ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಮಂತ ಎನ್ನುವುದು ಬಹಳ ದೊಡ್ಡ ಹೆಸರು. ಅವರು ಇದೀಗ ಸುಮಾರು ಸಿನಿಮಾ ರಂಗದಲ್ಲಿ 12 ವರ್ಷ ಕೆಲಸ ಮಾಡಿದ್ದಾರೆ. ಆದರೆ ಈ ಹನ್ನೆರಡು ವರ್ಷಗಳಲ್ಲಿ ಸಿನಿಮಾ ರಂಗದಲ್ಲಿ ಮಾತ್ರ ಅವರ ಬೇಡಿಕೆಯಾಗಲಿ ಅವರಿಗೆ ಸಿಗಬೇಕಾದ ಅವಕಾಶಗಳಾಗಲಿ ಕಡಿಮೆಯಾಗಿಲ್ಲ ಇತ್ತೀಚೆಗೆ ವೈಯಕ್ತಿಕ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಿರುವ ಸಮಂತ ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಹೇಳಿಕೊಂಡಿದ್ದಾರೆ.
ಹೌದು ನಟಿ ಸಮಂತಾ ಕಳೆದ ಕೆಲವು ತಿಂಗಳಿನಿಂದ ಮಯೋಸಿಟಿಸ್ ಎನ್ನುವ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಈ ಸಮಸ್ಯೆಯನ್ನು ಎದುರಿಸಿ ಫೈಟ್ ಮಾಡಿ ಗೆದ್ದವರು ಸಾಕಷ್ಟು ಜನ ಇದ್ದಾರೆ ಅದೇ ರೀತಿ ಸಮಂತಾ ಕೂಡ ಈ ಒಂದು ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಆದರೆ ಸಮಂತಾ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ.
ಅವರನ್ನು ಇನ್ನಷ್ಟು ಚೈತನ್ಯಗೊಳಿಸುವುದು ಅಭಿಮಾನಿಗಳ ಜವಾಬ್ದಾರಿ. ಸಮಂತಾ ಅವರ ಅಭಿನಯದ ಯಶೋಧ ಸಿನಿಮಾ ಇನ್ನೇನು ತೆರೆ ಕಾಣಲಿದೆ. ತಮ್ಮ ಅನಾರೋಗ್ಯದ ನಡುವೆಯೂ ಈ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾರೆ ನಟಿ ಸಮಂತಾ. ಯಶೋದಾ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದ ಹಾಗೆ ಜನರು ಅದನ್ನು ಬಹುವಾಗಿ ಮೆಚ್ಚಿಕೊಂಡರು. ಬಾಡಿಗೆ ತಾಯಿ ಸುತ್ತಲಿನ ಕಥೆ ಇದಾಗಿದ್ದು ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಸಿನಿಮಾ.
ಸಮಂತ ಅವರಿಗೆ ಫೈಟಿಂಗ್ ಅಂದ್ರೆ ಇಷ್ಟವಂತೆ ಈ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ಸಮಂತ ಕ್ಲೈಮ್ಯಾಕ್ಸ್ ನಲ್ಲಿ ಮಾಡಿರುವ ಫೈಟಿಂಗ್ ಸೀನ್ ಜನರಿಗೆ ಬಹಳ ಇಷ್ಟವಾಗುತ್ತೆ ಎಂದು ಹೇಳಿದ್ದಾರೆ. ನಟಿ ಸಮಂತಾ ಯಶೋದಾ ಸಿನಿಮಾದ ಪ್ರಚಾರದ ವೇಳೆ ಕೆಲವು ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಖಾಯಿಲೆಯ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದರು.
‘ನಾನು ಸ್ವಲ್ಪ ಭಯದಿಂದಲೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದೆ. ಈಗಾಗಲೇ ಸಾಕಷ್ಟು ಕೆಟ್ಟ ದಿನಗಳನ್ನು ನೋಡಿರುವ ನಾನು ಮತ್ತೆ ಜನರು ಏನಾದರೂ ಹೇಳಿದ್ರೆ ಅದನ್ನ ಯಾವ ರೀತಿ ಸ್ವೀಕಾರ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಆದರೆ ಎಲ್ಲರೂ ನನಗೆ ಅತ್ಯುತ್ತಮ ಸಪೋರ್ಟ್ ನೀಡಿದ್ದಾರೆ ನನ್ನ ಅನಾರೋಗ್ಯದ ಬಗ್ಗೆ ಕೇಳಿ ಸಾಕಷ್ಟು ವಿಷಯ ಕಳುಹಿಸಿದ್ದಾರೆ.
ಇದು ನಿಜಕ್ಕೂ ನನಗೆ ಒಂದು ಸ್ಟ್ರೆಂತ್ ನೀಡಿದೆ. ಎಂದು ಹೇಳಿದ್ದಾರೆ ಸಮಂತ. ನಾನು ಗ್ಲಾಮರ್ ಆಗಿ ಫೋಟೋಶೂಟ್ ಮಾಡಿಸುತ್ತೇನೆ ಗ್ಲಾಮರಸ್ ಲೈಫ್ ಲೀಡ್ ಮಾಡುತ್ತೇನೆ ಅಂದರೆ ಅದರ ಹಿಂದೆ ಗ್ಲಾಮರ್ ಇಲ್ಲದೆ ಇರುವ ಸಮಯ ಕೂಡ ಇರುತ್ತೆ, ಆ ವಿಷಯವನ್ನು ಕೂಡ ಜನರಿಗೆ ತಲುಪಿಸಬೇಕು ಎನ್ನುವುದು ನನ್ನ ಉದ್ದೇಶ. ಎಲ್ಲರಿಗೂ ಒಳ್ಳೆಯ ದಿನ ಹಾಗೂ ಕೆಟ್ಟ ದಿನಗಳು ಇದ್ದೇ ಇರುತ್ತವೆ ಎಂದು ಜನರಿಗೂ ತಿಳಿಯಬೇಕು.
ಈಗಾಗಲೇ ಸಾಕಷ್ಟು ಕೆಟ್ಟ ಸಮಯ ನೋಡಿರುವ ನಾನು ಇನ್ನು ಮುಂದೆ ಅನಾರೋಗ್ಯದಿಂದ ಚೇತರಿಸಿಕೊಂಡು ಉತ್ತಮ ಲೈಫ್ ಲೀಡ್ ಮಾಡುವ ನಿರೀಕ್ಷೆ ಇದೆ ಬಹುಶ: ಮುಂದಿನ ಮೂರು ತಿಂಗಳಲ್ಲಿ ಬೇರೆ ರೀತಿಯ ಸಮಂತಾಳನ್ನು ನೀವು ನೋಡಬಹುದು ಎಂದು ನಟಿ ಸಮಂತಾ ಬಹಳ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.