ಗಂಡ ಅಮ್ಜದ್ ಖಾನ್ ನಿಂದ ಕಿರುಕುಳಕ್ಕೆ ಒಳಗಾದ ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್! ಗಂಡನ ಹೆಸರು ಕೇಳಿ ಬೆಚ್ಚಿಬಿದ್ದ ಜನತೆ, ಇಬ್ಬರ ನಡುವೆ ಆಗಿದ್ದೇನು ಗೊತ್ತಾ?

ಸುದ್ದಿ

ಕನ್ನಡದ ಖ್ಯಾತ ಕಿರುತೆರೆ ನಟಿ ಒಬ್ಬರು ಪ್ರೀತಿಸಿ ಮದುವೆಯಾದ ಗಂಡನಿಂದಲೇ ದೈ-ಹಿಕ ಕಿ-ರುಕು-ಳಕ್ಕೆ ಒಳಗಾಗಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ನಿಜಕ್ಕೂ ವಿಚಿತ್ರ ಎನಿಸುತ್ತದೆ ಬಹಳ ಪ್ರೀತಿ ಮಾಡಿ ನಂತರ ಮದುವೆಯಾದ ಹುಡುಗಿಯನ್ನು ಆತ ಮಾನಸಿಕವಾಗಿ ಹಾಗೂ ದೈ-ಹಿಕವಾಗಿ ಹಿಂ-ಸೆ ನೀಡಿದ್ದಾನೆ. ಇದಕ್ಕೆ ನಟಿ ಈಗಾಗಲೇ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಹೌದು, ಆಕಾಶ ದೀಪ ಧಾರಾವಾಹಿಯ ಮೂಲಕ ಖ್ಯಾತಿಗಳಿಸಿದ ನಟಿ ದಿವ್ಯ ಶ್ರೀಧರ್, ತನ್ನ ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ಆರೋಪ ಮಾಡಿದ್ದಾರೆ. ಗಂಡನಿಂದ ಹಿಂ-ಸೆಗೆ ಒಳಗಾದ ನಟಿ ದಿವ್ಯ ಶ್ರೀಧರ್ ಇದೀಗ ತೀವ್ರ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಗಂಡನ ವಿರುದ್ಧ ದೀರ್ಘವಾದ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೊಲೀಸರಿಗೂ ತಲುಪಿದ್ದು ತನಿಖೆ ಆರಂಭಿಸಿದ್ದಾರೆ.

ದಿವ್ಯ ಶ್ರೀಧರ್ ಹೇಳಿದ್ದೇನು!? ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಖಾನ್ ಇಬ್ಬರು ಪ್ರೀತಿಸಿ 2017ರಿಂದ ಲಿವ್ ಇನ್ ರಿಲೇಶನ್ ನಲ್ಲಿ ಇದ್ದರು. ಇವರಿಬ್ಬರ ಮದುವೆ ಇತ್ತೀಚಿಗಷ್ಟೇ ನೆರವೇರಿತ್ತು. ನಾನು ನನ್ನ ಗಂಡನನ್ನು ಮಕ್ಕಳ ತರಹ ನೋಡಿಕೊಂಡಿದ್ದೇನೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ನನ್ನ ಸಂಬಳದಲ್ಲಿಯೇ ಆತನಿಗೆ ಹಣ ನೀಡಿದ್ದೇನೆ.

ಲಾಕ್ ಡೌನ್ ಸಮಯದಲ್ಲಿ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದ ಆಗ ನಾನೇ ಆತನಿಗೆ ಹಣ ನೀಡಿದ್ದೇನೆ. ನಾವಿಬ್ಬರು ವಾಸವಾಗಿದ್ದ ಫ್ಲಾಟ್ 30 ಲಕ್ಷಕ್ಕೆ ಸಾಲ ಮಾಡಿ ತೆಗೆದುಕೊಂಡು ಪ್ರತಿ ತಿಂಗಳು 30000 ನಾನೇ ಕಟ್ಟುತ್ತಿದ್ದೇನೆ. ಇಷ್ಟು ಚೆನ್ನಾಗಿ ನೋಡಿಕೊಂಡರು ನನ್ನ ಗಂಡನಿಂದಲೇ ನನಗೆ ಕಿರುಕುಳ ಉಂಟಾಗಿದೆ ಆತ ನನಗೆ ಹಿಂ’ಸೆ ಮಾಡಿದ್ದಾನೆ.

