ಕಾಂತಾರ ಸಿನೆಮಾ ನೋಡುವಾಗ ನಟಿ ಶಿಲ್ಪಾ ಶೆಟ್ಟಿಗೆ ಆಗಿದ್ದೇನು ಗೊತ್ತಾ? ಸಿನೆಮಾ ನೋಡುವಾಗ ನಡೆದ ಪವಾಡ ನೋಡಿ ಇಡೀ ಬಾಲಿವುಡ್ ಶಾಕ್ ನೋಡಿ!!

ಸುದ್ದಿ

ಕಾಂತರಾ ಸಿನಿಮಾದ ಯಶಸ್ಸು ಗಡಿ ದಾಟಿದೆ. ಕನ್ನಡಿಗರಿಗೆ ಮಾತ್ರ ಸೀಮಿತವಾಗಿ ಇಲ್ಲದ ಈ ಸಿನಿಮಾ ಇದೀಗ ಇತರ ಭಾಷೆಗಳನ್ನು ಡಬ್ ಆಗಿ ತೆರೆಕಂಡು ಸಿಕ್ಕಾಪಟ್ಟೆ ಯಶಸ್ಸನ್ನು ಕಾಣುತ್ತಿದೆ. ದಿನವೊಂದಕ್ಕೆ ರೂ.10 ಕೋಟಿ ಹಣ ಮಾಡುವಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಬಿಗ್ ಹಿಟ್ ಕಂಡಿದೆ. ರಿಷಬ್ ಶೆಟ್ಟಿ ಅಥವಾ ಹೊಂಬಾಳೆ ಫಿಲಂಸ್ ಈ ಸಿನಿಮಾದ ಈ ಮುಟ್ಟಿನ ಯಶಸ್ಸನ್ನ ಬಹುಶಃ ನಿರೀಕ್ಷೆ ಮಾಡಿರಲಿಲ್ಲ.

ನಮ್ಮ ನೆಲ ನಮ್ಮ ಸಂಸ್ಕೃತಿಯನ್ನು ತೋರಿಸಿದ ಕಾಂತಾರ ಸಿನಿಮಾವನ್ನ ಕನ್ನಡಿಗರು ಹೊಗಳುವುದು ಸಹಜ. ಆದರೆ ಈ ಸಿನಿಮಾವನ್ನು ಮೆಚ್ಚಿಕೊಂಡ ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ಸಿಕ್ಕಾಪಟ್ಟೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಈಗಾಗಲೇ ತೆಲುಗು ಸೂಪರ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಬಾಟಿ, ನಾನಿ, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್, ತಮಿಳಿನ ಸ್ಟಾರ್ ನಟ ಧನುಷ್, ಕಾರ್ತಿ, ತೆಲುಗು ಸ್ಟಾರ್ ನಟಿ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ಹೀಗೆ ಮೊದಲಾದ ಸೆಲೆಬ್ರಿಟಿಗಳು ಈ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ.

ಇನ್ನು ಬಾಲಿವುಡ್ ನಲ್ಲಿಯೂ ಕಾಂತಾರ ಕಮಾಲ್ ಮಾಡಿದೆ. ಬಾಲಿವುಡ್ಡಿಗರು ನಿರೀಕ್ಷೆ ಮಾಡಿದ ರೀತಿಯಲ್ಲಿ ಕಾಂತರಾ ಸಿನಿಮಾ ಹಿಂದಿಯಲ್ಲಿಯೂ ಕೂಡ ಸಕ್ಸಸ್ ಕಂಡಿದೆ. ಇನ್ನು ಎಲ್ಲಾ ಸ್ಥಳಗಳಿಗೂ ಹೋಗಿ ರಿಷಬ್ ಶೆಟ್ಟಿ ಹಾಗೂ ತಂಡ ಚಿತ್ರ ಪ್ರಚಾರ ಮಾಡಿತ್ತು. ಹಾಗಾಗಿ ಕನ್ನಡದ ಕಾಂತಾರ ಇನ್ನಷ್ಟು ಫೇಮಸ್ ಆಯ್ತು. ಆದರೆ ಇವರಿಗೆ ಬಾಲಿವುಡ್ ನ ಯಾವುದೇ ಸೆಲೆಬ್ರಿಟಿಗಳು ಕಾಂತರಾ ಸಿನಿಮಾದ ಬಗ್ಗೆ ಮಾತನಾಡಿರಲಿಲ್ಲ.

ಆದರೆ ಈಗ ಈ ಸಿನಿಮಾನ ಥಿಯೇಟರ್ ನಲ್ಲಿಯೇ ನೋಡಿ ನಟಿ ಶಿಲ್ಪಾ ಶೆಟ್ಟಿ, ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು, ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಕಾಂತಾರಾ ಸಿನಿಮಾವನ್ನು ತಾನು ಥಿಯೇಟರ್ ನಲ್ಲಿ ನೋಡಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಇದು ಕಾಂತರಾ ಸಿನಿಮಾದ ಬಗ್ಗೆ ಹೊಗಳಿಕೆ.

ನಾನು ಈ ಸಿನಿಮಾವನ್ನ ಥಿಯೇಟರ್ ನಲ್ಲಿಯೇ ನೋಡಿದೆ ಓ ಮೈ ಗಾಡ್, ಎಂತಹ ಕಥೆ ಎಮೋಷನ್, ಎಂತಹ ವೈಬ್, ಎಂತಹ ಜಗತ್ತು! ಕ್ಲೈಮಾಕ್ಸ್ ಸಮಯದಲ್ಲಂತೂ ನನಗೆ ರೋಮಾಂಚನವಾಯಿತು. ಈ ಸಿನಿಮಾದ ಸಾಮರ್ಥ್ಯ ಎಷ್ಟಿದೆ ಅಂದರೆ ಬೇರೆಯದೇ ಲೋಕಕ್ಕೆ ನಮ್ಮನ್ನ ಕರೆದುಕೊಂಡು ಹೋಗುತ್ತದೆ. ಅದರಲ್ಲೂ ನನಗೆ ನನ್ನ ಬಾಲ್ಯದ, ನಾನು ಕಳೆದ ಪರಿಸರದ ನೆನಪು ಮತ್ತೆ ಆಯಿತು.

ಯಾವುದೇ ಪಕ್ಷಪಾತವಿಲ್ಲದೆ ಅತ್ಯದ್ಭುತ ಅಭಿನಯ, ಪ್ರೀತಿ, ನಿರ್ದೇಶನ, ಕಥೆ ಪ್ರಸ್ತುತಪಡಿಸುವಿಕೆ, ವಾವ್.. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸಾಫ್. ಈ ಒಂದು ಪ್ರಾಜೆಕ್ಟ್ ಮೂಲಕ ನೀವು ಸಾಕಷ್ಟು ಜನರ ಹೃದಯ ಗೆದ್ದಿದ್ದೀರಿ. ಸಕ್ಸಸ್ ಅನ್ನು ಎಂಜಾಯ್ ಮಾಡಿ’ ಎಂದು ವಿಸ್ತಾರವಾಗಿ ಶಿಲ್ಪಾ ಶೆಟ್ಟಿ, ಪೋಸ್ಟ್ ಮಾಡಿದ್ದಾರೆ. ಇನ್ನು ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ ಕೂಡ ಕಾಂತಾರ ಸಿನಿಮಾವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು.

ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರಿಗೂ, ತಂತ್ರಜ್ಞರಿಗೂ, ನಿರ್ಮಾಪಕರಿಗೂ ಅಭಿನಂದನೆಗಳು. ಕಾಂತಾರ ಸಿನಿಮಾ ಅಮೇಜಿಂಗ್. ರಿಷಬ್ ಶೆಟ್ಟಿ ಅವರೇ ನೀವು ಅದ್ಭುತ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಿ’ ಎಂದು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published. Required fields are marked *