Picsart 22 08 14 17 46 58 443

ಕನ್ನಡ ಚಿತ್ರರಂಗದ ರಿಯಲ್ ಅತ್ತೆ ಸೊಸೆಯಂದಿರು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಎಲ್ಲರ ವಿಡಿಯೋ!!

ಸುದ್ದಿ

ಸಿನಿಮಾ‌ ಅಥವಾ ‌ಕಿರುತೆರೆಯಲ್ಲಿ ಹೆಚ್ಚಿನ‌ ಕಥೆಗಳಲ್ಲಿ ಅತ್ತೆ ಸೊಸೆ‌‌ ಸಂಬಂಧದ ಕಥೆ ಇದ್ದೇ ಇರುತ್ತದೆ. ಅದರಲ್ಲಿ ಅತ್ತೆ ಜೋರಿದ್ದರೆ ಸೊಸೆ‌ ತುಂಬಾ ಪಾಪದವಳು ಅಥವಾ ಮೃದು ಸ್ವಭಾವದಳಾಗಿರುತ್ತಾಳೆ.‌ ಸೊಸೆ ಜೋರಿದ್ದರೆ ಅತ್ತೆ ತುಂಬಾ ಪಾಪ ಇರುತ್ತಾರೆ.‌ ಅತ್ತೆ ಸೊಸೆ ಅಂದರೆ ಹೆಚ್ಚಾಗಿ ವಿರುದ್ಧವಾಗಿಯೇ ಇರುತ್ತಾರೆ. ಹೀಗೆ ಸಿನಿಮಾ ಜೀವನದಲ್ಲಿ ಅಂದರೆ ರೀಲ್ ಲೈಫ್ ನಲ್ಲಿ ಅತ್ತೆಯಾಗಿಯೋ ಅಥವಾ ಸೊಸೆಯಾಗಿಯೋ ಪಾತ್ರ ಮಾಡಿದ ನಟಿಯರ ನಿಜ ಜೀವನದ ಅತ್ತೆ ಸೊಸೆ ಯಾರು ಅನ್ನುವುದನ್ನು ನಾವಿವತ್ತು ಹೇಳುತ್ತೇವೆ.

ಮೊದಲನೆಯದಾಗಿ ಕನ್ನಡದ ಹಿರಿಯ ಖ್ಯಾತ ನಟಿ ಜಯಂತಿ ಕುರಿತಾಗಿ ಮಾತನಾಡೋಣ.‌ ಇವರು ಅತ್ತೆಯಾಗಿ ಪ್ರಮೋಷನ್ ತೆಗೆದುಕೊಂಡಾಗ ಸೊಸೆಯಾಗಿ ಬಂದವರು ‌ಕನ್ನಡದ ಮುದ್ದಾದ ನಟಿ ಅನುಪ್ರಭಾಕರ್. ಅಭಿನಯ ಶಾರದೆ ಜಯಂತಿ ಅವರ ಮಗನಾದ ಕೃಷ್ಣಕುಮಾರ್ ಅವರನ್ನು ಅನುಪ್ರಭಾಕರ್ ಮೊದಲು ಮದುವೆಯಾಗಿದ್ದರು, ಆದರೆ ನಂತರ ಇವರ ನಡುವೆ ವೈಮನಸ್ಸು ಮೂಡಿ ವಿಚ್ಛೇದನದ ಮೂಲಕ ದೂರ ಆಗುತ್ತಾರೆ.‌

ನಂತರ ಅವರು ನಟ ರಘು ಮುಖರ್ಜಿ ಅವರನ್ನು ಮದುವೆಯಾಗಿ ಇದೀಗ ಮಗುವಿನ ತಾಯಿಯಾಗಿ ಸಂಸಾರ ಸುಖ ಸಂಸಾರ ನಡೆಸುತ್ತಿದ್ದಾರೆ. ಎರಡನೆಯವರಾಗಿ ಡೈನಾಮಿಕ್ ಹೀರೋ ದೇವರಾಜ್ ಅವರ‌ ಪತ್ನಿ ನಟಿ ಚಂದ್ರಲೇಖ.ಇವರ ದೊಡ್ಡ‌ ಮಗ ಪ್ರಜ್ವಲ್ ದೇವರಾಜ್ ಅವರು ಮುದ್ದಾದ ರಾಗಿಣಿ ಯವರನ್ನು ಮದುವೆಯಾಗಿದ್ದಾರೆ. ನಟಿ ರಾಗಿಣಿ ಪ್ರಜ್ವಲ್ ಹಾಗೂ ನಟಿ ಚಂದ್ರಲೇಖ ಮುದ್ದಾದ‌ ರಿಯಲ್ ಲೈಫ್ ಅತ್ತೆ ಸೊಸೆಯಾಗಿದ್ದಾರೆ.

