ಕನ್ನಡ ಚಿತ್ರರಂಗದಲ್ಲಿ ಅನೇಕ ಹಾಸ್ಯ ನಟರ ನಗೆಗಡಲಲ್ಲಿ ತೇಲಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣನವರ ನೆನಪು ಎಲ್ಲರಿಗೂ ಇರಬಹುದು. ಟೆನ್ನಿಸ್ ಕೃಷ್ಣ ಎಂದ ಕೂಡಲೆ.. ಕನ್ನಡ ಸಿನಿಪ್ರಿಯರಿಗೆ ಥಟ್ ಅಂತ ನೆನಪಾಗುವ ಡೈಲಾಗ್ – ‘’ಇನ್ನೂ ಬೆಲ್ಲು ಹೊಡೀಲಿಲ್ಲವೇ..?’’. ಅಷ್ಟರಮಟ್ಟಿಗೆ ‘ಗಡಿಬಿಡಿ ಅಳಿಯ’ ಚಿತ್ರದಲ್ಲಿನ ಟೆನ್ನಿಸ್ ಕೃಷ್ಣ ಡೈಲಾಗ್ ಫೇಮಸ್ ಆಗಿತ್ತು.
ಹೌದು, ಅನೇಕ ಸಿನಿಮಾಗಳಲ್ಲಿ ತಮ್ಮ ಹಾಸ್ಯ ಚಟಾಕಿ ಹಾಗೂ ನಟನೆಯ ಮೂಲಕವೇ ಮನಸ್ಸನ್ನು ಗೆದ್ದವರು ಟೆನ್ನಿಸ್ ಕೃಷ್ಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಬೆಂಗಳೂರಿನಲ್ಲಿ ಹುಟ್ಟಿದರು. ಇವರ ಬಾಲ್ಯ ವಿದ್ಯಾಬ್ಯಾಸವನ್ನೆಲ್ಲಾ ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿದರು. ಇವರಿಗೆ ಟೆನ್ನಿಸ್ ಕೃಷ್ಣ ಎಂದು ಹೆಸರು ಬರಲು ಕೂಡ ಕಾರಣವಿದೆ. ಸಿನಿರಂಗಕ್ಕೆ ಬರುವ ಮೊದಲು ಇವರು ಟೆನ್ನಿಸ್ ಕೋಚ್ ಆಗಿದ್ದರು.
ಜೊತೆಗೆ, ಕನ್ನಡ ಚಿತ್ರರಂಗದಲ್ಲಿ ಆ ಸಮಯಕ್ಕಾಗಲೇ ಕೃಷ್ಣ ಹೆಸರಿನಲ್ಲಿ ಬೇರೆ ಕಲಾವಿದರು ಇದ್ದರು. ಈ ಕಾರಣಕ್ಕಾಗಿ ಇವರ ಹೆಸರಿನ ಮುಂದೆ ಟೆನ್ನಿಸ್ ಎಂಬ ಹೆಸರನ್ನು ಇಡಲಾಗಿತ್ತು. ಟೆನ್ನಿಸ್ ಕೃಷ್ಣ ಎಂದರೆ ಕನ್ನಡದಲ್ಲಿ 600ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ, ರೆಕಾರ್ಡ್ ಸೃಷ್ಟಿಸಿದ್ದಾರೆ. ಇನ್ನು ನಟ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಕಾಂಬಿನೇಷನ್ ದೃಶ್ಯಗಳು ಸಿನಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದವು. ಆದರೆ ಟೆನ್ನಿಸ್ ಕೃಷ್ಣನವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಈ ಕುರಿತು ಹಾಸ್ಯ ನಟ ಟೆನ್ನಿಸ್ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
ಹಾಗಾದರೆ ಟೆನ್ನಿಸ್ ಕೃಷ್ಣ ಹೇಳಿದ್ದೇನು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಅವರ ಮಾರಮ್ಮನ ಡಿ-ಸ್ಕೊ ಡೈಲಾಗ್ ಇಂದಿಗೂ ಫೇಮಸ್ ಆಗಿದೆ. ಇನ್ನು ಕನ್ನಡ ರಾಪ್ ಸಿಂಗರ್ ಆಲ್ ಓಕೆ ಈ ಡೈಲಾಗ್ ಇಟ್ಟುಕೊಂಡು ಹೊಸ ರಾಪ್ ಸಾಂಗ್ ಮಾಡಿದರು. ಆ ರಾಪ್ ಸಾಂಗ್ ನಲ್ಲಿ ಟೆನ್ನಿಸ್ ಕೃಷ್ಣ ಕಾಣಿಸಿಕೊಂಡು, ಮಾರಮ್ಮನ ಡಿಸ್ಕೊ ಹಾಡು ಫೇಮಸ್ ಎಲ್ಲರ ಮೆಚ್ಚುಗೆ ಗಳಿಸಿತ್ತು.
