ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆಯ ಸಂಭ್ರಮ ಹೆಚ್ಚಾಗಿದೆ ಸ್ಟಾರ್ ನಟ ನಟಿಯರು ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಹಲವು ಸ್ಟಾರ್ ನಟ ನಟಿಯರ ವಿವಾಹ ಇತ್ತೀಚೆಗೆ ನೆರವೇರುತ್ತಿದೆ. ಬಾಲಿವುಡ್ ನಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ವಿವಾಹವಾಯಿತು, ಇತ್ತ ಸೌತ್ ನಲ್ಲಿ ಲೇಡಿ ಸೂಪರ್ ಸ್ಟಾರ್ ಅನ್ನೋ ಏನಂತಾರೆ ಹಾಗೂ ನಿರ್ದೇಶಕ ವಿಘ್ನೇಶ್ ಶಿವಮ್ ಅವರ ಮದುವೆಯ ಮಹೋತ್ಸವವು ನಡೆಯಿತು. ರೋಮ್ಯಾಂಟಿಕ್ ಹೀರೋ ರವಿಚಂದ್ರನ್ ಅವರ ಮಗನ ಸರದಿ.
ಸದ್ಯ ಸಿನಿಮಾ ಕಿಂತ ಹೆಚ್ಚಾಗಿ ಮಗನ ಮದುವೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ರವಿಚಂದ್ರನ್ ಅವರು. ರವಿಚಂದ್ರನ್ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಪುತ್ರಿ. ಗಂಡು ಮಕ್ಕಳು ಇಬ್ಬರು ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡವರು. ಅವರಲ್ಲಿ ಮನೋರಂಜನ್ ರವಿಚಂದ್ರನ್ ಈಗಾಗಲೇ ಸಿನಿಮಾ ವನ್ನ ಮಾಡಿದ್ದಾರೆ. ಇದೀಗ ಮನೋರಂಜನ್ ಅವರ ಮದುವೆ ಮಹೋತ್ಸವವನ್ನು ನೆರವೇರಿಸುವುದಕ್ಕೆ ರವಿಚಂದ್ರನ್ ಮುಂದಾಗಿದ್ದಾರೆ ಎನ್ನುವ ಶ್ರುತಿ ಹಬ್ಬಿದೆ.
ಹೌದು ಮನೋರಂಜನ್ ರವಿಚಂದ್ರನ್ ಅವರ ಮದುವೆಯ ತಯಾರಿಗಳು ಭರದಿಂದ ನಡೆದಿವೆ. ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಏರ್ಪಟ್ಟಿದೆ ಸದ್ಯದಲ್ಲಿಯೇ ಮನೋರಂಜನ್ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಕೆಲವು ಮಾಹಿತಿಯ ಪ್ರಕಾರ ಇದೇ ಆಗಸ್ಟ್ 21 ಹಾಗೂ 22 ರಂದು ಮನೋರಂಜನ್ ಅವರ ಮದುವೆಯ ಮಹೋತ್ಸವ ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನು ವೃತ್ತಿಯಲ್ಲಿ ವೈದ್ಯೆ ಆಗಿರುವ ಹುಡುಗಿಯನ್ನು ಮನೋರಂಜನ್ ವರಿಸಲಿದ್ದಾರಂತೆ.
ಆದರೆ ಮನೋರಂಜನ್ ವಿವಾಹವಾಗುವ ಹುಡುಗಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಆದರೆ ರವಿಚಂದ್ರನ್ ಅವರ ಹಾಗೂ ಅವರ ಪುತ್ರನ ಅಭಿಮಾನಿಗಳು ಮಾತ್ರ ಈ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿ ಕಮೆಂಟ್ ಮಾಡುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗಾಗಲೇ ತಮ್ಮ ಪುತ್ರಿಯ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ 2009ರಲ್ಲಿ ಅವರ ಪುತ್ರಿಯ ಮದುವೆಯಾಗಿತ್ತು.
ಇದೀಗ ಅವರ ಮಗ ಮನೋರಂಜನ್ ಅವರ ವಿವಾಹವನ್ನು ಮಾಡಿ ತಮ್ಮ ಜವಾಬ್ದಾರಿಯನ್ನ ಒಂದಷ್ಟು ಕಡಿಮೆಗೊಳಿಸಿಕೊಳ್ಳಲು ಕನಸುಗಾರ ನಿರ್ಧರಿಸಿದಂತಿದೆ. ಅಂದಹಾಗೆ ರವಿ ಸರ್ ಅವರ ಕಿರಿಯ ಪುತ್ರ ವಿಕ್ರಂ ಹರ ರವಿಚಂದ್ರನ್ ಅವರ ತ್ರಿವಿಕ್ರಮ ಸಿನಿಮಾ ಈಗಾಗಲೇ ತೆರೆಕಂಡು ಉತ್ತಮ ಮೆಚ್ಚುಗೆಯನ್ನ ಗಳಿಸಿಕೊಂಡಿದೆ. ಮನೋರಂಜನ್ ಕೂಡ ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ 2017ರಲ್ಲಿ ಸಾಹೇಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು.
ಇದಾದ ಬಳಿಕ ಕ್ರೇಜಿಸ್ಟಾರ್, ಬೃಹಸ್ಪತಿ ಮುಗಿಲುಪೇಟೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪನಂತೆ ತಾವು ಕೂಡ ಸಿನಿಮಾದಲ್ಲಿ ಸಾಧನೆ ಮಾಡಬೇಕು ಅನ್ನೋದು ರವಿಚಂದ್ರನ್ ಅವರ ಮಕ್ಕಳಾದ ಮನೋರಂಜನ್ ಹಾಗೂ ವಿಕ್ರಂ ಅವರ ಅಭಿಲಾಷೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನವೂ ಸಾಗುತ್ತಿದೆ. ರವಿಚಂದ್ರನ್ ಅವರು ಒಬ್ಬ ನಟನಾಗಿ ನಿರ್ದೇಶಕರಾಗಿ ಸಾಲು ಸಾಲು ಸಿನಿಮಾಗಳನ್ನ ನೀಡಿ, ಸಿಂಹ ಅಂದ್ರೆ ಹೀಗಿರಬೇಕು ಅಂತ ತೋರಿಸಿಕೊಟ್ಟವರು.
ಇದೀಗ ಸಿನಿಮಾದ ಜೊತೆ ಕನ್ನಡದ ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಕ್ರೇಜಿಸ್ಟಾರ್ ತೀರ್ಪುಗಾರರಾಗಿದ್ದಾರೆ. ಅಲ್ಲದೆ ರವಿಚಂದ್ರನ್ ಅವರು ತೆಲುಗು ಸಿನಿಮಾದಲ್ಲಿಯೂ ಕೂಡ ನಟಿಸಲಿದ್ದಾರೆ ಅನ್ನುವ ಸುದ್ದಿ ಇದೆ. ಒಟ್ಟಿನಲ್ಲಿ ಸಿನಿಮಾ ಹಾಗೂ ವೈಯಕ್ತಿಕ ಜೀವನ ಎರಡರಲ್ಲಿಯೂ ರವಿಚಂದ್ರನ್ ಫ್ಯಾಮಿಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದೆ.