ಸಿನಿಮಾ ಲೋಕ ಬಣ್ಣ ಬಣ್ಣಗಳಿಂದ ಕೂಡಿರುತ್ತವೆ. ಹೌದು, ನೋಡಲು ಹೇಗೆ ಕಲರ್ ಫುಲ್ ಆಗಿದ್ದರೂ ಹೇಳುವಷ್ಟು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ಈ ಲೋಕದಲ್ಲಿಬಣ್ಣ ಬಣ್ಣದ ಕನಸುಗಳನ್ನು ಹೊತ್ತುಕೊಂಡು ಈ ಲೋಕಕ್ಕೆ ಅನೇಕರು ಎಂಟ್ರಿ ಕೊಡುತ್ತಾರೆ. ಎಂಟ್ರಿ ಕೊಟ್ಟ ಮಾತ್ರಕ್ಕೆ ಎಲ್ಲರೂ ಯಶಸ್ಸು ಕಾಣುತ್ತಾರೆ ಎಂದು ಹೇಳುವುದು ಕಷ್ಟ. ಹೌದು, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ.
ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ಅದೇನೇ ಇರಲಿ ಇಲ್ಲಿ ಕಲ್ಲು ಮುಳ್ಳಿನ ಹಾದಿಯ ಜೊತೆಗೆ ಹೂವಿನಿಂದ ಹಾದಿಯೂ ಕೂಡ ಸಿಗಬಹುದು. ಸಿನಿಮಾ ಲೋಕದಲ್ಲಿ ಇರುವವರು ಎಂದರೆ ಜನ ಸಾಮಾನ್ಯರು ಯೋಚನೆ ಮಾಡುವ ರೀತಿಯೇ ಭಿನ್ನ.
ಸಿನಿಮಾರಂಗದಲ್ಲಿರುವವರಿಗೆ ಯಾವುದೇ ತೊಂದರೆ ಇರುವುದಿಲ್ಲ. ಕೈ ತುಂಬಾ ಸಂಭಾವನೆ ಸಿಗುತ್ತದೆ ಜೊತೆಗೆ ಒಂದಷ್ಟು ನೇಮ್ ಫೇಮ್ ಸಿಗುತ್ತದೆ ಎಂದು ಕೊಳ್ಳುವವರು ಹೆಚ್ಚು. ಆದರೆ ಈ ರಂಗದಲ್ಲೂ ಏಳು ಬೀಳುಗಳಿವೆ, ಸೋಲು ಗೆಲುವು ಈ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವಿರಬೇಕು. ಅದರ ಜೊತೆಗೆ ಕೆಲವೊಮ್ಮೆ ಗಾಳಿಸುದ್ದಿಗಳ ಬಾಯಿಗೂ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಕೆಲವು ನಟರು ಸಣ್ಣ ವಯಸ್ಸಿನಲ್ಲಿ ಇ’ಹಲೋಕ ತ್ಯಜಿಸಿದ್ದಾರೆ.
ಕನ್ನಡದ ಖ್ಯಾತ ನಟರನ್ನು ಅಭಿಮಾನಿಗಳು ಮರೆತ್ತಿಲ್ಲ. ಇವತ್ತಿಗೂ ಅವರನ್ನು ನೆನಪಿಸುವಂತಹ ಕೆಲವೊಂದು ಕೆಲಸಗಳು ಆಗಿವೆ. ಹೌದು, ಚಂದನವನದ ಸಿನಿ ಸಾಧಕರ ಹೆಸರನ್ನು ರಸ್ತೆಗಳಿಗೆ ಇಡಲಾಗಿದೆ. ಹಾಗಾದರೆ ಯಾವೆಲ್ಲಾ ರಸ್ತೆಗಳಿಗೆ ಯಾರ ಹೆಸರನ್ನು ಇಟ್ಟಿದ್ದಾರೆ ಎಂದು ನೋಡಲು ಈ ಕೆಳಗಿನ ಸ್ಟೋರಿ ಓದಿ. ಮೊದಲನೆಯದಾಗಿ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉದ್ದದ ರಸ್ತೆ ಇದೆ.
ಹೌದು, ಈ ಮೈಸೂರು ರಸ್ತೆ ನಾಯಂಡಳ್ಳಿ ಜಂಕ್ಷನ್ ನಿಂದ ಹಿಡಿದು ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿದೆ. ಇನ್ನು 12 ಕಿಲೋಮೀಟರ್ ಇರುವ ರಸ್ತೆ ಇದಾಗಿದ್ದು, ನಿಜಕ್ಕೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇದು ಕನ್ನಡ ನಟನ ಹೆಸರಿನಲ್ಲಿರುವ ಉದ್ದದ ರಸ್ತೆ ಇದಾಗಿದೆ.
ಎರಡನೆಯದಾಗಿ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಹೆಸರನ್ನು ಸಾಕಷ್ಟು ರಸ್ತೆಗಳಿಗೆ ಇಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸಾಕಷ್ಟು ರಸ್ತೆಗಳು ರಾಜಕುಮಾರ್ ಅವರ ಹೆಸರಿನಲ್ಲಿದೆ, ಅದರಲ್ಲಿ ಬಹಳ ಮುಖ್ಯವಾಗಿ ರಾಜಾಜಿನಗರದ ಡಾಕ್ಟರ್ ರಾಜಕುಮಾರ್ ಜನಪ್ರಿಯವಾಗಿದೆ. ಅದರ ಜೊತೆಗೆ, ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲೂ ಕೂಡ ಹಲವಾರು ರಸ್ತೆಗಳಿವೆ.
ಅವರ ಹೆಸರನ್ನು ಕೂಡ ಅನೇಕ ರಸ್ತೆಗಳಿಗೆ ಇಡಲಾಗಿದೆ. ಅದಲ್ಲದೆ, ಸಿನಿಮಾರಂಗಕ್ಕೆ ಅವರು ನೀಡಿದ ಕೊಡುಗೆ ನೀಡಿದ್ದಾರೆ ಪಾರ್ವತಮ್ಮ ರಾಜ್ ಕುಮಾರ್. ಹೀಗಾಗಿ ದೊಡ್ಮನೆ ಕುಟುಂಬದ ಸೊಸೆಯ ಹೆಸರನ್ನು ರಸ್ತೆಗಳಿಗೆ ಇಡಲಾಗಿರುವುದು ವಿಶೇಷ. ಇನ್ನು, ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ದೊಡ್ಡ ದಾಖಲೆಯ ರಸ್ತೆಯಾಗಿದೆ.
ಅಂದಹಾಗೆ, ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ಬಹಳ ಉದ್ದದ ರಸ್ತೆ ಆಗಿದೆ. ಆ ರಸ್ತೆಯೂ 14.5 ಕಿಲೋಮೀಟರ್ ಉದ್ದ ಇರುವ ಬನಶಂಕರಿಯಿಂದ ಹಿಡಿದು ಕೆಂಗೇರಿ ವರೆಗೂ ಇರುವ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಇದು ಕನ್ನಡ ನಟನಾ ಹೆಸರಿನಲ್ಲಿರುವ ಅತಿ ಉದ್ದದ ರಸ್ತೆ ಎಂದು ಖ್ಯಾತಿ ಗಳಿಸಿದೆ.