ಸಿನಿಮಾ ಇಂಡಸ್ಟ್ರಿಯಲ್ ಇರುವ ತಾರೆಯರ ವೈಯಕ್ತಿಕ ವಿಚಾರ ಬಹಳ ಇಂಟರೆಸ್ಟಿಂಗ್ ಆಗಿರುತ್ತೆ ಜನರು ಅದರ ಬಗ್ಗೆ ಹೆಚ್ಚು ಕುತೂಹಲ ಬೆಳೆಸಿಕೊಂಡಿರುತ್ತಾರೆ ಯಾವುದೇ ನಟಿಯ ಮದುವೆ ವಿಚಾರ ಬಂದರೆ ಅದರಲ್ಲಿ ಹೆಚ್ಚಿನ ಆಸಕ್ತಿ ತೋರೋದೆ ಅವರ ಅಭಿಮಾನಿಗಳು. ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಇವರು ಅಪ್ಪಟ ಕನ್ನಡತಿಯು ಹೌದು. ಆದರೆ ಅವರು ಬೆಳೆದಿದ್ದು ಸಿನಿಮಾ ಮಾಡುತ್ತಿರುವುದು ಎಲ್ಲವೂ ಹೈದ್ರಾಬಾದ್ ನಲ್ಲಿ.
ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಗಾಗ ಹಲವು ಮಾತುಗಳು, ಗಾಸಿಪ್ ಗಳು ಬರುತ್ತಲೇ ಇರುತ್ತೆ. ಆದರೆ ಇದುವರೆಗೆ ಅವರ ಮದುವೆಗೆ ಸಂಬಂಧಪಟ್ಟ ಹಾಗೆ ಕೇಳಿರುವ ಮಾತುಗಳು ಯಾವುದು ಸತ್ಯವಾಗಿರಲಿಲ್ಲ. ಹೌದು, ಅನುಷ್ಕಾ ಶೆಟ್ಟಿ ಅವರು ನಟ ಪ್ರಭಾಸ್ ಅವರನ್ನ ಪ್ರೀತಿಸುತ್ತಿದ್ದಾರೆ ಅವರನ್ನೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೂಡ ಬಂದಿದ್ದವು.
ಆದರೆ ಟಾಲಿವುಡ್ ಮೂಲವೇ ಕೊಟ್ಟ ಈ ಸುದ್ದಿಯು ತಪ್ಪಾಗಿತ್ತು. ಹೌದು ಇದೀಗ ಮತ್ತೆ ತೆಲುಗಿನ ಖ್ಯಾತ ನಟಿ ಮಂಗಳೂರಿನ ಮೂಲದ ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಚಾರ ಮೇನ್ ಸ್ಟ್ರೀಮ್ ಗೆ ಬಂದಿದೆ. ಅಂದಹಾಗೆ ಪ್ರಭಾಸ್ ಅವರನ್ನ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಿಲ್ಲ ಆದರೆ ಅನುಷ್ಕಾ ಶೆಟ್ಟಿ ಅವರನ್ನ ಕೈ ಹಿಡಿಯುವ ಆ ಲಕ್ಕಿ ಮ್ಯಾನ್ ಯಾರು ಗೊತ್ತಾ ಮುಂದೆ ಓದಿ.
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ. ಅರುಂಧತಿಯಾಗಿ ಹಾಗೂ ಬಾಹುಬಲಿಯಲ್ಲಿ ದೇವಸೇನಾಳಾಗಿ ಎಲ್ಲರ ಗಮನ ಸೆಳೆದಿದ್ದರು ಅನುಷ್ಕಾ ಶೆಟ್ಟಿ, ಅವರಿಗೆ ಈ ಪೌರಾಣಿಕ ಪಾತ್ರಗಳು ಬಹಳ ಚೆನ್ನಾಗಿ ಒಪ್ಪುತ್ತವೆ ಅಂತ ಜನರು ಪ್ರಶಂಸೆ ಮಾಡಿದ್ರು. ಈಗಾಗಲೇ ತೆಲುಗು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿರುವ ಅನುಷ್ಕಾ ಶೆಟ್ಟಿ ಸ್ವಲ್ಪ ದಪ್ಪಗಾಗಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ರಂಗದಿಂದ ಸ್ವಲ್ಪ ದೂರ ಉಳಿದರು.
ಅಲ್ಲದೆ ತೂಕ ಇಳಿಸಿಕೊಳ್ಳಲು ಫಾರಿನ್ ಗೆ ಹೋಗಿದ್ದಾರೆ ಎನ್ನುವ ಮಾತು ಕೂಡ ಇತ್ತು. ಅನುಷ್ಕಾ ಶೆಟ್ಟಿ ಅವರು ಇದೀಗ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಚಾರ ಹೆಚ್ಚು ವೈರಲ್ ಆಗುತ್ತಿದೆ. ಅತ್ಯಂತ ಸ್ಫುರದ್ರೂಪಿ ಆಗಿರುವ ಅನುಷ್ಕಾ ಶೆಟ್ಟಿ ಅವರಿಗೆ ಇದೀಗ ವಯಸ್ಸು 40 ಆದರೂ ಇನ್ನೂ ನಮ್ಮ ನೆಚ್ಚಿನ ನಟಿಗೆ ಮದುವೆ ಆಗ್ಲಿಲ್ವಲ್ಲ ಅಂತ ಅಭಿಮಾನಿಗಳು ಆಗಾಗ ಕೇಳುತ್ತಿದ್ದರು.
ಇದೀಗ ಅನುಷ್ಕಾ ಶೆಟ್ಟಿ ಅವರು ಹೈದರಾಬಾದ್ ಮೂಲದ ಖ್ಯಾತ ಉದ್ಯಮಿ ಒಬ್ಬರನ್ನು ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಗೋಲ್ಡ್ ಬ್ಯುಸನೆಸ್ ಮ್ಯಾನ್ ಆಗಿರುವ ಇವರು ಸಾಕಷ್ಟು ಚಿನ್ನದ ಅಂಗಡಿಗಳ ಒಡೆಯ ಎನ್ನಲಾಗುತ್ತಿದೆ. ಹಾಗಾಗಿ ಈ ಉದ್ಯಮಿಯ ಜೊತೆ ಅನುಷ್ಕಾ ಶೆಟ್ಟಿ ಶೀಘ್ರವೇ ಹಾಸ್ಯಮಣೆ ಏರಲಿದ್ದಾರೆ. ಎನ್ನುವುದು ಸದ್ಯದ ಟಾಲಿವುಡ್ ಸುದ್ದಿ.
ಸದ್ಯ ನವೀನ್ ಪೊಲೀಸ್ ಶೆಟ್ಟಿ ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರ ಒಂದರಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸುತ್ತಿದ್ದಾರೆ ಯು ವಿ ಕ್ರಿಯೇಶನ್ ಈ ಚಿತ್ರಕ್ಕೆ ಮಹೇಶ್ ಪಿ ನಿರ್ಮಾಪಕರು. ಅನುಷ್ಕಾ ಶೆಟ್ಟಿ ಚಿತ್ರದ ನಡುವೆ ಮದುವೆಯ ವಿಚಾರವೂ ಕೂಡ ಸದ್ಯ ಟಾಲಿವುಡ್ ನ ಬಾರಿ ಸುದ್ದಿ ಮಾಡಿದೆ.