ಇನ್ನು ಹಿರಿಯ ನಟಿ ಗಿರಿಜಾ ಲೋಕೇಶ್ ಮತ್ತು ಅವರ ಸೊಸೆ ಗ್ರೀಷ್ಮ ಸೃಜನ್, ಹೌದು, ಗಿರಿಜಾ ಲೋಕೇಶ್ ಅವರ ಮಗ ನಟ ಸೃಜನ್ ಲೋಕೇಶ್ ಅವರು ನಟಿ ಗ್ರೀಷ್ಮಾ ಅವರನ್ನು ಮದುವೆಯಾಗಿದ್ದು ಗಿರಿಜಾ ಲೋಕೇಶ್ ಅವರ ಮುದ್ದಿನ ಸೊಸೆಯಾಗಿದ್ದಾರೆ ಗ್ರೀಷ್ಮಾ ಸೃಜನ್‌. ಹಾಗೆಯೇ ನಟಿ ಜಯಮಾಲಾ ಅವರ ಮಗ‌ ವಿನೋದ್ ಪ್ರಭಾಕರ್ ಅವರು ನಟಿ ತಾರಿಖಾ ಅವರನ್ನು ಮದುವೆ ಆಗಿದ್ದಾರೆ.

ಈ ಮೂಲಕ ವಿನೋದ್ ಪ್ರಭಾಕರ್ ಅವರ ಪತ್ನಿ ತಾರಿಖಾ ಹಾಗೂ ಟೈಗರ್ ಪ್ರಭಾಕರ್ ಅವರ ಮಾಜಿ ಪತ್ನಿ ನಟಿ ಜಯಮಾಲಾ ಅವರು ಸಂಬಂಧದಲ್ಲಿ ಅತ್ತೆ ಸೊಸೆಯಾಗುತ್ತಾರೆ. ಇನ್ನು ನಟ ಜೈ ಜಗದೀಶ್ ಅವರ ಪತ್ನಿ ನಟಿ ವಿಜಯಲಕ್ಷ್ಮಿ ಸಿಂಗ್ ಬಗ್ಗೆ ಮಾತನಾಡುವುದಾದರೆ ಇದು ಅವರ ಮಗ ಸೊಸೆ ಸಂಬಂಧ ಅಲ್ಲದಿದ್ದರೂ ಸೋದರತ್ತೆ ಸಂಬಂಧ ಆಗುತ್ತದೆ. ಹೌದು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಂಗಿ ವಿಜಯಲಕ್ಷ್ಮಿ ಸಿಂಗ್. ರಾಜೇಂದ್ರ ಸಿಂಗ್ ಅವರ ಮಗಳು ರಿಷಿಕಾ ಸಿಂಗ್ ಸಂಬಂಧದಲ್ಲಿ ಸೊಸೆಯಾಗುತ್ತಾರೆ.

ಇದೇ ರೀತಿ ನಟಿ ವಿನಯ ಪ್ರಸಾದ್ ಹಾಗೂ ನಟಿ ಕೃಷ್ಣ ಭಟ್. ವಿನಯ ಪ್ರಸಾದ್ ಅವರು ಕಿರುತೆರೆಯ ನಟ ರವಿ ಭಟ್ ಅವರ ಅಕ್ಕನಾಗಿದ್ದು ರವಿ ಭಟ್ ಅವರ ಮಗಳು ಕೃಷ್ಣ ಭಟ್. ಈ‌ ಮೂಲಕ ಕೃಷ್ಣ ಭಟ್ ಅವರಿಗೆ ವಿನಯಾ ಪ್ರಸಾದ್ ಸೋದರ ಅತ್ತೆ ಆಗುತ್ತಾರೆ. ನಟಿ ಕೃಷ್ಣ ಭಟ್ ಅವರು ಸುವರ್ಣ ದೀರ್ಘ ಸಂಧಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ ಹಿರಿಯ ನಟಿ ಪಂಡರಿ ಬಾಯಿಯವರಿಗೆ ಕಿರುತೆರೆ ಹಾಗೂ ಸಿನಿಮಾ ನಟಿ ಸ್ವಾತಿ ಅವರು ಸೊಸೆಯಾಗುತ್ತಾರೆ.

ನಟಿ ಪಂಡರಿ ಬಾಯಿ ಅವರ ತಂಗಿ ಮೈನಾವತಿ. ಅವರ ಸೊಸೆಯಾಗಿ ನಟಿ ಸ್ವಾತಿ ಮನೆ ಸೇರುತ್ತಾರೆ. ಈ ಮೂಲಕವಾಗಿ ಪಂಡರಿಬಾಯಿ ಯವರ ಸೊಸೆಯಾಗಿ ಸ್ವಾತಿ ಮನೆ ತುಂಬಿದ್ದಾರೆ. ಈ ಮಾಹಿತಿ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *