ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸ್ಪರ್ಧಿಗಳ ಆಯ್ಕೆಯೇ ವಿಶೇಷವಾಗಿದೆ. ಬಿಗ್ ಬಾಸ್ ನಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರೋರನ್ನು ಹೆಚ್ಚಾಗಿ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗತ್ತೆ. ಈ ಬಾರಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಸ್ಪಲ್ಪ ವಿಭಿನ್ನವಾಗಿದೆ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ್ದ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳನ್ನು ಒಟ್ಟು ಸೇರಿಸಲಾಗಿದೆ. ಹೌದು, ಈ ಬಾರಿ ಬಿಗ್ ಬಾಸ್ ಬಹಳ ವಿಭಿನ್ನ ಹಾಗೂ ಮನೋರಂಜನೆಯಿಂದ ಕೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಇರುವವರ ಬಿಜಿಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಶುರುವಾಗಿದ್ದು, ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರ ಬಗ್ಗೆ ಮಾತ್ರ ಸಾಕಷ್ಟು ಟ್ರೋಲ್ ಗಳನ್ನ ಮಾಡಲಾಗುತ್ತಿದೆ. ಹೌದು, ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗಾರರು. ಕನ್ನಡವನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಉದ್ದೇಶವಿಟ್ಟುಕೊಂಡು.
ಇದುವರೆಗೆ ರಾಜ್ಯದಲ್ಲಿ ಸಾಕಷ್ಟು ಹೋರಾಟ, ಧರಣಿಗಳನ್ನು ನಡೆಸಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿದ ರಾಜಣ್ಣ ಅವರ ಬಗ್ಗೆ ಟ್ರೊಲ್ ಗಳು ಆಗುತ್ತಿದ್ದು ಅದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಬಿಗ್ ಬಾಸ್ ನ್ನ ಕನ್ನಡದಲ್ಲಿಯೇ ಬರೆಯಬೇಕು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.
ಅಷ್ಟೇ ಅಲ್ಲದೆ ಬಿಗ್ ಬಾಸ್ ಎನ್ನುವ ಹೆಸರನ್ನು ಕನ್ನಡದಲ್ಲಿ ಬರೆಯದೆ ಇದ್ದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿ ಅಂತ ಯಾಕೆ ಹೇಳುತ್ತೀರಾ ಎಂದೆಲ್ಲ ಬಿಗ್ ಬಾಸ್ ಬಗ್ಗೆ ಟೀಕೆ ಮಾಡಿದ್ದರು. ಅಲ್ಲದೇ ರಾಜಣ್ಣ ಅವರ ಕಂಪ್ಲೈಂಟ್ ಅಲ್ಲಿನ ಆಯೋಜಕರು ಕನ್ನಡದಲ್ಲಿ ಹೆಸರು ಇದ್ರೆ ನಮಗೆ ಜಾಹಿರಾತು ಬರಲ್ಲ, ಕಮಾಯಿ ಆಗಲ್ಲ ಅಂತ ಹೇಳಿದ್ದರಂತೆ.
ರಾಜಣ್ಣ ಅವರು ಹೀಗೆ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಅದೇ ರಾಜಣ್ಣ ಬಿಗ್ ಬಾಸ್ ಮನೆ ಸೇರಿದ್ದಾರೆ. ಹಾಗಾಗಿ ರೂಪೇಶ್ ಈ ಹಿಂದೆ ನೀಡಿದ ಹೇಳಿಕೆ ಹಾಗೂ ಈಗ ಬಿಗ್ ಬಾಸ್ ಗೆ ತಾವೇ ಸ್ವತಃ ಹೋಗುವುದರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ರೂಪೇಶ್ ರಾಜಣ್ಣ ಅವರೇ ಇಂದು ಬಿಗ್ ಬಾಸ್ ಮನೆಯಲ್ಲಿ ಆಟವಾಡಲು ಹೋಗಿದ್ದು ನಿಜಕ್ಖೂ ಜನರಿಗೆ ಶಾಕಿಂಗ್ ಆಗಿದೆ.
ಹೊರಗಡೆ ಇದ್ದಾಗ ಬಿಗ್ ಬಾಸ್ ಗೆ ಬೈದಿದ್ದ ರಾಜಣ್ಣ ಈಗ ಹೇಗೆ ಮನೆಯೊಳಗೆ ಹೋಗಲು ಸಾಧ್ಯವಾಯಿತು. ಹಾಗಾದರೆ ಇವರ ಹೋರಾಟಗಳೆಲ್ಲವೂ ಬೂಟಾಟಿಕೆನಾ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ರೂಪೇಶ್ ಅವರ ಬಗ್ಗೆ ಇನ್ನೊಂದು ಬಗೆಯ ಟ್ರೋಲ್ ಕೂಡ ಆಗುತ್ತಿದೆ. ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳೇ ಕನ್ನಡ ಪರ ಹೋರಾಟಗಾರನಿಗೆ ಕನ್ನಡ ಕಲಿಸಲು ಹೊರಟಿದ್ದಾರೆ.
ಹೌದು, ಈ ಬಾರಿಯ ಬಿಗ್ ಬಾಸ್ ಗೆ ಮತ್ತೆ ಬಂದಿರುವ ಸ್ಪರ್ಧಿ ದೀಪಿಕಾ ದಾಸ್ ಅವರು ಬಾಟಲಿಗೆ ಶೀಶ/ಶೀಶೆ ಅಂತಲೂ ಹೇಳುತ್ತಾರೆ ಎಂದು ಹೇಳಿದ್ದಕ್ಕೆ ಇದು ನನಗೆ ಗೊತ್ತಿಲ್ಲ ಎಂದಿದ್ದಾರೆ ರೂಪೇಶ್. ಹಾಗಾಗಿ ಇದೂ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಕನ್ನಡ ಕನ್ನಡ ಅಂತ ಬಾಯಿಬಡಿದುಕೊಳ್ಳುವ ರೂಪೇಶ್ ರಾಜಣ್ಣ ಅವರಿಗೆ ಇಷ್ಟು ಸಣ್ಣ ಕನ್ನಡ ಪದವೂ ಗೊತ್ತಿಲ್ವಾ? ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.