ಕಾಂತರಾ ಸಿನಿಮಾ ಇಂದು ಸೂಪರ್ ಹಿಟ್ ಆಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕಾಂತಾರ ಕಮಾಲ್ ಮಾಡಿದೆ. ಹೆಸರಾಂತ ನಟರು ಕೂಡ ಕಾಂತಾರ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ, ಹಾಡಿ ಹೊಗಳಿದ್ದಾರೆ. ಇದೀಗ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕಾಂತಾರ ಸಿನಿಮಾ ವನ್ನು ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡು ಮೆಚ್ಚುಗೆಯ ಮಾತನಾಡಿದ್ದಾರೆ.
ಹೌದು,ಖುದ್ದು ರಿಷಬ್ ಶೆಟ್ಟಿ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾವನ್ನು ಎಲ್ಲಾ ಭಾಷೆಯ ಸೆಲೆಬ್ರಿಟಿಗಳು ತುಂಬಾ ಮೆಚ್ಚಿಕೊಂಡಿದ್ದಾರೆ. ತೆಲುಗು ಸೂಪರ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ರಿಶಬ್ ಶೆಟ್ಟಿ ಅವರನ್ನು ಕರೆಸಿ ಮಾತನಾಡಿದರು. ಇಷ್ಟು ಅದ್ಭುತ ಸಿನಿಮಾವನ್ನು ಹೇಗೆ ಮಾಡಿದ್ರಿ ಅಂತ ಆಶ್ಚರ್ಯದಿಂದ ಪ್ರಶ್ನೆ ಮಾಡಿದ್ರು.
ಅದೇ ರೀತಿ ಕಾಂತಾರಾ ಸಿನಿಮಾವನ್ನು ನೋಡಿ ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ. ರಾಣಾ ದಗ್ಗುಬಾಟಿ. ಬಾಲಿವುಡ್ ನಟಿ ಕಂಗನಾ ರಣಾವತ್ ಮೊದಲಾದ ನಟ ನಟಿಯರು ಶೆಟ್ಟಿ ಅವರ ಈ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ಇತ್ತೀಚಿಗಷ್ಟೇ ಕಾಂತಾರ ಸಿನಿಮಾವನ್ನು ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ ಮನೆಯ ಗೇಟ್ ವರೆಗೂ ತಾವೇ ಸ್ವತಃ ಹೋಗಿ ರಿಷಬ್ ಶೆಟ್ಟಿ ಅವರನ್ನು ಬರಮಾಡಿಕೊಂಡರು. ಅಲ್ಲದೆ ರಿಷಬ್ ಅವರನ್ನು ಆದರದಿಂದ ಆತಿಥ್ಯ ನೀಡಿ ಸುಮಾರು ಒಂದು ಗಂಟೆ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದು ‘ಕಾಂತರಾ ಸಿನಿಮಾ ನನಗೆ ಯಾಕೆ ಇಷ್ಟವಾಯಿತು ಅಂತ ರಜನಿಕಾಂತ್ ಅವರು ಸುಮಾರು ಒಂದು ಗಂಟೆಗಳ ಕಾಲ ನನ್ನೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ಇನ್ನಷ್ಟು ವಿಷಯಗಳನ್ನು ಚರ್ಚಿಸಲು ನನಗೆ ಸಾಧ್ಯವಾಯಿತು. ಅಲ್ಲದೆ ಕಾಂತರಾ ಸಿನಿಮಾದಲ್ಲಿ ಬಿಡಿಯನ್ನು ಎಸೆದು ಬಾಯಿಗೆ ಹಾಕಿಕೊಳ್ಳುವ ಸ್ಟೈಲ್ ನಿಮ್ಮಿಂದಲೇ ಕಲಿತಿದ್ದು ಎಂದಾಗ ರಜನಿಕಾಂತ್ ನಕ್ಕರು.
ರಜನಿಕಾಂತ್ ಸರ್ ಜೊತೆ ನಾನು ಮಾತನಾಡಿದ ಕಳೆದ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ’. ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರ ಸಿನಿಮಾವನ್ನ ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಅವರಿಗೆ ಬಾಬಾ ಬೆರಳಿನ ಗುರುತು ಇರುವ ಚಿನ್ನದ ಪೆಂಡೆಂಟ್ ಒಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ರಜನಿಕಾಂತ್ ಅವರು ಬಾಬಾ ಅವರನ್ನು ತುಂಬಾ ನಂಬುತ್ತಾರೆ ಅವರನ್ನು ಗುರು ಎಂದೇ ಭಾವಿಸಿದ್ದಾರೆ.
ಬಾಬಾ ಬೆರಳಿನ ಗುರುತು ಇರುವ ಪೆಂಡೆಂಟ್ ಅನ್ನು ಮಾಡಿ ಇಟ್ಟುಕೊಂಡಿದ್ದಾರೆ. ಯಾರಾದರೂ ಸಾಧನೆ ಮಾಡಿದರೆ ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಈ ಚಿನ್ನದ ಲಾಕೆಟ್ ಗಿಫ್ಟ್ ಆಗಿ ನೀಡುತ್ತಾರೆ. ಇಂತಹ ಒಂದು ಅತ್ಯುತ್ತಮ ಗಿಫ್ಟ್ ಪಡೆದುಕೊಂಡ ರಿಷಬ್ ಶೆಟ್ಟಿ ನಿಜಕ್ಕೂ ಧನ್ಯರು. ಯಾಕಂದ್ರೆ ಒಂದು ಸಿನಿಮಾದಲ್ಲಿ ಗೆಲುವು ಸಾಧಿಸಿದರೆ.
ಇನ್ನೂ ಸ್ಟಾರ್ ನಟ ಹಾಗೂ ಹಿರಿಯರು ಆಗಿರುವ ರಜನಿಕಾಂತ್ ಅಂತವರು ಹೊಗಳಿದರೆ ಆ ಚಿತ್ರವನ್ನು ಪ್ರಶಂಸೆ ಮಾಡಿದರೆ ಅದಕ್ಕಿಂತ ದೊಡ್ಡ ಗೆಲುವು ಇನ್ನೊಂದಿಲ್ಲ. ರಿಷಬ್ ಶೆಟ್ಟಿ ಅವರ ಪ್ರಯತ್ನಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಪ್ರಶಂಸೆ ದೊರೆತಿದೆ. ಶೆಟ್ರಿಂದ ಇಂತಹ ಇನ್ನಷ್ಟು ಸಿನಿಮಾಗಳನ್ನ ನಿರೀಕ್ಷೆ ಮಾಡುತ್ತಿದ್ದಾರೆ ಸಿನಿಪ್ರಿಯರು. ಅದೇ ರೀತಿ ರಿಷಬ್ ಶೆಟ್ಟಿ ಅವರು ಕೂಡ ಇನ್ನಷ್ಟು ಹೊಸ ಹೊಸ ಸಿನಿಮಾಗಳನ್ನು ಮಾಡಲು ಈಗಾಗಲೇ ಕೆಲಸ ಆರಂಭಿಸಿದ್ದಾರೆ.