ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವರ್ಡ್ ವೈಡ್ ಹಿಟ್ ಆಗಿದೆ. ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಅತ್ಯಂತ ವಿಭಿನ್ನವಾಗಿ ಮೂಡಿ ಬಂದಿದೆ. ಹೌದು, ಸುದೀಪ್ ಅವರ ಸಿನಿಮಾ ಅಂದ್ರೆ ಒಂದು ಮಟ್ಟಿನ ನಿರೀಕ್ಷೆ ಜಾಸ್ತಿಯಾಗಿಯೇ ಇರುತ್ತೆ ಯಾಕೆಂದರೆ ಕನ್ನಡದ ಸ್ಟಾರ್ ನಟ ಆಗಿರುವ ಕಿಚ್ಚ ಸುದೀಪ್ ಆಯ್ದುಕೊಳ್ಳುವ ಪಾತ್ರಗಳು ಕೂಡ ಅಷ್ಟೇ ವಿಭಿನ್ನವಾಗಿರುತ್ತದೆ.
ಈವರೆಗೆ ಸಾಕಷ್ಟು ವಿವಿಧ ಪಾತ್ರಗಳನ್ನು ನಿಭಾಯಿಸಿದ ಕಿಚ್ಚ ಸುದೀಪ್ ವಿಕ್ರಾಂತ್ ರೋಣದ ಫ್ಯಾಂಟಸಿ ಜಗತ್ತಿನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರಗಳಲ್ಲಿಯೂ ಕೂಡ ಬಣ್ಣ ಹಚ್ಚಿರುವ ಸುದೀಪ್ ಈಗಾಗಲೇ ಸಾಕಷ್ಟು ಪ್ರಾಜೆಕ್ಟ್ ಗಳಿಗೆ ಕೈ ಹಾಕಿದ್ದಾರೆ. ಸುದೀಪ್ ಅವರ ಮುಂದಿನ ಚಿತ್ರ ಯಾವುದು? ಯಾವ ರೀತಿಯ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಜನರಲ್ಲಿ ಮನೆ ಮಾಡಿದೆ ಈ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸುದೀಪ್ ಅವರ ಖಡಕ್ ವಾಯ್ಸ್ ಗೆ ಮಾರಿ ಹೋಗದವರೇ ಇಲ್ಲ ಆರಡಿ ಕಟೌಟ್ ಮಾತ್ರ ಅಲ್ಲ ಅವರ ಭಾಷೆ, ಮಾತನಾಡುವ ಶೈಲಿ ಎಲ್ಲವೂ ವಿಭಿನ್ನ. ಸಿನಿಮಾದಲ್ಲಿ ಹೇಗೆ ಒಬ್ಬ ಹೀರೋ ಆಗಿ ಗತ್ತಿನ ಪಾತ್ರವನ್ನು ನಿಭಾಯಿಸುತ್ತಾರೋ ಸಿನಿಮಾದಿಂದ ಆಚೆಗೂ ಕೂಡ ಸುದೀಪ್ ಇರುವ ರೀತಿ ಹಾಗೆ ಅವರ ಗಾಂಭೀರ್ಯತೆ ಬಹುಶಃ ಬೇರೆ ಯಾವ ನಟರಿಗೂ ಬರಲು ಸಾಧ್ಯವೇ ಇಲ್ಲ. ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಇಬ್ಬರ ಕಾಂಬಿನೇಷನ್ ನಲ್ಲಿ ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ತೆರೆಕಂಡು ಸಾಕಷ್ಟು ಯಶಸ್ಸನ್ನು ಕಂಡಿದೆ.
ಈಗ ಇವರಿಬ್ಬರು ಸೇರಿ ಮತ್ತೊಂದು ಫ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸುವುದಕ್ಕೆ ಹೊರಟಿದ್ದಾರೆ ಎನ್ನುವ ಮಾಹಿತಿ ಇದೆ. ಕಿಚ್ಚ ಸುದೀಪ್ ಹಾಗೂ ಅನುಪ ಭಂಡಾರಿ ಅವರ ನಿರ್ದೇಶನದ ಮುಂದಿನ ಸಿನಿಮಾ ’ಬಿಲ್ಲಾ ರಂಗ ಭಾಷಾ’ ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದರು ಕಿಚ್ಚ ಸುದೀಪ್. ಆದರೆ ಈ ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಇನ್ನು ಲಭ್ಯವಾಗಿಲ್ಲ.
ಈ ಹಿಂದೆ ಕಿಚ್ಚ ಅವರ ಅಶ್ವತ್ಥಾಮ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಇತ್ತು ಆದರೆ ಇದೀಗ ಸ್ಯಾಂಡಲ್ ವುಡ್ ಬಾದ್ ಷಾ ಬಿಲ್ಲ ರಂಗ ಭಾಷಾ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ಅನೋಪ ಬಂಡಾರಿ ಈ ಸಿನಿಮಾದ ಶೇಕಡ 80ರಷ್ಟು ಕಥೆಯನ್ನು ಈಗಾಗಲೇ ಮುಗಿಸಿದ್ದಾರಂತೆ. ಬಿಗ್ ಬಜೆಟ್ ನಲ್ಲಿ ಕಿಚ್ಚ ಸುದೀಪ್ ಅವರ ಸಿನಿಮಾ ನಿರ್ಮಾಣವಾಗಲಿದ್ದು ವರ್ಡ್ ವೈಡ್ ತೆರೆ ಕಾಣಲಿದೆ.
ಸುದೀಪ್ ಅವರಿಗೆ ಕನ್ನಡದಲ್ಲಿ ಮಾತ್ರವಲ್ಲ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ ಅಲ್ಲದೆ ಬಾಲಿವುಡ್ ನ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಅವರ ಅತ್ಯುತ್ತಮ ಸ್ನೇಹಿತರು. ಹಾಗೆಯೇ ಸೌತ್ ಇಂಡಸ್ಟ್ರಿಯಲ್ ಯು ಕೂಡ ಕಿಚ್ಚ ಸುದೀಪ್ ಅವರಿಗೆ ಸಾಕಷ್ಟು ಸೆಲೆಬ್ರಿಟಿ ವೆಲ್ ವಿಶರ್ಸ್ ಇದ್ದಾರೆ.
ಕಿಚ್ಚ ಸುದೀಪ್ ಅವರ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋದಲ್ಲಿ ಕಿಚ್ಚ ಸುದೀಪ್ ಬಹಳ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಇವರ ನ್ಯೂ ಲುಕ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಬಹುಶಃ ಇದು ಮುಂದಿನ ಸಿನಿಮಾದ ತಯಾರಿ ಇರಬೇಕು ಅಂತ ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಹರಿದಾಡುತ್ತಿವೆ.