PhotoGrid Site 1663305280650

ಖ್ಯಾತ ನಟಿ ಅಮಲಾ ಪೌಲ್ ಅವರನ್ನು ಮಂಚಕ್ಕೆ ಕರೆದ ನಿರ್ಮಾಪಕ! ನಡೆದ ಘಟನೆ ಬಗ್ಗೆ ಎಳೆ ಎಳೆಯಾಗಿ ಸತ್ಯ ಬಿಚ್ಚಿಟ್ಟ ನಟಿ ಹೇಳಿದ್ದೇನು ನೋಡಿ, ಯಾರು ಗೊತ್ತಾ ಆ ನಿರ್ಮಾಪಕ?

ಸುದ್ದಿ

ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಗಳಿಸಬೇಕು, ಅತ್ಯುತ್ತಮ ನಟಿ ಎನಿಸಿಕೊಳ್ಳಬೇಕು ಅಂದ್ರೆ ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅವಕಾಶಗಳು ಸಿಕ್ಕರು ಅದೃಷ್ಟ ಕೈ ಹಿಡಿಯುವುದಿಲ್ಲ. ಇನ್ನು ಕೆಲವರಿಗೆ ಪ್ರತಿಭೆ ಇದ್ದರೂ ಸರಿಯಾದ ಅವಕಾಶಗಳು ಸಿಗುವುದಿಲ್ಲ. ಇನ್ನು ಕೆಲವು ನಟಿಯರು ಸಿನಿಮಾ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಲೈಂ-ಗಿಕ ಕಿ-ರುಕು-ಳಕು ಕೂಡ ಗುರಿಯಾಗಬೇಕಾಗುತ್ತದೆ.

ಅದೆಷ್ಟು ಜನ ನಿರ್ಮಾಪಕರು, ನಿರ್ದೇಶಕರು, ನಟರು ಅಷ್ಟೇ ಅಲ್ಲದೆ ಸಿನಿಮಾ ರಂಗದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುವವರು ಕೂಡ ಕಲಾವಿದೆಯರನ್ನ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರೆ. ಅವರು ಸುಲಭವಾಗಿ ತಮ್ಮ ಕೈಗೆ ಸಿಗಬಹುದು ಎಂದೇ ಭಾವಿಸುತ್ತಾರೆ. ನೀವು ಕಾ’ಸ್ಟಿಂಗ್ ಕೌ’ಚ್ ಬಗ್ಗೆ ಕೇಳಬಹುದು. ಸಾಕಷ್ಟು ನಿರ್ಮಾಪಕರು ಅವಕಾಶ ಬೇಕು ಅಂದ್ರೆ ತಮ್ಮ ಜೊತೆ ಸ್ಪಂದಿಸಬೇಕು ಅಂತ ನೇರವಾಗಿ ಕಲಾವಿದೆಯರನ್ನ ಕೇಳುತ್ತಾರೆ.

ಈ ವಿಷಯವನ್ನು ಕೆಲವರು ಬಾಯಿ ಬಿಟ್ಟು ಹೇಳಿಕೊಳ್ಳುತ್ತಾರೆ ಆದರೆ ಕೆಲವರು ಹೇಳಿಕೊಳ್ಳುವುದೇ ಇಲ್ಲ. ಇತ್ತೀಚಿಗೆ ಬಾಲಿವುಡ್ ನಿಂದ ಸೌತ್ ವರೆಗೆ ಎಲ್ಲಾ ಸಿನಿಮಾ ನಟಿಯರು ಈ ವಿಷಯದಲ್ಲಿ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ ಅದರಲ್ಲಿ ನಟಿ ಅಮಲಾ ಪೌಲ್ ಕೂಡ ಒಬ್ಬರು. ಆದರೆ ಇದು ಅವಕಾಶಕ್ಕಾಗಿ ನಡೆದ ಘಟನೆ ಅಲ್ಲ, ಬದಲಾಗಿ ನಟಿ ಅಂದ್ರೆ ಎಲ್ಲದಕ್ಕೂ ಸಿದ್ಧ ಎನ್ನುವ ಮನೋಭವ ಇರುವವರ ಕಥೆ.

ಸೌತ್ ಸುಂದರಿ ನಟಿ ಅಮಲಾ ಪೌಲ್. ಇವರು ಸಿನಿಮಾ ಮಾತ್ರವಲ್ಲವೇ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಲೂ ಕೂಡ ಸುದ್ದಿಯಲ್ಲಿದ್ದಾರೆ. ಮಲಯಾಳಂ, ತಮಿಳು ಸಿನಿಮಾ ರಂಗದಲ್ಲಿ ಹೆಚ್ಚು ಹೆಸರು ಮಾಡಿರುವ ನಟಿ ಅಮಲಾ ಪೌಲ್. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು. ಹಾಗಾಗಿ ಅಮಲಾ ಪೌಲ್ ಕನ್ನಡಿಗರ ಮೆಚ್ಚಿನ ನಟಿ ಕೂಡ ಹೌದು.

