ಕನ್ನಡ ಚಲನಚಿತ್ರ ರಂಗದಲ್ಲಿ ಹೆಚ್ಚು ಹೆಸರು ಮಾಡಿರುವ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ, ಹಿರಿಯ ನಟ ಡಿಂಗ್ರಿ ನಾಗರಾಜ್ ಅವರು ಇದೀಗ ಮಹಿಳಾ ಕಲಾವಿದರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎನ್ನುವ ಆ-ರೋಪವನ್ನು ಎದುರಿಸುತ್ತಿದ್ದಾರೆ. ಡಿಂಗ್ರಿ ನಾಗರಾಜ್ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದ ಸಂಘದ ಅಧ್ಯಕ್ಷ. ಇವರು ಬಗ್ಗೆ ಉಪಾಧ್ಯಕ್ಷರಾಗಿದ್ದ ನಟಿ ರಾಣಿ ಇದೀಗ ದೊಡ್ಡ ಆರೋಪ ಮಾಡಿದ್ದಾರೆ.
ಹೌದು, ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಇಬ್ಬರು, ಮಹಿಳಾ ಕಲಾವಿದರ ಜೊತೆ ಅ-ಸ-ಭ್ಯವಾಗಿ ನಡೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಎಂದು ಕೂಡ ನಟಿ ಹಾಗೂ ಸಂಘದ ಉಪಾಧ್ಯಕ್ಷೆ ರಾಣಿ ಗಂಭೀರ ಆ-ರೋಪ ಮಾಡಿದ್ದಾರೆ. ಮಹಿಳಾ ಕಲಾವಿದರ ಜೊತೆಗೆ ಡಿಂಗ್ರಿ ನಾಗರಾಜ್ ಹಾಗು ಆಡುಗೋಡಿ ಶ್ರೀನಿವಾಸ್ ಇಬ್ಬರು ಅ-ಸ-ಭ್ಯವಾಗಿ ವರ್ತಿಸುತ್ತಾರೆ. ಜೊತೆಗೆ ಅ-ವಾ-ಚ್ಯ ಶಬ್ದಗಳಿಂದ ಅ-ವಮಾ-ನ ಮಾಡುತ್ತಾರೆ ಮಹಿಳೆಯರಿಗೆ ಅ-ಶ್ಲೀ-ಲ ವಿಡಿಯೋಗಳನ್ನು ಕಳುಹಿಸುತ್ತಾರೆ.
ಜೊತೆಗೆ ಈ ವಿಚಾರವಾಗಿ ಮಾತನಾಡಿ ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಈ ವಿಷಯದ ಬಗ್ಗೆ ನಾವು ಸಭೆಯಲ್ಲಿಯೂ ಕೂಡ ಚರ್ಚೆ ಮಾಡುತ್ತೇವೆ ಎಂದು ರಾಣಿ ಆ-ರೋಪ ಮಾಡಿದ್ದಾರೆ. ರಾಣಿ ಹೇಳಿರುವ ಪ್ರಕಾರ ನಾವು ಅ-ಶ್ಲೀ-ಲ ವಿಡಿಯೋಗಳನ್ನು ನಮಗೆ ಕಳಿಸಬೇಡಿ ಎಂದು ಹೇಳಿದ್ದೇವೆ. ಅಲ್ಲದೆ ಏಕವಚನದಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ. ನಾವು ಹೇಳಿದ ಹಾಗೆ ಕೇಳಬೇಕು ಇಲ್ಲ ಅಂದ್ರೆ ಇಲ್ಲಿಂದ ಎದ್ದು ಹೋಗಿ ಎಂದು ದಾಭಾಯಿಸುತ್ತಾರೆ.
ಯಾವುದೇ ವಿಷಯದ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡದೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಣಿ ಮಾಧ್ಯಮದ ಮುಂದೆ ಡಿಂಗ್ರಿ ನಾಗರಾಜ್ ಅವರ ವಿರುದ್ಧ ಮಾತನಾಡಿದ್ದಾರೆ. ಅಲ್ಲದೆ ನಾನು ಏನಾದರೂ ಹೇಳಲು ಹೋದರೆ ನೀವು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಹೇಳುತ್ತಾರೆ. ಈಗಾಗಲೇ ನನ್ನ ಬಳಿ ಚರ್ಚೆ ಮಾಡದೇ ನನ್ನನ್ನು ಉಪಾಧ್ಯಕ್ಷ ಸ್ಥಾನದಿಂದ ಇಳಿಸಿದ್ದಾರೆ.
ನಾನು ಈಗಾಗಲೇ ಈ ವಿಷಯದ ಬಗ್ಗೆ ಹಿರಿಯ ಕಲಾವಿದರಿಗೂ ತಿಳಿಸಿದ್ದೇನೆ. ನಾನು ಯಾವುದೇ ಕಾರ್ಯಕ್ರಮ ಮಾಡಲು ಹೊರಟರು ಅದಕ್ಕೆ ಬಂದು ತೊಂದರೆ ಕೊಡುತ್ತಾರೆ ಎಂದು ರಾಣಿ ಬಹುವಾಗಿ ಆರೋಪಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಂಗ್ರಿ ನಾಗರಾಜ್ ಈ ಎಲ್ಲಾ ಆರೊಪಗಳನ್ನು ತಳ್ಳಿ ಹಾಕಿದ್ದಾರೆ.
ವಯಕ್ತಿಕ ಕಾರಣ ತಂದು ಸಂಘದಲ್ಲಿ ಗಲಾಟೆ ಮಾಡಲು ಶುರು ಮಾಡಿದ್ದರು. ಅದಕ್ಕೆ ಅವರನ್ನು ಉಚ್ಛಾಟನೆ ಮಾಡಿದ್ದೇವೆ. ರಾಣಿ ವಿ-ರುದ್ಧ ಮಾ-ನ-ನ-ಷ್ಟ ಮೊ-ಕ-ದ್ದ-ಮೆ ಹಾಕುತ್ತೇವೆ ಎಂದು ಡಿಂಗ್ರಿ ನಾಗರಾಜ್ ಪ್ರ-ತ್ಯಾರೋ-ಪ ಮಾಡಿದ್ದಾರೆ. ಮಾಧ್ಯಮದ ಮುಂದೆ ಈಗಾಗಲೇ ಈ ವಿಷಯ ಬಹಿರಂಗವಾಗಿದ್ದು ಯಾವ ರೀತಿ ತಿರುವು ತೆಗೆದುಕೊಳ್ಳುತ್ತದೆ ಕಾದು ನೋಡಬೇಕು.