PhotoGrid Site 1658635603170

ಕೇವಲ 5 ನಿಮಿಷದಲ್ಲಿ ಸೀರೆ ಉಡುವುದನ್ನು ಕಲಿಯಿರಿ ಅರೇ ಎಷ್ಟು ಸುಲಭ ಗೊತ್ತಾ? ಪುರುಷರು ಬೇಕಾದ್ರೆ ಸೀರೆ ಉಡಿಸುವುದನ್ನು ಸುಲಭದಲ್ಲಿ ಕಲಿಯಬಹುದು ನೋಡಿ!!

ಸುದ್ದಿ

ಹೆಣ್ಣು ಅದೆಷ್ಟೇ ಸುಂದರವಾಗಿದ್ದರೂ ಅಥವಾ ಅದೆಷ್ಟೇ ಮೇಕಪ್ ಮಾಡಿಕೊಂಡಿದ್ದರೂ ಸೀರೆ ಉಟ್ಟರೆ ಅದರ ಕಳೆಯೇ ಬೇರೆ. ‌ಹೆಣ್ಣಿನ‌ ಸೌಂದರ್ಯ ಹೆಚ್ಚಿಸುವ ಗಣಿ ಅಂದರೆ ಅದು ಸೀರೆ.‌ಅದರಲ್ಲೂ ಭಾರತೀಯ ನಾರಿ ಅಂದರೆ ಸಾಕು ತಕ್ಷಣ ನೆನಪಾಗುವುದು ಅಂದವಾಗಿ ಸೀರೆ ಉಟ್ಟ ನಾರಿ. ಸೀರೆ ಅನ್ನುವುದು ನಮ್ಮ‌ ಸಂಸ್ಕೃತಿ. ಸಂಸ್ಕೃತಿಯೇ‌ ಜೀವಾಳ ಆಗಿರುವ ನಮ್ಮ‌ ದೇಶದಲ್ಲಿ‌ ಈ ಸೀರೆಗೆ ಕೊಡುವ ಪ್ರಾಮುಖ್ಯತೆಯೇ ಬೇರೆ.

ನಾವು ಆರಾಧಿಸುವ ಹೆಣ್ಣು ದೇವರನ್ನು‌ ಕೂಡ ನಾವು ಸೀರೆಯಲ್ಲಿ ಮಾತ್ರ ಕಾಣಲು ಸಾಧ್ಯ.ಇನ್ನು ಸೀರೆ ಉಟ್ಟ ಹೆಣ್ಣಿಗೆ ಯಾರು ಕೂಡ ಅಗೌರವ‌ ಕೊಡಲು ಸಾಧ್ಯವೇ ಇಲ್ಲ. ಅಂದವಾಗಿ ಸಂಪ್ರದಾಯದ ಪ್ರತೀಕವಾದ ಸೀರೆ ಉಟ್ಟ ಹೆಣ್ಣು ಬಂದರೆ ಅದು ಎಂತವರೇ ಆಗಲಿ ತಿರುಗಿ ನೋಡುತ್ತಾರೆ. ‌ಆ ನೋಡುವ ದೃಷ್ಟಿಯಲ್ಲಿ ಗೌರವ ಇರುತ್ತದೆಯೇ ಹೊರತು ಕೆಟ್ಟ ಭಾವನೆ ಇರುವುದಿಲ್ಲ. ಈ ಸೀರೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸ ಇದ್ದರೂ ಇನ್ನು ಕೂಡ ಅದರ ಮೇಲಿನ ಪ್ರೀತಿ ಗೌರವ ಕಡಿಮೆ ಆಗಿಲ್ಲ.

ನವಾಉ ಅದೆಷ್ಟೇ ಪಾಶ್ಚಿಮಾತ್ಯ ಪದ್ಧತಿಯನ್ನು ಅಳವಡಿಸಿಕೊಂಡರೂ, ಆಧುನಿಕತೆಯ ಗಾಳಿ ಸೋಕಿದ್ದರೂ ಈ ಸೀರೆಗೆ ಇರುವ ಸೆಂಟಿಮೆಂಟ್ ಮಾತ್ರ ಕಿಂಚಿತ್ ಕಡಿಮೆ ಆಗಿಲ್ಲ, ಶಾಸ್ತ್ರ, ಸಂಪ್ರದಾಯ ಅಂತ ಬಂದರೆ ಅಲ್ಲಿ ಸೀರೆಯದ್ದೇ ಮೇಲುಗೈ. ಇನ್ನು ಯಾವುದೇ ಹಬ್ಬ – ಹರಿದಿನ, ಶುಭ ಕಾರ್ಯ ಇದ್ದರೆ ಅಲ್ಲಿ ಕೂಡ ಸೀರೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತದೆ. ಇನ್ನು ಈ ಸೀರೆ ಉಟ್ಟರೆ ಯಾವ ಒಡವೆ, ಮೇಕಪ್ ಗಳ ಅಗತ್ಯ ಕೂಡ ಇರುವುದಿಲ್ಲ. ಸೀರೆ ಉಟ್ಟರೆ ಸಾಕು ಹೆಣ್ಣಿಗೆ ಬರುವ ಕಳೆಯೇ ಬೇರೆ.

ಇನ್ನು ಈ ಸೀರೆಯಲ್ಲಿ ಬೇರೆ ಬೇರೆ ವಿಧಗಳಿವೆ. ಕಾಟನ್ ಸೀರೆ, ಇಳಕಲ್ ಸೀರೆ, ಕಾಂಜೀವರಂ, ಸಿಲ್ಕ್, ಲೆನಿನ್, ಉಡುಪಿ ಸೀರೆ, ಮೈಸೂರು ಸಿಲ್ಕ್ ಹೀಗೆ ನಾನಾ ರೀತಿಯ ಸೀರೆಗಳು ಇರುತ್ತವೆ. ಒಂದೊಂದು ರೀತಿಯ ಸೀರೆಗಳಿಗೆ ಒಂದೊಂದು ರೀತಿಯ ಡಿಮಾಂಡ್ ಇರುತ್ತದೆ. ಇದೇ ರೀತಿ ಒಂದೊಂದು‌ ಕಡೆ ಒಂದೊಂದು ರೀತಿಯಲ್ಲಿ ಸೀರೆ ಉಡುತ್ತಾರೆ. ಒಂದೊಂದು ಪ್ರದೇಶಕ್ಕೆ ಅನುಗುಣವಾಗಿ ಸೀರೆ ಉಡುತ್ತಾರೆ.

ಮಡಿಕೇರಿ ಅಥವಾ ಕೂರ್ಗ್ ನಲ್ಲಿ ಮಹಿಳೆಯರು ಸೀರೆ ಉಡುವ ಶೈಲಿಯೆ ಬೇರೆ, ಬೆಂಗಾಲಿ, ಗುಜರಾತಿ, ಮರಾಠಿ,ಆಂದ್ರ, ಕರ್ನಾಟಕ, ಕೇರಳ ಹೀಗೆ ನಾನಾ ಕಡೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಸೀರೆ ಉಡಲಾಗುತ್ತದೆ. ಅದರಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಈ ನೌವಾರಿ ಶೈಲಿಯಲ್ಲಿ ಮದುಮಗಳಿಗೆ ಸೀರೆ ಉಡಿಸುವ ಒಂದು ವಿಡಿಯೋ ವೈರಲ್ ಆಗಿದೆ. ಈ ನೌವಾರಿ ಸೀರೆ ಮಹಾರಾಷ್ಟ್ರಿಯನ್ ಮಹಿಳೆಯರು ಅಂದರೆ ಮರಾಠಿ ‌ಮಹಿಳೆಯರು ಉಡುವ ಸಾರಿ.

ಒಂದು ರೀತಿಯಲ್ಲಿ ಕಚ್ಚೆ ಶೈಲಿಯಲ್ಲಿ ಸೀರೆಯನ್ನು ಉಡಲಾಗುತ್ತದೆ. ಅದಕ್ಕೆ ಸರಿಯಾಗಿ‌ ದೊಡ್ಡ‌ ಮೂಗು ನತ್ತು, ಹೇರ್ ಸ್ಟೈಲ್ ಕೂಡ ಬೇರೆಯೇ ಇರುತ್ತದೆ. ಈ ನೌವಾರಿ ಸೀರೆಯನ್ನು ಎಲ್ಲರ ಕೈಲೂ ಉಡಲು ಸಾಧ್ಯ ಇಲ್ಲ. ಗೊತ್ತಿರುವವರು ಉಟ್ಟರೆ ಅಥವಾ ಉಡಿಸಿದರೆ ಮಾತ್ರ ಅಂದವಾಗಿ ಕಾಣುತ್ತದೆ‌. ಈ ರೀಲ್ಸ್ ನಲ್ಲಿ ಒಬ್ಬಾಕೆ ಬಹಳ ಅದ್ಭುತವಾಗಿ ನೌವಾರಿ ಸೀರೆ ಉಡಿಸಿದ್ದಾರೆ. ಸೀರೆ ಉಟ್ಟ ಹೆಣ್ಣಂತೂ ದೇವತೆಯಂತೆ ಕಂಗೊಳಿಸಿದ್ದಾಳೆ. ಇನ್ನು ‌ನಿಮಗೆ ಯಾವ ಶೈಲಿಯ ಸೀರೆ ಇಷ್ಟ ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *