ಸುಮಾರು 4 ದಶಕಗಳ ಕಾಲ ಬಾಲಿವುಡ್ ಸಿನಿಮಾ ರಂಗವನ್ನು ಆಳಿದ ನಟಿ ಶ್ರೀದೇವಿ. ದೇಶದ ಮೊಟ್ಟಮೊದಲ ಸೂಪರ್ ಸ್ಟಾರ್ ನಟಿ ಎನಿಸಿಕೊಂಡವರು ಇವರು. ವಿಶ್ವ ಸುಂದರಿ ಶ್ರೀದೇವಿ ಬಾಲಿವುಡ್ ನಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು. ಶ್ರೀದೇವಿ ಅವರ ಸಹಜ ನಟನಿಗೆ ಮಾರು ಹೋಗದವರೇ ಇಲ್ಲ. ಬಾಲಿವುಡ್ ನ ಎಲ್ಲಾ ಸ್ಟಾರ್ ನಟರ ಜೊತೆ ಶ್ರಿದೇವಿ ನಟಿಸಿದ್ದಾರೆ. ನಟಿ ಶ್ರೀದೇವಿ ಅಚಾನಕ್ಕಾಗಿ ನಮ್ಮನ್ನು ಅಗಲಿದರು ಅವರ ನೆನಪುಗಳು ಮಾತ್ರ ಶಾಶ್ವತ.
ಯಾಕಂದ್ರೆ ಶ್ರೀದೇವಿ ಅವರು ನಟಿಸಿದ ಎಲ್ಲಾ ಪಾತ್ರಗಳಿಗೂ ಜೀವ ತುಂಬುತ್ತಿದ್ದರು. ಬಾಲಿವುಡ್ ಮಾತ್ರವಲ್ಲದೇ ತಮಿಳು ತೆಲುಗು ಮಲಯಾಳಂ ಚಿತ್ರಗಳಲ್ಲಿಯೂ ಕೂಡ ಶ್ರೀದೇವಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶ್ರೀದೇವಿ ನಟನೆಯ ಇಂಗ್ಲಿಷ್ ವಿಂಗ್ಲಿಷ್ ಚಿತ್ರ ಈಗಲೂ ಜನರಿಗೆ ಕಣ್ಣು ಕಟ್ಟಿದ ಹಾಗೆ ಇದೆ. ಇನ್ನು ತಾಯಿಯಂತೆಯೇ ಮಗಳು ಜಾಹ್ನವಿ ಕಪೂರ್ ಕೂಡ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜಾಹ್ನವಿ ಕಪೂರ್ ಜನಿಸಿದ್ದು ಮಾರ್ಚ್ 6, 1997. ಆರಂಭದಲ್ಲಿಯೇ ಮಾಡಲಿಂಗ್ ನಲ್ಲಿ ಆಸಕ್ತಿ ಇದ್ದ ಜಾಹ್ನವಿ ಕಪೂರ್ ಇದೀಗ ನಟನಾ ಜಗತ್ತಿಗೆ ಪ್ರವೇಶ ಮಾಡಿದ್ದಾರೆ. ಇದೀಗ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಕೂಡ ಸಿನಿ ಜರ್ನಿ ಆರಂಭಿಸಿದ್ದಾರೆ. ಆದರೆ ತಾಯಿ ಶ್ರೀದೇವಿಯಂತೆ ಸಿನಿಮಾದಲ್ಲಿ ತಮ್ಮದೇ ಆದ ಟ್ರೆಂಡ್ ಸೃಷ್ಟಿಸುವಲ್ಲಿ ಜಾಹ್ನವಿ ಕಪೂರ್ ಸಕ್ಸಸ್ ಆಗೋದು ಡೌಟ್.
ಯಾಕಂದ್ರೆ ಇವರಿಗೆ ನಟಿಸಿದ ಸಿನಿಮಾಗಳ ಮೂಲಕ ನಟನೆಯ ವಿಷಯದಲ್ಲಿ ಹೆಚ್ಚು ಗಮನ ಸೆಳೆದಿಲ್ಲ ನಟಿ ಜಾಹ್ನವಿ. ಆದರೆ ಜಾಹ್ನವಿ ಕಪೂರ್ ಹೆಚ್ಚು ಸುದ್ದಿಯಲ್ಲಿರೋದೆ ಅವರು ಧರಿಸುವ ಮಾದಕ ಬಟ್ಟೆಗಳಿಂದ. ಹೌದು ನಟಿ ಜಾಹ್ನವಿ ಕಪೂರ್ ಬಹಳ ಮಾಡ್ರನ್ ಡ್ರೆಸ್ ಗಳನ್ನು ಧರಿಸುತ್ತಾರೆ. ಸಿನಿಮಾಗಿಂತಲೂ ಸಾಮಾಜಿಕ ಜಾಲತಾಣದಲ್ಲಿಯೇ ಹೆಚ್ಚು ಆಕ್ಟಿವ್ ಆಗಿರುವ ಜಾಹ್ನವಿ ಕಪೂರ್ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಜಾಹ್ನವಿ ಕಪೂರ್ ಅವರ ಖಾತೆಯನ್ನು ಲಕ್ಷಾಂತರ ಅನುಯಾಯಿಗಳಿದ್ದಾರೆ. ಇತ್ತೀಚಿಗೆ ಜಾಹ್ನವಿ ಕಪೂರ್ ತಾವು ಧರಿಸುವ ಬಟ್ಟೆಗಳಿಂದಲೇ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಪಬ್ಲಿಕ್ ಸ್ಥಳದಲ್ಲಿಯೂ ಕೂಡ ಸಾಕಷ್ಟು ಬಟ್ಟೆಗಳನ್ನ ಧರಿಸುವ ಜಾಹ್ನವಿ ಕಪೂರ್ ಮಾತಿನಲ್ಲಿಯೂ ಕೂಡ ಸಕ್ಕತ್ ಬೋಲ್ಡ್! ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗವಹಿಸಿದ ಜಾಹ್ನವಿ ಕಪೂರ್ ಸಾಕಷ್ಟು ಓಪನ್ ಆಗಿ ಮಾತನಾಡಿದ್ದಾರೆ.
ಬಾಲಿವುಡ್ ನಲ್ಲಿ ಧಡಕ್ ಸಿನಿಮಾದ ಮೂಲಕ ಸಿನಿ ಆರಂಭಿಸಿದವರು ಜಾಹ್ನವಿ. ನಟನಾ ಹಿನ್ನೆಲೆ ಹೊಂದಿರುವ ಜಾಹ್ನವಿ ಕಪೂರ್ ಅವರಿಗೆ ನಟನೆಯಲ್ಲಿ ಗ್ರಿಪ್ ಇನ್ನೂ ಸಿಕ್ಕಂತಿಲ್ಲ. ಸದ್ಯ ವಿಶೇಷವಾದ ಫೋಟೋ ಶೂಟ್ ಗಳ ಮೂಲಕ ಗಮನಸೆಳೆಯುತ್ತಿರುವ ಜಾಹ್ನವಿ ಕಪೂರ್ ಇನ್ನು ಮುಂದೆ ನಟಿಸುವ ಸಿನಿಮಾಗಳ ಮೂಲಕವಾದರೂ ಹೆಚ್ಚು ಗುರುತಿಸಿಕೊಳ್ಳುತ್ತಾರಾ ಕಾದು ನೋಡಬೇಕು. ಜಾಹ್ನವಿ ಕಪೂರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಫೋಟೋಗಳನ್ನು ವೀಕ್ಷಿಸಬಹುದು. ಜಾಹ್ನವಿ ಕಪೂರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.