ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಇಂದು ಬಹಳ ಫೇಮಸ್ ನಟ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ ಎನ್ನುವ ಬಿರುದು ಅವರಿಗೆ ಸುಖಾಸುಮ್ಮನೆ ಬಂದಿದ್ದಲ್ಲ. ಅದಕ್ಕಾಗಿ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿ ಯಶಸ್ಸನ್ನು ಕಾಣಬೇಕು ಅಂದ್ರೆ ಅದಕ್ಕೆ ಸಾಕಷ್ಟು ಕಷ್ಟಪಡಬೇಕು. ಆದರೆ ಕಿಚ್ಚ ಸುದೀಪ್ ಅವರ ಸಿನಿಮಾಗಳು ನಿಜವಾಗಿ ಸಕ್ಸಸ್ ಕಾಣಲು ಆರಂಭಿಸಿದ್ದು ಅವರ ಅಭಿನಯವನ್ನು ಜನರು ಮೆಚ್ಚಿಕೊಂಡ ಮೇಲೆ.
ಸಿನಿಮಾಗಳಲ್ಲಿ ನಾಯಕನಾಗುತ್ತೇನೆ ಎಂದ ಮಾತ್ರಕ್ಕೆ ಅವಕಾಶಗಳು ಲಭಿಸುವುದಿಲ್ಲ ಅದಕ್ಕಾಗಿಯೂ ಕೂಡ ಕಾಯಬೇಕು. ಕೊನೆಗೆ ಸಾಕಷ್ಟು ಶ್ರಮಪಟ್ಟು ಕಿಚ್ಚ ಸುದೀಪ್ ಅವಕಾಶಗಳನ್ನ ಗಿಟ್ಟಿಸಿಕೊಳ್ಳುವುದು ಮಾತ್ರವಲ್ಲದೆ ಇಂದು ಬಹು ಬೇಡಿಕೆಯ ನಟ ಎನಿಸಿದ್ದಾರೆ. ಕಿಚ್ಚ ಸುದೀಪ್ ಅವರು ಕೇವಲ ಒಬ್ಬ ನಟನಾಗಿ ಮಾತ್ರ ಸಿನಿಮಾ ರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿಲ್ಲ. ನಟನೆಯ ಜೊತೆ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣಗಳಲ್ಲಿಯು ತೊಡಗಿಕೊಂಡಿದ್ದಾರೆ.
ಕಿಚ್ಚ ಕ್ರಿಯೇಶನ್ಸ್ ಅಡಿಯಲ್ಲಿ ಈಗಾಗಲೇ ಸಿನಿಮಾ ನಿರ್ಮಾಣವನ್ನು ಮಾಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಒಬ್ಬ ಆಲ್ ರೌಂಡರ್. ಹಾಗಾಗಿ ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ ನಿರ್ಮಾಣದಲ್ಲಿಯೂ ಬಹಳ ಆಸಕ್ತಿಯನ್ನು ಹೊಂದಿದ್ದಾರೆ ಈಗಾಗಲೇ ಸುದೀಪ್ ಅವರ ನಿರ್ದೇಶನದ ಮೈ ಆಟೋಗ್ರಾಫ್ ಮೊದಲಾದ ಸಿನಿಮಾಗಳು ಯಶಸ್ಸನ್ನು ಕಂಡಿವೆ. ಅಂತೆಯೆ 73 ಶಾಂತಿ ನಿವಾಸ ಸಿನಿಮಾ ನಿರ್ಮಾಣ ಮಾಡಿರುವ ಕಿಚ್ಚ ಸುದೀಪ್, ಈ ಸಿನಿಮಾದ ಮೂಲಕ ಅತ್ಯುತ್ತಮ ಹೆಸರನ್ನು ಕೂಡ ಗಳಿಸಿದರು.
