ಕೇವಲ ಒಂದೇ ನಿಮಿಷದಲ್ಲಿ ದರ್ಶನ್, ಯಶ್, ಸುದೀಪ್ ಚಿತ್ರಗಳ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ನಟ ಧ್ರುವ ಸರ್ಜಾ! KD ಚಿತ್ರದ ಹೊಸ ದಾಖಲೆ ನೋಡಿ!!

ಸುದ್ದಿ

ಇಂದು ಕನ್ನಡ ಸಿನಿಮಾ ಇಂಡಸ್ಟ್ರಿ, ಎಲ್ಲಾ ಸಿನಿಮಾ ಇಂಡಸ್ಟ್ರಿಗಳು ಕೂಡ ತಿರುಗಿ ಕನ್ನಡದತ್ತ ನೋಡುವಂತೆ ಮಾಡಿದೆ. ಪ್ರತಿಯೊಂದು ಸಿನಿಮಾ ಮೇಕಿಂಗ್ ಕೂಡ ಅತ್ಯದ್ಭುತವಾಗಿ ಬಹಳ ವಿಭಿನ್ನವಾಗಿ ಇರುತ್ತೆ ಇನ್ನು ತಂತ್ರಜ್ಞಾನ ಅಳವಡಿಕೆಯಲ್ಲಿ ಕೂಡ ನಾವು ಹಿಂದೆ ಬಿದ್ದಿಲ್ಲ, ಈಗಾಗಲೇ ಇದಕ್ಕೆ ಸಾಕ್ಷಿಯಾಗಿ ಕೆಜಿಫ್ ಹಾಗೂ ವಿಕ್ರಾಂತ್ ರೋಣ ಮೊದಲಾದ ಸಿನಿಮಾಗಳನ್ನು ನೀವು ನೋಡಿರುತ್ತೀರಿ.

ಇನ್ನು ಇತ್ತೀಚಿಗೆ ಬಿಡುಗಡೆಯಾದ ಕಾಂತಾರ ಸಿನಿಮಾ ಎಲ್ಲಾ ಸಿನಿಮಾಗಳ ದಾಖಲೆಗಳನ್ನು ಮೀರಿ ಐತಿಹಾಸಿಕ ಸಿನಿಮಾ ಎನಿಸಿಕೊಂಡಿದೆ. ಇನ್ನು ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜಾ ಸಿನಿಮಾ ಇನ್ನೇನು ತೆರೆ ಕಾಣಲಿದೆ ಅದರಲ್ಲಿಯೂ ಕೂಡ ಸಾಕಷ್ಟು ವಿಶೇಷತೆಗಳನ್ನ ಹೊಂದಿದೆ ಎನ್ನುವುದು ಈಗಾಗಲೇ ಬಿಡುಗಡೆಯಾದ ಟೀಸರ್ ನಲ್ಲಿ ನೀವು ನೋಡಿರುತ್ತೀರಿ.

ಆದರೆ ಈಗ ಮತ್ತೊಂದು ಸಿನಿಮಾ ಸೆಟ್ ಏರಿದೆ ಇದು ಬಹುಶಃ ಇವರಿಗಿನ ಎಲ್ಲಾ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡೋದ್ರಲ್ಲಿ ನೋ ಡೌಟ್. ಯಾಕೆ ಅಂತೀರಾ? ನಿರ್ದೇಶಕ ಪ್ರೇಮ್ ಹಾಗೂ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಕೆಡಿ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾದ ಟೈಟಲ್ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.

ಈ ಟೀಸರ್ ಅನ್ನು ಕೆ ವಿ ಎನ್ ಪ್ರೊಡಕ್ಷನ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ ಕೇವಲ ಒಂದು ನಿಮಿಷದಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಕೆವಿಎಂ ಪ್ರೊಡಕ್ಷನ್ಸ್ ನಲ್ಲಿ ಕೆಡಿ 4ನೆ ಸಿನಿಮಾವಾಗಿದ್ದು, ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಇನ್ನು ಇದೇ ಮೊದಲ ಬಾರಿಗೆ ಪ್ರೇಮ್ ಹಾಗೂ ಧ್ರುವ ಸರ್ಜಾ ಇಬ್ಬರು ಒಂದಾಗಿ ಸಿನಿಮಾವನ್ನು ಮಾಡುತ್ತಿದ್ದಾರೆ.

ಈ ಸಿನಿಮಾ ಪ್ರೇಮ್ ಅವರ ಸಿನಿಮಾ ಕರಿಯರ್ ನಲ್ಲಿಯೇ ಬಹಳ ದೊಡ್ಡ ಸಿನಿಮಾವಾಗಿದ್ದು ಟೈಟಲ್ ಟೇಸರ್ ಬಹಳ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಮೂಲಕ ಬೆಂಗಳೂರಿನ ಮರು ಸೃಷ್ಟಿ ಮಾಡಲಿದ್ದಾರೆ ಪ್ರೇಮ್. ಹೌದು ಟೀಸರ್ ನೋಡಿದ್ರೆ ನಿಮಗೆ ಗೊತ್ತಾಗುತ್ತೆ, ಕೆಡಿ ಸಿನಿಮಾ ರೆಟ್ರೋ ಸಮಯವನ್ನು ನೆನಪಿಸುವಂಥದ್ದು. ಇದರಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ ಧ್ರುವ ಸರ್ಜಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು 1970ರ ದಶಕದ ಕೆಲವು ನೈಜ ಕಥೆಯನ್ನು ಹೇಳುವತ್ತ ಪ್ರೇಮ್ ಕೆಡಿ ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ. ಕನ್ನಡದಲ್ಲಿ ಅದ್ದೂರಿ, ಭರ್ಜರಿ ಎಂತಹ ಆಕ್ಷನ್ ಸಿನಿಮಾಗಳಲ್ಲಿಯೇ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದ ಧ್ರುವ ಸರ್ಜಾ ಈಗ ಮತ್ತೊಂದು ರೌಡಿ ಸಿನಿಮಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಮಾಸ್ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಕೂಡ ತೆರೆ ಕಾಣಲಿದೆ. ಒಟ್ಟಾರೆಯಾಗಿ ಕೆಡಿ-ದ ಡೆವಿಲ್ ಸಿನಿಮಾ ಚಿತ್ರೀಕರಣಕ್ಕೂ ಮುಂಚೆಯೇ ಸಿಮಿಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

Leave a Reply

Your email address will not be published. Required fields are marked *