ಇನ್ನು ಅಮಲಾ ಪೌಲ್, 2018ರಲ್ಲಿ ತಮ್ಮ ವೃತ್ತಿ ಜೀವನದಲ್ಲಿ ನಡೆದ ಘಟನೆ ಒಂದನ್ನು ಹೇಳಿಕೊಂಡಿದ್ದಾರೆ. ಅಮಲಾ ಪೌಲ್ ಮಲೇಶಿಯಾದಲ್ಲಿ ನಡೆಯುತ್ತಿದ್ದ ಒಂದು ಕಾರ್ಯಕ್ರಮಕ್ಕೆ ನೃತ್ಯ ಮಾಡಲು ತಯಾರಿ ನಡೆಸುತ್ತಾರೆ. ಚೆನ್ನೈನ ಶ್ರೀಧರ್ ಸ್ಟುಡಿಯೋದಲ್ಲಿ ಅಮಲಾ ಪೌಲ್ ನೃತ್ಯಭ್ಯಾಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಪರಿಚಯಸ್ತ ಉದ್ಯಮಿಯಿಂದಲೇ ಅಮಲಾ ಪೌಲ್ ಅವರಿಗೆ ಅವಮಾನವೂ ಆಗುತ್ತೆ.

ಹೌದು, ಅಮಲಾ ಪೌಲ್ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಅವರಿಗೆ ಪರಿಚಯವಿದ್ದ ಉದ್ಯಮಿ ಅಳಗೇಶನ್ ಎನ್ನುವ ವ್ಯಕ್ತಿ ಅಮಲಾ ನೃತ್ಯಭ್ಯಾಸ ಮಾಡುತ್ತಿದ್ದ ಸ್ಥಳಕ್ಕೆ ಬರುತ್ತಾನೆ. ನಿನ್ನ ರೇ’ಟ್ ಎಷ್ಟು ಅಂತ ನೇರವಾಗಿ ಕೇಳುತ್ತಾನೆ. ಅಲ್ಲದೆ ಮಲೇಶಿಯಾ ಕೆ ಹೋಗುವ ವೇಳೆ ಒಬ್ಬ ವ್ಯಕ್ತಿಗೆ ಕೋಆಪರೇಟ್ ಮಾಡುತ್ತೀರಾ ಅಂತ ಕೇಳಿಯೇ ಬಿಡುತ್ತಾನೆ. ಇದನ್ನು ಕೇಳಿ ನಟಿ ಅಮಲಾ ಪೌಲ್ ಅವರಿಗೆ ಒಂದು ಕ್ಷಣ ಏನು ಹೇಳಬೇಕು ಎನ್ನುವುದೇ ಅರ್ಥವಾಗುವುದಿಲ್ಲ.

PhotoGrid Site 1663305295186

ಆದರೆ ಈ ಮಾತಿಗೆ ಕೈಕಟ್ಟಿ ಕೂರದ ಅಮಲಾ ಪೌಲ್ ಕೂಡಲೇ ಚೆನ್ನೈನ ಪಾಂಡಿ ಬಜಾರ್ ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ದೂರು ನೀಡುತ್ತಾರೆ. ಇನ್ನು ಸ್ಟುಡಿಯೋ ನಡೆಸುತ್ತಿದ್ದ ಶ್ರೀಧರ್ ಅವರ ಕೈವಾಡ ಕೂಡ ಇದರಲ್ಲಿದೆ ಅಂತ ಅಮಲಾ ಪೌಲ್ ಅವರ ವಿರುದ್ಧವೂ ದೂರು ದಾಖಲಿಸಿದ್ರು. ಈಗಲೂ ಶ್ರೀಧರ್ ಹಾಗೂ ಅಳಗೇಶನ್ ಇಬ್ಬರು ಈ ಕೇಸ್ ಗೆ ಸಂಬಂಧಪಟ್ಟ ಹಾಗೆ ಕೋರ್ಟ್ ಗೆ ಅಲೆಯುತ್ತಿದ್ದಾರೆ. ಅದೆಷ್ಟೇ ಕೇಳಿಕೊಂಡ್ರು ಅಮಲಾ ಪೌಲ್ ಕೇಸ್ ವಾಪಸ್ ಮಾತ್ರ ಪಡೆದಿಲ್ಲ ಹಾಗಾಗಿ ಇಬ್ಬರೂ ಉದ್ಯಮಿಗಳು ಇದೀಗ ವಿಚಾರಣೆಯನ್ನು ಎದುರಿಸಬೇಕಾಗಿದೆ.

Leave a Reply

Your email address will not be published. Required fields are marked *