ಇನ್ನು ನನ್ನ ಗಂಡ ನಿನ್ನೆ ನನಗೆ ಹಲ್ಲೇ ಮಾಡಿದ್ದಾನೆ. ನಾನು ಕೆಳಕ್ಕೆ ಬಿದ್ದು ಹೊಟ್ಟೆಗೆ ಪೆಟ್ಟು ಬಿದ್ದಿದೆ ಕೈಕಾಲುಗಳು ನೋವಾಗಿದ್ದು ಕೊನೆಗೆ ಲೋ ಬಿಪಿ ಆಗಿ ನಾನು ಅಲ್ಲಿಯೇ ಪ್ರಜ್ಞೆ ತಪ್ಪಿ ಮಲಗಿದ್ದೆ. ಆದರೂ ನನ್ನ ಗಂಡ ನನ್ನನ್ನು ಆಸ್ಪತ್ರೆಗೆ ಸೇರಿಸಲಿಲ್ಲ ನನಗೆ ಸ್ವಲ್ಪ ಸಮಯದ ನಂತರ ಎಚ್ಚರವಾದಾಗ ಆತ ಮನೆಯಿಂದ ಹೊರ ನಡೆದ. ಕಡೆಗೆ ನಾನೇ ಆಸ್ಪತ್ರೆಗೆ ದಾಖಲಾಗುವಂತಾಯಿತು ನನ್ನ ಹೊಟ್ಟೆಗೆ ಪೆಟ್ಟಾಗಿರುವುದರಿಂದ ಯಾವುದಾದರೂ ಗರ್ಭಪಾ’ತ ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈಗ ಆತನಿಗೆ ಕರೆ ಮಾಡಿದರೆ ನನ್ನ ಕಾಲ್ ಗೆ ಸಿಗುತ್ತಿಲ್ಲ. ಆತ ಬೇರೆ ಅಪಾರ್ಟ್ಮೆಂಟ್ ಅಲ್ಲಿ ಇರುವುದು ಗೊತ್ತಾಗಿದೆ. ನನಗೆ ಮರುದಿನ ಅತಿ ರ’ಕ್ತ ಸ್ರಾವ ಆಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ನನಗೆ ನನ್ನ ಗಂಡ ಹಾಗೂ ಮಗು ಇಬ್ಬರು ಬೇಕು. ನನ್ನ ಮಗುವಿಗೆ ಏನು ಆಗಬಾರದು ಎಂದು ಪ್ರಾರ್ಥಿಸಿಕೊಳ್ಳುತ್ತೇನೆ’ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡು ದಿವ್ಯ ಶ್ರೀಧರ್ ವಿಡಿಯೋವನ್ನು ಮಾಡಿದ್ದಾರೆ.

ದಿವ್ಯ ಶ್ರೀಧರ್ ಅವರು ಧಾರಾವಾಹಿ ಮಾತ್ರವಲ್ಲದೆ ಸಿನಿಮಾದಲ್ಲಿಯೂ ನಟಿಸಿದ್ದು ಹುಚ್ಚು ಹುಡುಗಿ, ಸಾಚ, ಹೀಗೂ ಉಂಟಾ, ವಿಚಿತ್ರ ಪ್ರೇಮಿ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೆ ದಿವ್ಯ ಶ್ರೀಧರ್ ಗುರುತಿಸಿಕೊಂಡಿದ್ದು ಮಾತ್ರ ಆಕಾಶ ದೀಪ ಧಾರಾವಾಹಿಯಲ್ಲಿ ನಟಿಸಿದ ನಂತರ. ಇದೀಗ ಪ್ರೀತಿಸಿ ಮದುವೆಯಾಗಿದ್ದ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಪತ್ನಿಗೆ ಕಿರುಕುಳ ಕೊಟ್ಟು ಆಕೆ ಆಸ್ಪತ್ರೆ ಸೇರುವಂತಾಗಿದೆ. ಆದರೆ ಸದ್ಯ ಅಮ್ಜದ್ ಖಾನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿದೆ ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *