ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಕೇಳಿ ಬರುತ್ತಿರುವ ಒಂದು ಹೆಸರು ಸಾಯಿ ಪಲ್ಲವಿ. ಸಾಯಿ ಪಲ್ಲವಿ ಕೂಡಲೇ ನೆನಪಿಗೆ ಬರುವುದೇ ಅವರ ಪ್ರೇಮಂ ಸಿನಿಮಾ. ನಟಿಸಿದ ಮೊದಲ ಚಿತ್ರದಲ್ಲಿಯೇ ಫೇಮಸ್ ಆದ ನಟಿ ಇವರು ಸಾಯಿ ಪಲ್ಲವಿ. ಅವರಿಗೆ ದೇಶಾದ್ಯಂತ ಅಭಿಮಾನಿ ಬಳಗವಿದೆ. ಇದೀಗ ಕೇವಲ ಸೌತ್ ಗೆ ಮಾತ್ರ ಸಾಯಿ ಪಲ್ಲವಿ ಸೀಮಿತವಾಗಿಲ್ಲ. ಹೌದು, ಸಾಯಿ ಪಲ್ಲವಿ ಯನ್ನು ಜನರು ಗುರುತಿಸುವುದೇ ಅವರ ಮಲಾರ್ ಪಾತ್ರದಿಂದಾಗಿ.
ಅಷ್ಟು ಅದ್ಭುತವಾಗಿ ಪ್ರೇಮ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಾಯಿ ಪಲ್ಲವಿ ಬಹಳ ಸಿಂಪಲ್ ನಟಿ. ಮುಖಕ್ಕೆ ಮೇಕಪ್ ಕೂಡ ಇಲ್ಲದೆ ನಟಿಸುವ ಏಕೈಕ ನಟಿ ಎಂದರೆ ತಪ್ಪಾಗುವುದಿಲ್ಲ. ದುಲ್ಕರ್ ಸಲ್ಮಾನ್ ಜೊತೆ ಕಾಳಿ ಸಿನಿಮಾದಲ್ಲಿಯೂ ಕೂಡ ಉತ್ತಮ ಪರ್ಫಾರ್ಮೆನ್ಸ್ ನೀಡಿದ್ದರು ಸಾಯಿ ಪಲ್ಲವಿ.
ನಂತರ ತೆಲುಗವಿನಲ್ಲಿ ಫಿದಾ ಚಿತ್ರದಲ್ಲಿ ಭಾನುಮತಿ ಪಾತ್ರವನ್ನು ನಿಭಾಯಿಸುವುದರ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟ ಸಾಯಿ ಪಲ್ಲವಿ ಜನರ ಇಷ್ಟದ, ಅತ್ಯುತ್ತಮ ನಟಿ ಎನಿಸಿಕೊಂಡರು. ಸಾಯಿ ಪಲ್ಲವಿಯ ಜನಿಸಿದ್ದು 1992 ಮೇ 9ರಂದು ತಮಿಳುನಾಡಿನ ಕೋಟಗಿರಿಯಲ್ಲಿ. ಇವರು ವೃತ್ತಿಯಲ್ಲಿ ವೈದ್ಯ ಆಗಿದ್ದು ಹೆಚ್ಚು ಆಸಕ್ತಿ ಹೊಂದಿರುವುದು ಮಾತ್ರ ಸಿನಿಮಾದಲ್ಲಿ ಅಭಿನಯಿಸುವುದರ ಕಡೆಗೆ.
ಯಾವುದೇ ಮೇಕಪ್ ಇಲ್ಲದೆ, ಗ್ಲಾಮರ್, ಎಕ್ಸ್ಪೋಸಿಂಗ್ ಇಲ್ಲದೆ ಯಾವುದೇ ಟ್ರೋಲ್ ಗಳಿಗೂ ಗುರಿಯಾಗದೆ ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ಅಭಿನಯಿಸುತ್ತ ಅದರಿಂದಲೇ ಎಲ್ಲರ ಗಮನ ಸೆಳೆಯುವ ಅತ್ಯಂತ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ. ನಾನಿ ಜೊತೆ ಶಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ಅಭಿನಯಿಸಿ ಭಾರಿ ಮೆಚ್ಚುಗೆ ಗಳಿಸಿದ್ದಾರೆ.
ಇದರ ನಟಿಯರಿಗೆ ಕಂಪೇರ್ ಮಾಡಿದ್ರೆ ಸಾಯಿ ಪಲ್ಲವಿ ಜನರಿಗೆ ಹೆಚ್ಚು ಇಷ್ಟವಾಗುತ್ತಾರೆ. ಕಾರಣ ಅವರ ಸಿಂಪ್ಲಿಸಿಟಿ. ಇದೀಗ ಕನ್ನಡಿಗರನ್ನು ಕೂಡ ಆವರಿಸಿಕೊಂಡಿರುವ ಸಾಯಿ ಪಲ್ಲವಿ ಇತ್ತೀಚಿಗೆ ನಾಯಕಿಯಾಗಿ ಅಭಿನಯಿಸಿರುವ ಗಾರ್ಗಿ ಸಿನಿಮಾಕ್ಕೆ, ತಾವೇ ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ ಬೆಂಗಳೂರಿಗೆ ಕೂಡ ಬಂದಿದ್ದರು. ಇದರಿಂದ ಸಾಯಿ ಪಲ್ಲವಿ ಮೇಲೆ ಕನ್ನಡಿಗರಿಗೆ ತುಸು ಲವ್ ಜಾಸ್ತಿಯಾಗಿದೆ.
ಇನ್ನು ಸಂದರ್ಶನ ಒಂದರಲ್ಲಿ ಸಾಯಿ ಪಲ್ಲವಿಯನ್ನು ಸಂದರ್ಶನಕಾರರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ’ಇಂದಿನ ಫೇಮಸ್ ನಟಿಯರಾದ ಪೂಜಾ ಹೆಗಡೆ ಸಮಂತಾ ಮೊದಲಾದವರು ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಐಟಂ ಸಾಂಗ್ ಗಳಿಗೆ ಕೂಡ ಹೆಜ್ಜೆ ಹಾಕುತ್ತಾರೆ ನೀವು ಕೂಡ ಇಂತಹ ಹಾಡುಗಳಿಗೆ ಡ್ಯಾನ್ಸ್ ಮಾಡೋದಕ್ಕೆ ಇಷ್ಟಪಡುತ್ತೀರಾ?’ ಎಂದು ಕೇಳಿದ್ದಾರೆ.
ಸಾಯಿ ಪಲ್ಲವಿ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಹಾಗಾಗಿ ಇಂತಹ ಐಟಂ ಸಾಂಗ್ ಗಳಿಗೂ ಹೆಜ್ಜೆ ಹಾಕುತ್ತಾರೆ ಎನ್ನುವುದು ಹಲವರ ಕುತೂಹಲ. ಆದರೆ ಸಾಯಿ ಪಲ್ಲವಿಯ ಖಡಕ್ ಉತ್ತರ ಮಾತ್ರ ಬೇರೆ ಆಗಿತ್ತು. ‘ನಾನು ನನಗೆ ಕಂಫರ್ಟ್ ಆಗಿರುವ ಹಾಡುಗಳಿಗೆ ನೃತ್ಯ ಮಾಡುತ್ತೇನೆ. ಈ ಹಾಡುಗಳ ವಿಶೇಷತೆ ಬೇರೆಯೇ ಇದೆ. ಹಾಗಾಗಿ ನಾನು ಅಂತಹ ಹಾಡುಗಳಲ್ಲಿ ಕಂಫರ್ಟ್ ಆಗಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.