PhotoGrid Site 1661061709223

ಕಷ್ಟ ಪಟ್ಟು ಬೆವರು ಸುರಿಸಿ ಸೋನು ಗೌಡ ಕಟ್ಟಿರುವ ಭವ್ಯ ಬಂಗಲೆ ಹೇಗಿದೆ ಗೊತ್ತಾ? ನೋಡಿ ಮೊದಲ ಬಾರಿಗೆ ವಿಡಿಯೋ!!

ಸುದ್ದಿ

ಈಗ ಎಲ್ಲಿ ನೋಡಿದರೂ ಸೋನು ಶ್ರೀನಿವಾಸ್ ಗೌಡ ಅವರದೇ ಸುದ್ದಿ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿರುವ ಸೋನು ಶ್ರೀನಿವಾಸ ಗೌಡ ಇವರಿಗೆ ಇನ್ಸ್ಟಾಗ್ರಾಮ್ ಹಾಗೂ ಇತರ ಸೋಶಿಯಲ್ ಮೀಡಿಯಾ ಗಳಲ್ಲಿ ಮಾತ್ರ ಆಕ್ಟಿವ್ ಆಗಿ ಇರುತ್ತಿದ್ದರು. ಇವರ ವಿಡಿಯೋಗಳು ಇವರಿಗೆ ಸಾಕಷ್ಟು ಟ್ರೋಲ್ ಆಗಿವೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೀಗ ಸೋನು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ 16 ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಓ ಟಿ ಟಿ ಎರಡು ವಾರಗಳನ್ನ ಪೂರೈಸಿದೆ. ಎರಡು ವಾರಗಳು ಕೂಡ ಸೋನು ಶ್ರೀನಿವಾಸ ಗೌಡ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ. ಸೋನು ಅವರು ಬಿಗ್ ಬಾಸ್ ಮನೆಯ ಪ್ರವೇಶಿಸಿದ್ದಕ್ಕೆ ಜನರಲ್ಲಿ ಸಾಕಷ್ಟು ಅಸಮಾಧಾನವಿದೆ. ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಸೋನು ಕಂಡ್ರೆ ಎಲ್ಲಾ ಸ್ಪರ್ಧಿಗಳಿಗೂ ಅಷ್ಟು ಉತ್ತಮ ಅಭಿಪ್ರಾಯವಿಲ್ಲ ಇದಕ್ಕೆ ಕಾರಣ ಸೋನು ಗೌಡ ಅವರ ಮಾತು.

ದಿನವೊಂದಕ್ಕೆ ವರಸೆ ಬದಲಾಯಿಸುತ್ತಾ ಒಂದು ಹೇಳಿದ್ರೆ ಇನ್ನೊಂದು ಉತ್ತರ ಕೊಡುತ್ತಾ ಸೋನು ಶ್ರೀನಿವಾಸ್ ಗೌಡ ಉಳಿದ ಸ್ಪರ್ಧಿಗಳಿಗೆ ಸ್ವಲ್ಪ ತಲೆನೋವೇ ಆಗಿದ್ದಾರೆ. ಈ ಹಿಂದೆ ಸೋನು ಶ್ರೀನಿವಾಸ ಗೌಡ ಅವರ ಖಾಸಗಿ ವಿಡಿಯೋ ಒಂದು ಲೀಕ್ ಆಗಿತ್ತು. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಅವರು ಹೇಳಿಕೊಂಡಿದ್ದಾರೆ.

ಆದರೆ ಸೋನು ಶ್ರೀನಿವಾಸ ಗೌಡ ಅವರ ಬಗ್ಗೆ ಕೆಲವರಿಗೆ ಉತ್ತಮ ಅಭಿಪ್ರಾಯವಿಲ್ಲ ಆದರೂ ಅವರ ಫಾಲೋವರ್ ಗಳಿಗೇನು ಕಮ್ಮಿ ಇಲ್ಲ. ಸೋನು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದರೂ ಅವರ ಇನ್ಸ್ಟಾಗ್ರಾಂ ವಿಡಿಯೋಗಳು ಹೊರ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲು ತನ್ನ ಸ್ವಂತ ಮನೆಯ ಟೂರ್ ಮಾಡಿಸಿದ್ರು ಸೋನು ಶ್ರೀನಿವಾಸ್ ಗೌಡ.

ಸೋನು ಅವರ ಮನೆ ಬಹಳ ದೊಡ್ಡದಿದೆ. ತಾವು ಸೆಲ್ಫಿ ವಿಡಿಯೋ ಮಾಡುತ್ತಾ ತಾಯಿ ಸುನಂದ ಹಾಗೂ ತಮ್ಮ, ಜೊತೆಗೆ ತನ್ನ ಪೆಟ್ ನಾಯಿಯ ಪರಿಚಯವನ್ನು ಕೂಡ ಸೋನು ಶ್ರೀನಿವಾಸ್ ಗೌಡ ಮಾಡಿಸಿದ್ರು. ಇನ್ನು ತನ್ನ ರೂಮ್, ಬೆಡ್ ಅದರಲ್ಲಿರುವ ಕಬೋರ್ಡ್, ತಾನು ಬಟ್ಟೆಗಳನ್ನು ಇಡುವ ರೀತಿ, ಮೇಕಪ್ ಮಾಡುವ ಕನ್ನಡಿ ಹೇಗೆ ಪ್ರತಿಯೊಂದು ವಿಷಯಗಳನ್ನು ಕೂಡ ವಿಡಿಯೋ ಮಾಡಿ ತೋರಿಸಿದ್ರು.

ಸೋನು ಶ್ರೀನಿವಾಸ ಗೌಡ ಅವರಿಗೆ ಇಷ್ಟು ದೊಡ್ಡ ಮನೆ ಇದ್ಯಾ ಅಂತ ಈಗ ಹಲವರಿಗೆ ಆಶ್ಚರ್ಯವೂ ಆಗುತ್ತಿದೆ. ಇನ್ನು ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ ಅಲ್ಲದೆ ಪ್ರಮೋಷನ್ ಆಕ್ಟಿವಿಟಿಗಳನ್ನು ಕೂಡ ಮಾಡುವ ಸೋನು ಸಾಮಾಜಿಕ ಜಾಲತಾಣದ ಮೂಲಕವೇ ಸಾಕಷ್ಟು ಹಣಗಳಿಸುತ್ತಾರೆ. ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸುತ್ತಾರೆ ಎನ್ನುವ ಸುದ್ದಿಯು ಇದೆ. ಅಂದಹಾಗೆ ಸೋನು ಶ್ರೀನಿವಾಸ ಗೌಡ ಅವರ ಮನೆ ಹೇಗಿದೆ ನೋಡಬೇಕಾ? ಇಲ್ಲಿದೆ ನೋಡಿ ವಿಡಿಯೋ.

Leave a Reply

Your email address will not be published. Required fields are marked *