ಯಾಕಂದ್ರೆ ಇದರಲ್ಲಿ ಅವರ ಅಭಿನಯವು ಕೂಡ ಅಷ್ಟೇ ಮನೋಜ್ಞವಾಗಿದೆ. ನಂಬರ್ 73, ಶಾಂತಿ ನಿವಾಸ ಸಿನಿಮಾ 2007ರಲ್ಲಿ ಕನ್ನಡದಲ್ಲಿ ತೆರೆ ಕಂಡಿತು. ಇದರಲ್ಲಿ ಕಿಚ್ಚ ಸುದೀಪ್ ಅವರ ಜೊತೆಗೆ ಅನುಪ್ರಭಾಕರ್, ದೀಪ ಮೊದಲಾದ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾ, ಹಿಂದಿಯಿಂದ ರಿಮೇಕ್ ಗೊಂಡಿರುವ ಸಿನಿಮಾ. 1972 ರಲ್ಲಿ ಬಾವರ್ಚಿ ಎನ್ನುವ ಚಿತ್ರ 1966 ರಲ್ಲಿ ಬೆಂಗಾಳಿ ಫಿಲಂ, ಗಲ್ಫೋ ಹೋಲೆ ಸಟ್ಟಿ ಸಿನಿಮಾದ ರಿಮೇಕ್ ಆಗಿತ್ತು.
ಇನ್ನು ಇದು ಕನ್ನಡದಲ್ಲಿ ಶಾಂತಿ ನಿವಾಸ ಎಂದು ರಿಮೇಕ್ ಆಯ್ತು. ಆದರೆ ಶಾಂತಿ ನಿವಾಸಕ್ಕೂ ಮೊದಲು ಈ ಸಿನಿಮಾ ವನ್ನು ಇನ್ನೊಬ್ಬರು ಮಾಡಿದ್ದಾರೆ. ಕನ್ನಡದಲ್ಲಿ ಈ ಸಿನಿಮಾ ಬಹಳ ವರ್ಷಗಳ ಹಿಂದೆಯೇ ರಿಮೇಕ್ ಆಗಿತ್ತು ಆ ಸಿನಿಮಾ ಯಾವುದು ಗೊತ್ತಾ? ಹೌದು, ನಂಬರ್ 73 ಶಾಂತಿ ನಿವಾಸ ಸಿನಿಮಾ ಕನ್ನಡದಲ್ಲಿ 2007 ಮೊದಲೇ ರಿಮೇಕ್ ಆಗಿರುವಂತಹ ಸಿನಿಮಾ. ಅದುವೇ ’ಸಕಲ ಕಲಾ ವಲ್ಲಭ’ ಎನ್ನುವ ಚಿತ್ರ.
ಇದು ಶಶಿಕುಮಾರ್ ಅಭಿನಯದ ಕೌಟುಂಬಿಕ ಚಿತ್ರವಾಗಿತ್ತು. ಲಕ್ಷ್ಮಮ್ಮ ಅವರ ನಿರ್ಮಾಣದಲ್ಲಿ ಭಾಸ್ಕರ್ ಅವರ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿನಿಮಾ ಸಕಲ ಕಲಾ ವಲ್ಲಭ. ಬಹಳ ವರ್ಷಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಸಾಕಷ್ಟು ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಒಬ್ಬ ಅಡುಗೆ ಭಟ್ಟನಾಗಿ ಶಾಂತಿ ನಿವಾಸ ಎನ್ನುವ ಮನೆಗೆ ಸೇರಿಕೊಳ್ಳುತ್ತಾನೆ ನಾಯಕ ನಟ.
ನಂತರ ಆ ಮನೆಯವರ ವಿಶ್ವಾಸ ಗಳಿಸಿ ಕೊನೆಗೆ ಅಲ್ಲಿಯ ಹಣವನ್ನ ಕದ್ದು ಆ ಮನೆಯವರಿಗೆ ಬುದ್ಧಿ ಕಲಿಸುವ ಅತ್ಯುತ್ತಮಮ ಕಥಾ ಹಂದರವೇ ಇದು. ನಂತರ ಇದೇ ಕಥೆಯನ್ನು ಇಟ್ಟುಕೊಂಡು ಸ್ವಲ್ಪ ಮೊಡ್ಯೂಲೇಶನ್ ಮಾಡಿ ಮತ್ತೆ ಕನ್ನಡದಲ್ಲಿ ನಂ. 73 ಶಾಂತಿ ನಿವಾಸ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಲಾಯಿತು. ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾವು ಕೂಡ ಯಶಸ್ಸು ಗಳಿಸಿತ್ತು.