ನಟಿ ನೇಹಾ ಗೌಡ ಕನ್ನಡಿಗರ ಮನೆ ಮನದಾಳದಲ್ಲಿ ಗೊಂಬೆ ಎಂದೇ ಫೇಮಸ್. ಕನ್ನಡ ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯಲ್ಲಿ ಗೊಂಬೆ ಪಾತ್ರವನ್ನು ನಿಭಾಯಿಸಿದ ನಟಿ ನೇಹಾ ಗೌಡ. ಈ ಪಾತ್ರದವನ ಎಷ್ಟು ಅಚ್ಚುಕಟ್ಟಾಗಿ ಹಾಗೂ ಪಾತ್ರಕ್ಕೆ ಜೀವ ತುಂಬಿ ನೇಹಾ ಗೌಡ ನಟಿಸಿದ್ದರು ಎಂದರೆ ಅವರನ್ನು ಈಗಲೂ ಎಲ್ಲರೂ ಗೊಂಬೆ ಎಂದೇ ಗುರುತಿಸುತ್ತಾರೆ ಹೊರತು ನೇಹಾ ಗೌಡ ಎಂದಲ್ಲ. ನೇಹಾ ಗೌಡ ಅವರು ನೋಡುವುದಕ್ಕೆ ಅತ್ಯಂತ ಸುಂದರ ಅವರ ಮುಖದ ಮೇಲಿನ ಸಣ್ಣ ಮಚ್ಚೆ ಅವರಿಗೆ ಶೋಭೆ.
ಇತ್ತೀಚೆಗೆ ಧಾರಾವಾಹಿ ಗಳಲ್ಲಾಗಲಿ ಸಿನಿಮಾಗಳಲ್ಲಿ ನೇಹಾ ಗೌಡ ಕಾಣಿಸಿಕೊಳ್ಳುತ್ತಿಲ್ಲ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ನೇಹಾ ಗೌಡ ಕನ್ನಡಿಗರಿಗೆ ಚಿರ ಪರಿಚಿತರಾದರು ಇನ್ನು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳುನಲ್ಲಿ ಕೂಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ನೇಹಾ ಗೌಡ. ಇದೀಗ ನೇಹಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತನ್ನ ಬಾಲ್ಯದ ಗೆಳೆಯನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.
ಕಾಕತಾಳಿಯ ಎನ್ನುವಂತೆ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಅವರ ಪತಿಯ ಪಾತ್ರಧಾರಿಯ ಹೆಸರು ಕೂಡ ಚಂದನ್ ಹಾಗೆ ನಿಜವಾದ ಜೀವನದಲ್ಲಿ ಅವರ ಪತಿಯ ಹೆಸರು ಕೂಡ ಚಂದನ್ ಎಂದೆ! ಗೊಂಬೆ ಅಲಿಯಾಸ್ ನೇಹಾ ಗೌಡ ಮದುವೆಯಾದ ಬಳಿಕ ಯಾವ ಧಾರವಾಹಿಗಳಲ್ಲಿಯೂ ನಟಿಸಲಿಲ್ಲ ಆದರೆ ರಾಜ ರಾಣಿ ಎನ್ನುವ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.
ಹೌದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಾಜ ರಾಣಿ ರಿಯಾಲಿಟಿ ಶೋನಲ್ಲಿ ಪತಿ ಚಂದನ್ ಜೊತೆ ನೇಹಾ ಗೌಡ ಕೂಡ ಸ್ಪರ್ದಿಯಾಗಿದ್ದರು ಈ ಕಾರ್ಯಕ್ರಮದಲ್ಲಿ ರಾಜ ರಾಣಿ ಪಟ್ಟವನ್ನ ಮೂಡಿಗೆರೆಸಿಕೊಂಡ ಜೋಡಿ ಇವರು. ರಾಜ ರಾಣಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳಲು ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು.
ಈ ಸಂದರ್ಭದಲ್ಲಿ ನಟಿ ನೇಹಾ ಗೌಡ ತಾನು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯನ್ನು ಹೊಂದಿದ್ದೇನೆ ಎಂದು ಪತಿ ಚಂದನ್ ಗೆ ಹೇಳುತ್ತಾರೆ. ಚಂದನ್ ಇದನ್ನ ನಿರೀಕ್ಷೆ ಮಾಡಿದ್ದರು ಇಲ್ಲವೋ ಗೊತ್ತಿಲ್ಲ ಆದರೆ ನೇಹಾ ಹೇಳಿದ ಕೂಡಲೇ ಇಲ್ಲ ಎಂದು ಹೇಳದೆ ಕೂಡಲೇ ಒಪ್ಪಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ನೆಚ್ಚಿನ ಧಾರಾವಾಹಿ ನಟಿಯರನ್ನು ಧಾರಾವಾಹಿಯಲ್ಲಿ ನೋಡಲು ಸಿಗದೇ ಇರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಎಲ್ಲಾ ನಟ ನಟಿಯರು ಆಕ್ಟಿವ್ ಆಗಿರುತ್ತಾರೆ.
ಅದರಲ್ಲೂ ಧಾರಾವಾಹಿಯಲ್ಲಿ ನಟಿಸುವ ನಟಿಯರು ಮಾತ್ರ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ಸಕ್ರಿಯರ್ ಆಗಿರುತ್ತಾರೆ ತಮ್ಮ ಫೋಟೋಗಳನ್ನ ಹಾಗೂ ಶೇರ್ ಮಾಡುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಹಾಗೆಯೇ ನಟಿ ನೇಹಾ ಗೌಡ ಕೂಡ ಆಗಾಗ ತನ್ನ ಪತಿಯ ಜೊತೆಗೆ ಹಾಗೂ ಸಹೋದರಿ ಸೋನು ಗೌಡ ಅವರ ಜೊತೆಗೆ ತಿರುಗಾಡಿದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ನೇಹಾ ಗೌಡ ಅವರ ಸಹೋದರಿ ಸೋನು ಗೌಡ ಕೂಡ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟಿ. ನೇಹಾ ಗೌಡ ಅತ್ಯಂತ ಬಬ್ಲಿ ನೇಚರ್ ಇರುವ ಹುಡುಗಿ. ಹಾಗಾಗಿ ತಮ್ಮ ಸಣ್ಣ ಸಣ್ಣ ಕ್ಷಣವನ್ನು ಕೂಡ ಎಂಜಾಯ್ ಮಾಡುತ್ತಾರೆ ನೇಹಾ ಗೌಡ.
ಅವರು ಮದುವೆಯ ಕಾರ್ಯಕ್ರಮ ಒಂದರಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುತ್ತಾ ಅದರ ಸವಿಯನ್ನ ಸವಿಯುತ್ತಿರುವ ವಿಡಿಯೋ ಒಂದು ಅವರ ಸ್ನೇಹಿತರು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾವಿರಾರು ಲೈಕ್ ಗಳು ಬಂದಿವೆ. ನೇಹಾ ಗೌಡ ಅವರು ಪೆದ್ದು ಪೆದ್ದಾಗಿ ಮುದ್ದಾಗಿ ಊಟ ಮಾಡುತ್ತಿರುವ ಈ ವಿಡಿಯೋ ತುಂಬಾನೇ ಕ್ಯೂಟ್ ಆಗಿದೆ. ಇನ್ನು ಸೀರೆ ಧರಿಸಿರುವ ನೇಹಾ ಗೌಡ ಮತ್ತಷ್ಟು ಇಷ್ಟವಾಗುತ್ತಾರೆ.
View this post on Instagram