ತಮ್ಮದೇ ಆದ ಕಾರಣಗಳಿಂದ ಪ್ರೇಮ ಸಾಕಷ್ಟು ವರ್ಷ ಸಿನಿಮಾ ರಂಗದಿಂದ ದೂರ ಉಳಿದರು. ಆದರೆ ಇದೀಗ ಹೊಸ ಸಿನಿಮಾ ಒಂದರ ಮೂಲಕ ಮತ್ತೆ ನಟನಾರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಒಂದು ವಿಭಿನ್ನವಾದ ಪಾತ್ರವನ್ನು ವಿಭಿನ್ನವಾದ ಕಥೆ ಇರುವ ಸಿನಿಮಾದಲ್ಲಿ ನಿಭಾಯಿಸುತ್ತಿದ್ದಾರೆ ನಟಿ ಪ್ರೇಮ ಅದುವೇ ವೆಡ್ಡಿಂಗ್ ಗಿಫ್ಟ್. ಕನ್ನಡ ಸಿನಿಮಾರಂಗದಲ್ಲಿ ನಟಿ ಪ್ರೇಮ ಅಂದ್ರೆ ಯಾರಿಗೂ ಗೊತ್ತಿರದೆ ಇರಲು ಸಾಧ್ಯವೇ ಇಲ್ಲ.
ಒಂದು ಕಾಲದಲ್ಲಿ ತನ್ನದೇ ಆದ ಅಮೋಘ ಅಭಿನಯದಿಂದ ಕನ್ನಡ ಸಿನಿಮಾರಂಗದಲ್ಲಿ ತನ್ನ ಛಾಪನ್ನು ಮೂಡಿಸಿದ ನಟಿ ಇವರು. ಓಂ ಚಿತ್ರದಿಂದ ಹಿಡಿದು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ನಟಿ ಪ್ರೇಮಾ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಏಕಾ ಏಕಿ ಚಿತ್ರರಂಗದಿಂದ ದೂರ ಸರಿದರು. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರವನ್ನು ತಂದಿದ್ದ ಸಂಗತಿ.
ನಟಿ ಪ್ರೇಮ ಮತ್ತೆ ತೆರೆಯ ಮೇಲೆ ಬರಬೇಕು, ಮತ್ತೆ ಅಭಿನಯಿಸಬೇಕು ಎಂದು ಅವರ ಅಭಿಮಾನಿಗಳಿಗೆ ಯಾವಾಗಿನಿಂದಲೂ ಆಸೆ ಇದ್ದೇ ಇತ್ತು. ಹಾಗೆಯೇ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ವೆಡ್ಡಿಂಗ್ ಗಿಫ್ಟ್ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಬಜ್ ಕ್ರಿಯೇಟ್ ಮಾಡಿದೆ. ಈ ಸಿನಿಮಾವನ್ನು ವಿಕ್ರಂ ಕೆ ಪ್ರಭು ಅವರು ನಿರ್ಮಾಣ ಮಾಡಿ ನಿರ್ದೇಶನವನ್ನು ಮಾಡಿದ್ದಾರೆ ಹಾಗೆ ಕಥೆಯನ್ನು ಕೂಡ ಅವರೇ ಬರೆದಿದ್ದಾರೆ.
ಉದಯ ಲೀಲಾ ಅವರ ಛಾಯಾಗ್ರಾಹಣ ಈ ಸಿನಿಮಾಕ್ಕೆ ಇದೆ. ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ನಿಶಾನ್, ಸೋನು ಗೌಡ, ನಟಿ ಪ್ರೇಮಾ ಪವಿತ್ರ ಲೋಕೇಶ್, ಬಾಬು ಹಿರಣ್ಣಯ್ಯ ಮೊದಲಾದ ದೊಡ್ಡ ತಾರಾ ಬೆಳಗವೇ ಈ ಸಿನಿಮಾದಲ್ಲಿದೆ. ಹಾಗೆ ಈ ಸಿನಿಮಾದಲ್ಲಿ ನಟಿ ಪ್ರೇಮಅವರದ್ದು ಲಾಯರ್ ಪಾತ್ರ! ಮದುವೆ ಎನ್ನುವ ಸಂಬಂಧದ ಸುತ್ತ ಹೆಣೆದಿರುವ ಕಥೆಯೇ ವೆಡ್ಡಿಂಗ್ ಗಿಫ್ಟ್!
ಇನ್ನು ಇಷ್ಟು ದಿನ ಸಿನಿಮಾ ರಂಗದಿಂದ ದೂರ ಉಳಿದಿದ್ದು ಯಾಕೆ ಅಂತ ಹಲವರು ಅವರನ್ನ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ನಟಿ ಪ್ರೇಮ ಅವರದ್ದು ಒಂದೇ ಉತ್ತರ. ನನಗೆ ಇಷ್ಟವಾಗುವಂತಹ ಪಾತ್ರ ಸಿಕ್ಕಿರಲಿಲ್ಲ. ನಾನು ಮಾಡುವ ಪಾತ್ರ ನನಗೆ ತೃಪ್ತಿ ನೀಡಬೇಕು ಅಂತ ಪಾತ್ರಗಳನ್ನು ನಾನು ಇದುವರೆಗೆ ಆಯ್ಕೆ ಮಾಡಿಕೊಂಡು ಬಂದಿದ್ದು. ವೆಡ್ಡಿಂಗ್ ಗಿಫ್ಟ್ ನನಗೆ ಒಂದು ಒಳ್ಳೆ ಪಾತ್ರವನ್ನು ನಿರ್ಮಿಸಿಕೊಟ್ಟಿದೆ.
ಹಾಗಾಗಿ ಈ ಸಿನಿಮಾದಲ್ಲಿ ನಾನು ಮತ್ತೆ ಅಭಿನಯಿಸಿದ್ದೇನೆ ಅಂತ ಹೇಳಿಕೊಂಡಿದ್ದರು. ಇನ್ನು ಮಾಧ್ಯಮದ ಜೊತೆಗೆ ಮಾತನಾಡುವಾಗ ತನ್ನ ಲವರ್ ಯಾರು ಅನ್ನೋದನ್ನ ಬಹಿರಂಗಪಡಿಸಿದ್ದಾರೆ ನಟಿ ಪ್ರೇಮ! ಹೌದು ಬಹಳಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಪಳಗಿದವರು ನಟಿ ಪ್ರೇಮ. ಹಾಗಾಗಿ ಅವರಿಗೆ ಕ್ಯಾಮರಾ ಎದುರಿಸುವುದು ಅಥವಾ ಸ್ಟೇಜ್ ಫಿಯರ್ ಅನ್ನೋದು ಇಲ್ಲವೇ ಇಲ್ಲ.
ಕ್ಯಾಮರಾ ಎದುರು ನಿಂತಾಗ ಕ್ಯಾಮರವನ್ನೇ ಪ್ರೇಕ್ಷಕರು ಎಂದು ಭಾವಿಸಿ, ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ನಟಿ ಪ್ರೇಮ ನನ್ನ ಲವ್ವರ್ ಯಾರು ಅಂತ ಕೇಳಿದ್ರೆ ಕ್ಯಾಮರಾವೆ ನನ್ನ ಲವರ್ ಅಂತ ಹೇಳಿದ್ದಾರೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದ ಸಕ್ಸೆಸ್ ಹಿನ್ನೆಲೆಯಲ್ಲಿ ನಟಿ ಪ್ರೇಮ ಇನ್ಮುಂದೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಂತೂ ಎದ್ದು ಕಾಣಿಸುತ್ತಿದೆ.