ಕಾಂತರಾ ಸಿನಿಮಾ ಇಂದು ಐತಿಹಾಸಿಕ ಸಿನಿಮಾ ವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟು ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿರುವ ಏಕೈಕ ಸಿನಿಮಾ ಇದು ಎಂದರೆ ತಪ್ಪಾಗಲ್ಲ. ಈ ಸಿನಿಮಾದ ದೊಡ್ಡ ಸಕ್ಸಸ್ ಹಿಂಗೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರ ಶ್ರಮ ಇದ್ದು ಕಾಣುತ್ತದೆ. ಒಬ್ಬ ನಿರ್ದೇಶಕನಾಗಿ ಹಾಗೂ ನಟನಾಗಿ ಒಂದೇ ಸಿನಿಮಾದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭದ ಮಾತಲ್ಲ.
ಆದರೆ ಇವೆರಡೂ ರೋಲ್ ಗಳನ್ನು ರಿಷಬ್ ಈ ಹಿಂದೆಯೂ ಕೆಲವು ಸಿನಿಮಾಗಳಲ್ಲಿ ಉತ್ತಮವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹೌದು, ಕಾಂತಾರದಂತಹ ಅದ್ಭುತವಾದ ಸಿನಿಮಾವನ್ನ ಕನ್ನಡ ನಾಡಿಗೆ ಕೊಟ್ಟ ನಟ ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಇಂತಹ ಚಿತ್ರ ಕನ್ನಡದಲ್ಲಿ ಇದುವರೆಗೂ ಬಂದಿಲ್ಲ. ಬಹಳ ಕಷ್ಟದಿಂದ ಮೇಲೆ ಬಂದು ಇಂದು ಒಬ್ಬ ಅತ್ಯುತ್ತಮ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಭ್ ಶೆಟ್ಟಿ ನಿಜಕ್ಕೂ ಗ್ರೇಟ್.
ಇನ್ನು ಇಷ್ಟರಮಟ್ಟಿಗೆ ಸಾಧನೆ ಮಾಡಿರುವ ರಿಷಬ್ ಶೆಟ್ಟಿ ಅವರ ಹಿಂದೆ ಅವರ ಪತ್ನಿಯ ಸಹಕಾರವು ಕೂಡ ಇದ್ದೇ ಇದೆ. ರಿಷಬ್ ಶೆಟ್ಟಿ ಅವರ ಫ್ಯಾಮಿಲಿ ಸುತ್ತ ಒಂದು ಸುತ್ತು ಹಾಕಿ ಬರೋಣ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ. ಇವರಿಗೆ ಇಬ್ಬರು ಮಕ್ಕಳು ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು. ಎರಡನೇ ಮಗು ಹೆಣ್ಣು ಮಗುವಾಗಿದ್ದು ಆಕೆಯ ಮುಖವನ್ನು ಇತ್ತೀಚಿಗಷ್ಟೇ ರಿವೀಲ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರ ಮುದ್ದಿನ ಹೆಂಡತಿ ನೋಡುವುದಕ್ಕೆ ಬಹಳ ಕ್ಯೂಟ್ ಆಗಿರುವ ಪ್ರಗತಿ ಶೆಟ್ಟಿ ಎರಡು ಮಕ್ಕಳ ತಾಯಿ ಅಂತ ಹೇಳೋದಕ್ಕೆ ಸಾಧ್ಯವಿಲ್ಲ ಇವರು ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಆಕ್ಟಿವ್ ಇಲ್ಲದಿದ್ದರೂ ತನ್ನ ಪತಿಯ ಸಿನಿಮಾ ಅಪ್ಡೇಟ್ ಗಳನ್ನ ಹಾಗೂ ಮಕ್ಕಳ ಕುರಿತಾದ ವಿಷಯಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಾರೆ. ಸದ್ಯ ಪ್ರಗತಿಶೆಟ್ಟಿ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ರೂ.30,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಸುಮಾರು 228 ಪೋಸ್ಟ್ ಅಪ್ಲೋಡ್ ಮಾಡಿರುವ ಪ್ರಗತಿ ಶೆಟ್ಟಿ, ತಾವು ಟ್ರಿಪ್ ಗೆ ಹೋದ ಹಾಗೂ ಮಕ್ಕಳ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಕೂಡ ಕುಂದಾಪುರದವರೇ. 2017ರಲ್ಲಿ ಇವರಿಬ್ಬರ ವಿವಾಹ ನೆರವೇರಿತ್ತು. ಇವರು ಪತಿಯ ಸಿನಿಮಾ ಜರ್ನಿಯಲ್ಲಿ ಮದುವೆಯಾದಾಗಿನಿಂದ ಇಂದಿನವರೆಗೂ ಸಾಥ್ ಕೊಡುತ್ತಲೇ ಬಂದಿದ್ದಾರೆ.
ರಿಷಬ್ ಇದುವರೆಗೆ ಮಾಡಿದ ಎಲ್ಲಾ ಸಿನಿಮಗಳಿಗಿಂತಲೂ ಹೆಚ್ಚು ಸೂಪರ್ ಡೂಪರ್ ಹಿಟ್ ಆಗಿದ್ದು ಕಾಂತಾರಾ. ಇದು ರಿಷಭ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ ಬಾಕ್ಸ್ ಆಫೀಸ್ ನಲ್ಲಿಯೂ ಕಾಂತಾರ ಸಿನಿಮಾದ ಮೂಲಕ ರಿಷಬ್ ಅವರ ಬೇಡಿಕೆ ಹೆಚ್ಚಾಗಿದೆ. ಸದ್ಯ ಸ್ಯಾಂಡಲ್ವುಡ್ ನಲ್ಲಿ ಕಮಾಲ್ ಮಾಡಿರುವ ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ, ತನ್ನ ಎರಡನೇ ಮುತ್ತು ಮಗಳ ಫೋಟೋವನ್ನು ಹಾಗೂ ಆಕೆಯ ಹೆಸರನ್ನು ಕೊನೆಗೂ ರಿವೀಲ್ ಮಾಡಿದ್ದಾರೆ.
ರಿಷಬ್ ಅವರ ಮೊದಲ ಮಗ ರಣ್ವೀತ್. ಹಾಗೂ ಮಗಳು ರಾಧ್ಯಾ. ಕಳೆದ ಮಾರ್ಚ್ 4ನೇ ತಾರೀಕಿನಂದು ರಿಷಬ್ ಅವರಿಗೆ ಹೆಣ್ಣು ಮಗುವಿನ ಜನನವಾಗಿತ್ತು ಆದರೆ ಇದುವರೆಗೂ ಮಗಳ ಮುಖವನ್ನು ಎಲ್ಲಿಯೂ ತೋರಿಸಿರಲಿಲ್ಲ ರಿಷಬ್ ಶೆಟ್ಟಿ. ಮಗಳು ಹುಟ್ಟಿ ಏಳು ತಿಂಗಳ ನಂತರ ಆಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ ನಟ ರಿಷಬ್ ಶೆಟ್ಟಿ. ಇವರ ಮುದ್ದಾದ ಫ್ಯಾಮಿಲಿಗೆ ನಿಮ್ಮ ಒಂದು ಲೈಕ್ ಇರಲಿ.