿದ ಸಂಚಲನ ಮಾತ್ರ ಬಹು ದೊಡ್ಡದು.
ಹೌದು ಟಿಕ್ ಟಾಕ್ ಎನ್ನುವುದು ಹಲವರ ಪ್ರತಿಭೆಗೆ ನಾಂದಿಯಾಯಿತು. ಇದನ್ನ ಬಳಸಿಕೊಂಡು ನಿಜಕ್ಕೂ ಹಲವು ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದರು. ಕೆಲವರು ಇದನ್ನು ನಿಜಕ್ಕೂ ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದರೆ ಇನ್ನೂ ಕೆಲವರು ಬೇಕಾಬಿಟ್ಟಿಯಾಗಿ ಬಳಸಿಕೊಂಡರು. ಕಂಡ ಕಂಡಲ್ಲಿ ವಿಡಿಯೋಗಳನ್ನು ಮಾಡುವುದು ಬೆಟ್ಟದ ತುದಿಯಲ್ಲಿ ನಿಂತು ವಿಡಿಯೋ ಮಾಡೋದಕ್ಕೆ ಹೋಗಿ ಪ್ರಾಣ ಕಳೆದುಕೊಳ್ಳುವುದು ಹೀಗೆ ಹಲವು ಹುಚ್ಚುತನವನ್ನು ಕೂಡ ಜನ ತೋರಿಸಿದ್ದಾರೆ.
ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡೋದಕ್ಕೆ ಯಾವುದೇ ವಯಸ್ಸಿನ ಮಿತಿ ಇರಲಿಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಟಿಕ್ ಟಾಕ್ ನಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಡಿಯೋವನ್ನು ಮಾಡಿ ಪೋಸ್ಟ್ ಮಾಡುತ್ತಿದ್ದರು. ಹಲವು ಸಿನಿಮಾ ಡೈಲಾಗ್ಗಳಿಗೆ ಡಬ್ ಸ್ಮ್ಯಾಶ್ ಮಾಡುವುದು, ಸಿನಿಮಾ ಹಾಡುಗಳಿಗೆ ಸ್ಟೆಪ್ಸ್ ಹಾಕುವುದು, ಹೊಸ ಹೊಸ ಕಥೆಗಳನ್ನು ಸೃಷ್ಟಿಸಿ ಅದಕ್ಕೆ ಇನ್ ಆಕ್ಟ್ ಮಾಡುವುದು ಹೀಗೆ ಟಿಕ್ ಟಾಕ್ ಒಂದು ಅಪ್ಲಿಕೇಶನ್ ಇಂದ ಜನರಿಗೆ ತರಾವರಿ ಅವಕಾಶಗಳು ತೆರೆದುಕೊಂಡಿತು.
ಇನ್ನು ಮಹಿಳೆಯರ ವಿಚಾರಕ್ಕೆ ಬಂದ್ರೆ, ಕೆಲವರು ನಿಜವಾಗಿಯೂ ನೃತ್ಯ ಅಥವಾ ಸಂಗೀತದಲ್ಲಿ ಹಾಗೆಯೇ ನಟನೆಯಲ್ಲಿ ತಮಗಿರುವ ಪ್ರತಿಭೆಯನ್ನು ಟಿಕ್ ಟಾಕ್ ಅಪ್ಲಿಕೇಶನ್ ಬಳಸಿ ಹೊರಹಾಕಿದರು. ಆದರೆ ಇನ್ನೂ ಕೆಲವಷ್ಟು ಜನ ಅರೆಬರೆಯ ಬಟ್ಟೆ ತೊಟ್ಟು, ಅಂಗಾಂಗಗಳನ್ನು ಪ್ರದರ್ಶನ ಮಾಡುತ್ತಾ ತಾವು ಹಿಟ್ ಆಗಬೇಕು ಅನ್ನುವ ಕಾರಣಕ್ಕೆ ಅಸಭ್ಯವಾದ ಅಸಹ ಎಣಿಸುವ ವಿಡಿಯೋಗಳನ್ನು ಕೂಡ ಮಾಡಿ ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ್ರು.
ಹೀಗೆಲ್ಲ ಮಾಡಿ ಟ್ರೋಲ್ ಆಗಿ ಫೇಮಸ್ ಆಗಿರುವವರು ಅದೆಷ್ಟೋ. ಅತ್ಯಂತ ಕೆಟ್ಟದಾಗಿರುವ ವಿಡಿಯೋ ಕೂಡ ಜಗತ್ತಿನ ಮೂಲೆ ಮೂಲೆ ತಲುಪುತ್ತಿರುವುದಕ್ಕೆ ಇನ್ನೊಂದು ಕಾರಣ ಅಂದ್ರೆ ಟ್ರೋಲ್ ಮೂಲಕ. ಒಬ್ಬರ ವಿಡಿಯೋ ಚೆನ್ನಾಗಿ ಇದ್ದರೂ ಟ್ರೊಲ್ ಆಗುತ್ತೆ ಇಲ್ಲದಿದ್ದರೂ ಟ್ರೋಲ್ ಆಗುತ್ತೆ. ಹೀಗೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡವರು ಒಂದಿಷ್ಟು ಜನವಾದರೆ ಟಿಕ್ ಟಾಕ್ ಅನ್ನು ಕೆಟ್ಟದಾಗಿ ಬಳಸಿಕೊಂಡವರು ಹಲವರು. ಇದೇ ಕಾರಣಕ್ಕೆ ಟಿಕ್ ಟಾಕ್ ಬ್ಯಾನ್ ಕೂಡ ಆಯ್ತು.
ಟಿಕ್ ಟಾಕ್ ಅಪ್ಲಿಕೇಶನ್ ದೇಶದಲ್ಲಿ ತೆಗೆದು ಹಾಕಿದ ಮೇಲೆ, ಸಾಮಾಜಿಕ ಜಾಲತಾಣದಲ್ಲಿ ಶಾರ್ಟ್ ವಿಡಿಯೋಗಳನ್ನು ಮಾಡುವುದರ ಮೂಲಕ, ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಗಳನ್ನು ಮಾಡುವುದರ ಮೂಲಕ ಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸೋದಕ್ಕೆ ಅವಕಾಶವಾಯಿತು. ನಿಜ ಹೇಳಬೇಕೆಂದರೆ ಟಿಕ್ ಟಾಕ್ ರೇಂಜ್ ಗೆ ಈ ಯಾವ ಅಪ್ಲಿಕೇಶನ್ ಗಳು ಬಿಡಿ.
ಹಾಗಾಗಿ ಟಿಕ್ ಟಾಕ್ ನಲ್ಲಿ ಅಂದು ಮಾಡಿದ ಹಲವು ವಿಡಿಯೋಗಳು ಈಗಲೂ ಕೂಡ ವೈರಲ್ ಆಗುತ್ತಿವೆ. ಇಲ್ಲೊಬ್ಬಳು ಭೋಜಪುರಿ ಮಹಿಳೆ ಸೀರೆಯುಟ್ಟು ವೈಯಾರವಾಗಿ ನರ್ತಿಸಿದ ಟಿಕ್ ಟಾಕ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲಾಗಿದೆ. ನೀವು ಈ ವಿಡಿಯೋ ನೋಡಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ.