PhotoGrid Site 1662871893044

ಕಿರುತೆರೆಯಲ್ಲಿ ಅವಕಾಶ ಬೇಕು ಅಂದ್ರೆ ಮಂಚಕ್ಕೆ ಕರೆಯುತ್ತಾರೆ ಎಂದ ಸೀರಿಯಲ್ ನಟಿ ದಿವ್ಯಾ! ಕಿರುತೆರೆಯ ಸತ್ಯವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ನೋಡಿ!!

ಸುದ್ದಿ

ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದೆಯರು ಉತ್ತಮ ಹೆಸರು ಗಳಿಸಬೇಕು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳಬೇಕು ಅಂದ್ರೆ ಅದಕ್ಕೆ ಅವರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ದೈಹಿಕ ಸೌಂದರ್ಯದಿಂದ ಹಿಡಿದು ಮಾನಸಿಕವಾಗಿಯೂ ಪ್ರಭುದ್ಧರಾಗಿರುವುದು, ಗಟ್ಟಿಯಾಗಿರುವುದು ಬಹಳ ಅಗತ್ಯ. ಇಷ್ಟಾಗಿಯೂ ಎಲ್ಲಾ ಕಲಾವಿದೆಯರಿಗೆ ಸರಿಯಾದ ಅವಕಾಶಗಳು ಸಿಗುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಕಾರಣ ಕೆಲವು ನಟಿಯರು ನೋಡುವುದಕ್ಕೆ ಬೋಲ್ಡ್ ಆಗಿ ಇರುತ್ತಾರೆ.

ಆದರೆ ಯಾವುದಾದರೂ ನಟ, ನಿರ್ದೇಶಕ, ನಿರ್ಮಾಪಕನೋ ತಮ್ಮೊಂದಿಗೆ ಸಹಕರಿಸಿ ಎಂದು ಕೇಳಿದರೆ ಸುತಾರಂ ಒಪ್ಪಲ್ಲ. ಹೌದು ನಾವು ಮಾತನಾಡುತ್ತಿರುವುದು ಕಾಸ್ಟಿಂಗ್ ಕೌಚ್ ಬಗ್ಗೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಬಗ್ಗೆ ಸಾಕಷ್ಟು ತಾರೆಯರು ಬಹಿರಂಗವಾಗಿ ಮಾತನಾಡಿದ್ದಾರೆ ತಾವು ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುವುದಕ್ಕೆ ಎಂತೆಲ್ಲಾ ಪರಿಸ್ಥಿತಿಗಳನ್ನು ಅನುಭವಿಸಬೇಕಾಗಿತ್ತು ಎಂಬುದನ್ನ ತಿಳಿಸಿದ್ದಾರೆ.

ಕೆಲವರು ಬಹಿರಂಗವಾಗಿ ಈ ವಿಷಯದ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವರು ಅದನ್ನು ಅನುಭವಿಸಿದರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇನ್ನು ಈ ಹಿಂದೆ ಸಿನಿಮಾ ತಾರೆಯರಿಗೆ ಮಾತ್ರ ಇಂತಹ ಸಂಕಷ್ಟಗಳು ಎದುರಾಗಿತ್ತು ಎಂದು ಎಲ್ಲರೂ ಭಾವಿಸಿದ್ದರು. ಯಾಕಂದ್ರೆ ಬೆಳ್ಳಿತೆರೆ ಅನ್ನೋದು ಬಹಳ ದೊಡ್ಡ ವಿಷಯ. ಇಲ್ಲಿ ಅವಕಾಶಗಳನ್ನು ಪಡೆದುಕೊಳ್ಳಬೇಕು ಅಂದ್ರೆ ಅದೃಷ್ಟ ಕೂಡ ಜೊತೆಗೆ ಇರಬೇಕು.

ಹಾಗಾಗಿ ಬೆಳ್ಳಿತೆರೆಗೆ ಪ್ರವೇಶ ಪಡೆಯುವುದಕ್ಕೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಮಾನ, ಕಿ-ರುಕು-ಳ ಅನುಭವಿಸುವ ಅನಿವಾರ್ಯತೆ ಇರುತ್ತೆ. ಆದರೆ ಕಾಸ್ಟಿಂಗ್ ಕೌಚ್ ಬಿಸಿ ಕಿರುತೆರೆಯ ಲೋಕದಲ್ಲಿಕ್ಕೂ ತಟ್ಟಿದೆ ಅಂದ್ರೆ ನೀವು ನಂಬಲೇಬೇಕು. ಹೌದು, ಸಿನಿಮಾದಲ್ಲಿ ಮಾತ್ರವಲ್ಲದೆ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಲು ಕೂಡ ಮಹಿಳಾ ಕಲಾವಿದರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ.

ನೋಡಲು ಸುಂದರವಾಗಿದ್ದು ಪ್ರತಿಭೆ ಇದ್ದರೂ ಅವಕಾಶಗಳು ಕೈ ಬಿಸಿ ಕರೆಯುವುದು ಕಷ್ಟ. ಕೆಲವೊಮ್ಮೆ ಅವಕಾಶ ಸಿಗಬೇಕು ಅಂದ್ರೆ ಆಯಾ ನಿರ್ಮಾಪಕರ ನಿರ್ದೇಶಕರ ಬಲೆಗೆ ಬೀಳಬೇಕಾಗುತ್ತದೆ. ಇದು ನಿಜಕ್ಕೂ ಪ್ರತಿಭಾವಂತ ಕಲಾವಿದರ ದುರದೃಷ್ಟಕರ ಸಂಗತಿ. ಇತ್ತೀಚಿಗೆ ಕಿರುತೆರೆ ನಟಿಯೊಬ್ರು ಕಾಸ್ಟಿಂಗ್ ಬಗ್ಗೆ ಮಾತನಾಡಿದ್ದಾರೆ. ಮನಸು ಮಮತಾ ಎನ್ನುವ ಧಾರವಾಹಿಯ ಕಲಾವಿದೆ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಭಾರ್ಗವಿ ಪಾತ್ರಧಾರಿ ದಿವ್ಯ ಎನ್ನುವ ಕಲಾವಿದೆ ಬಹಿರಂಗವಾಗಿ ಕಾಸ್ಟಿಂಗ್ ಬಗ್ಗೆ ಹೇಳಿಕೆ ನೀಡಿದ್ದಾರೆ. “ಕಾಸ್ಟಿಂಗ್ ಕೌಚ್ ಈಗ ಬ್ಯುಸಿನೆಸ್ ಆಗಿಬಿಟ್ಟಿದೆ. ನೀವು ಒಪ್ಪಿಕೊಂಡರೆ ಓಕೆ. ಆದರೆ ಬಲವಂತ ಮಾಡುವ ಹಾಗಿಲ್ಲ ಇಂಡಸ್ಟ್ರಿಯಲ್ಲಿ ಎಲ್ಲರೂ ಇದೇ ತಪ್ಪನ್ನ ಮಾಡಬೇಕು ಎನ್ನುವ ರೂಲ್ಸ್ ಇಲ್ಲ. ಕೆಲವೊಮ್ಮೆ ಒಂದೆರಡು ಬಾರಿ ಕರೆ ಮಾಡಿ ತಮಗೆ ಬೇಕಾದನ್ನು ಪಡೆದುಕೊಳ್ಳುತ್ತಾರೆ ಆದರೆ ನೀವು ಅವರ ಮಾತಿಗೆ ಇಲ್ಲಾಂದ್ರೆ ಮತ್ತೆ ಅವರು ನಿಮ್ಮ ತಂಟೆಗೆ ಬರಲ್ಲ’ ಅಂತ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ನಟಿ ದಿವ್ಯ.

ಇತ್ತೀಚಿಗೆ ಕನ್ನಡ ಕಿರುತೆರೆಯ ನಟಿ ಕವಿತಾ ಗೌಡ ಕೂಡ ಈ ಬಗ್ಗೆ ಮಾತನಾಡಿದ್ದರು. ನಿರ್ಮಾಪಕರ ಮ್ಯಾನೇಜರ್ ಒಬ್ಬರು ತಮ್ಮೊಂದಿಗೆ ನೇರವಾಗಿ ಈ ವಿಷಯ ಮಾತನಾಡಿದ್ದ ಬಗ್ಗೆ ಹೇಳಿದ್ದರು. ಅದ್ಯಾಕೋ ಗೊತ್ತಿಲ್ಲ ಅವಕಾಶ ಸಿಗಬೇಕು ಅಂದ್ರೆ ಮಂಚಕ್ಕೆ ಬರಬೇಕು ಎನ್ನುವ ವಿಷಯ ಕಾಮನ್ ಆದಂತಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ನಟನೆಗೆ ಯಾವೊಬ್ಬ ಕಲಾವಿದೆಯರು ಸಿಗುವುದಿಲ್ಲ.

Leave a Reply

Your email address will not be published. Required fields are marked *