ಇನ್ನು 1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ನಟನೆ ಶುರು ಮಾಡಿದ ಟೆನ್ನಿಸ್ ಕೃಷ್ಣ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಫೇಮಸ್ ಆದರು. ಇನ್ನು ರಾಜ ಕೆಂಪು ರೋಜಾ ಇವರು ನಟಿಸಿದ ಮೊದಲ ಸಿನಿಮಾವಾಗಿದ್ದು, ನಂತರ ಒಂದಲ್ಲ ಒಂದು ಅವಕಾಶಗಳನ್ನು ಸೃಷ್ಟಿಸಿಕೊಂಡು ಫೇಮಸ್ ಆಗಿ ಬಿಟ್ಟರು. ಕನ್ನಡದ ಖ್ಯಾತ ನಟರಾದ ಡಾ. ರಾಜ್ ಕುಮಾರ್, ಸಾಹಸಸಿ-oಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅನಂತ್ ನಾಗ್ ಎಲ್ಲರ ಸಿನಿಮಾದಲ್ಲೂ ಟೆನ್ನಿಸ್ ಕೃಷ್ಣ ಹಾಸ್ಯ ಪಾತ್ರ ಇದ್ದೆ ಇರುತ್ತಿತ್ತು.
ಅಂದಹಾಗೆ, ಸಾಕಷ್ಟು ಸಿನಿಮಾದಲ್ಲಿ ಹಾಸ್ಯನಟನಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಂದಹಾಗೆ ಟೆನ್ನಿಸ್ ಕೃಷ್ಣನವರ ಮಗಳು ನೋಡಲು ಸುಂದರವಾಗಿದ್ದಾರೆ. ಇನ್ನು ಇವರ ಮಗಳ ಹೆಸರು ರಂಜಿತಾ. ಮದುವೆ ಕೂಡ ಆಗಿದ್ದು, ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸಿನಿಮಾರಂಗದಿಂದ ದೂರ ಇರುವ ರಂಜಿತಾ ಅವರಿಗೂ ಮದುವೆ ಕೂಡ ಆಗಿದ್ದು, ಮಗು ಕೂಡ ಇದೆ. ಆದರೆ ಟೆನ್ನಿಸ್ ಕೃಷ್ಣ ಸದ್ಯಕ್ಕೆ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಟೆನ್ನಿಸ್ ಕೃಷ್ಣ, ಬಿಗ್ ಬಾಸ್ ಸೀಸನ್ 2 ರಿಂದಲೂ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಾ ಇದ್ದಾರೆ. ಕಳೆದ ಸರಿಯು ಈ ಕುರಿತು ಪ್ರಚಾರವಾಗಿತ್ತು. ಈ ಸಲವು ಈ ಕುರಿತು ದೊಡ್ಡ ಪ್ರಚಾರವೇ ಆಗೋಗಿದೆ. ನಾನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೋಟಿ ಕೊಟ್ರು ಕೂಡ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು. ಒಂದು ಸರಿ ಮಾತನಾಡಿದ್ರೆ ನಾನು ಅದೇ ರೀತಿ ನಡೆದುಕೊಳ್ಳೋನು, ಕೋಟಿ ಕೊಟ್ರು ಕೂಡ ಬಿಗ್ ಬಾಸ್ ಮನೆಗೆ ಬರಲ್ಲ ಎಂದು ಹೇಳಿ ಬಿಟ್ಟಿದ್ದೇನೆ. ಇವನನ್ನು ಬಿಗ್ ಬಾಸ್ ಮನೆಗೆ ಕರೀಲಿ ಎಂದು ಹೀಗೆ ಮಾತಾಡ್ತಾ ಇದ್ದಾನೆ ಎಂದು ಕೆಲವರು ಟ್ವೀಟ್ ಮಾಡಿದ್ದರು