ಸಿನಿಮಾ ನಾಯಕಿಯರು ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಆಕ್ಟಿವ್ ಆಗಿರುತ್ತಾರೆ. ಹಾಗಾಗಿ ಸಿನಿಮಾದಲ್ಲಿ ರಂಜಿಸುವುದರ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕೆಲವು ಸಮಯಗಳನ್ನು ಮೀಸಲಿಡುತ್ತಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿದವರು ಕೂಡ ಸೋಶಿಯಲ್ ಮಿಡೀಯಾದ ಮೂಲಕ ಜನರ ಸಂಪರ್ಕದಲ್ಲಿರುತ್ತಾರೆ.
ಸಾಕಷ್ಟು ನಟಿಯರು ಮದುವೆಯಾದ ಬಳಿಕ ಸಿನಿಮಾದಿಂದ ದೂರ ಉಳಿಯುತ್ತಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದ ಮೂಲಕವೇ ಹೆಚ್ಚು ಫಾಲೋವರ್ಸ್ ಹೊಂದಿರುವ ಮುದ್ದಾದ ನಟಿ ರಾಗಿಣಿ ಪ್ರಜ್ವಲ್.
ಚಂದನವನದ ವುಡ್ ನ ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತರಾಗಿರುವ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್. ಅಥವಾ ಈಗಿನ ಹೆಸರು ರಾಗಿಣಿ ಪ್ರಜ್ವಲ್. ರಾಗಿಣಿ ಚಂದ್ರನ್ ಅವರು ಜನಿಸಿದ್ದು, ಜುಲೈ 12 1990ರಲ್ಲಿ. ರಾಗಿಣಿಯವರು ಚಂದ್ರನ್ ಬಾಲು ಹಾಗೂ ತಾಯಿ ರಮಾ ಅವರ ಮುದ್ದಿನ ಮಗಳು. ಮಾಡೆಲ್ ಆಗಿದ್ದ ರಾಗಿಣಿ ನಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಕಲಾವಿದೆಯಾಗಿದ್ದಾಗ, ನಾಯಕಿಯಾಗಿ ನಟಿಸುವಾಗಲೇ ಪ್ರಜ್ವಲ್ ದೇವರಾಜ್ ಪರಿಚಯವಾಗುತ್ತೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ನಂತರ ಇಬ್ಬರೂ ಗುರುಹಿರಿಯರ ಒಪ್ಪಿಗೆಯ ಮ್ರೆಗೆ ಮದುವೆಯಾಗುತ್ತಾರೆ. ರಾಗಿಣಿ ಹಾಗೂ ಪ್ರಜ್ವಲ್ 2015 ರಲ್ಲಿ ಸಪ್ತಪದಿ ತುಳಿದರು. ರಾಗಿಣಿ ಹಾಗೂ ಪ್ರಜ್ವಲ್ ಅಭಿಮಾನಿಗಳ ಮೆಚ್ಚಿನ ಜೋಡಿಗಳಲ್ಲಿ ಒಂದು.
ರಾಗಿಣಿ ಹಾಗೂ ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಜೊತೆ ಜೊತೆಯಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇದನ್ನ ನೋಡಿದ ಅಭಿಮಾನಿಗಳು ಹಾರೈಕೆಯ ಸುರಿಮಳೆಯನ್ನೇ ಗೈಯ್ಯುತ್ತಾರೆ. ರಾಗಿಣಿ ಚಂದ್ರನ್ ಈ ಹಿಂದೆ ಅಭಿನಯಿಸಿದ್ದರು ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು ಪುನೀತ್ ರಾಜಕುಮಾರ್ ನಿರ್ಮಾಣದ ಇತ್ತೀಚಿಗೆ ತೆರೆಕಂಡ ಲಾ ಎನ್ನುವ ಚಿತ್ರದಲ್ಲಿ.
ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ರಾಗಿಣಿ ಾಭಿನಯಿಸಿದ್ದಾರೆ. ಒಬ್ಬ ಲಾಯರ್ ಆಗಿ ರಾಗಿಣಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ನಿರ್ಮಾಣದ ವೃಷಭ ಪ್ರಿಯ ಎನ್ನುವ ಸಿನಿಮಾದಲ್ಲಿ ರಾಗಿಣಿ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಇನ್ನಷ್ಟು ಸಿನಿಮಾ ಮಾಡುವ ನಿರೀಕ್ಷೆ ಅಭಿಮಾನಿಗಳಲ್ಲಿಯೂ ಹೆಚ್ಚಿದೆ.
ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿಯೂ ಕೂಡ ರಾಗಿಣಿ ವಿಶೇಷ ಪಾತ್ರ ಒಂದರಲ್ಲಿ ನಟಿಸಿದ್ದಾರೆ. ಈ ಮೂಲಕ ತನ್ನ ಪತಿಯ ಜೊತೆಗೆ ಅಭಿನಯಿಸಬೇಕು ಎನ್ನುವ ರಾಗಿಣಿಯ ಕನಸು ಕೂಡ ನನಸಾಗಿದೆ. ಇನ್ನು ನಟಿ ರಾಗಿಣಿ ಚಂದ್ರನ್ ಕಥಕ್ ನೃತ್ಯಗಾರ್ತಿ. ಅದ್ಭುತವಾಗಿ ನೃತ್ಯ ಮಾಡುತ್ತಾರೆ.
ಇನ್ಸ್ಟಾಗ್ರಾಮ್ ನಲ್ಲಿ ನೃತ್ಯದ ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇತ್ತೀಚಿಗೆ ಕಾಂತಾರ ಸಿನಿಮಾದ ಹಿಟ್ ಸಾಂಗ್ ’ಸಿಂಗಾರ ಸಿರಿಯೇ’ ಹಾಡಿಗೆ ರಾಗಿಣಿ ಪ್ರಜ್ವಲ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನ ನೋಡಿ ಅಭಿಮಾನಿಗಳು ಫಿಧಾ ಆಗಿದ್ದಾರೆ.
View this post on Instagram