ಕನ್ನಡದಲ್ಲಿ ಇದು ಸ್ಟಾರ್ ನಟಿಯರಿಗೇನು ಕೊರತೆ ಇಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಒಂದೊಂದೇ ಚಿತ್ರದ ಮೂಲಕ ಹಿಟ್ ಆಗುತ್ತಿದ್ದಾರೆ. ಇವರೆಲ್ಲರೂ ಅಷ್ಟೇ ಅಭಿಮಾನಿಗಳನ್ನು ಕೂಡ ಕಳಿಸಿ ಕೊಂಡಿದ್ದಾರೆ ಆದರೆ ಅದೆಷ್ಟೇ ನಟಿಯರು ಬಂದು ಹೋದರು ನೀವೇ ನಮ್ಮ ಸ್ಟಾರ್ ನಟಿ ಅಂತ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡದ ಟಾಪ್ 5 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಮ್ಯಾ ಅವರ ಹೆಸರು ಕೂಡ ಇದೆ ಅಂದ್ರೆ ನೀವು ಅವರ ವರ್ಚಸ್ಸು ಎಷ್ಟಿರಬೇಕು ಅಂತ ಊಹಿಸಬಹುದು!
ಹೌದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಟನೆಯಿಂದ ದೂರ ಉಳಿದು ಬಹಳ ಸಮಯವೇ ಆಯಿತು ಆದರೆ ಸ್ಯಾಂಡಲ್ವುಡ್ ನಲ್ಲಿ ಅವರ ಹವಾ ಮಾತ್ರ ಕಮ್ಮಿಯಾಗಿಲ್ಲ. ಅದೆಷ್ಟೇ ನಟಿಯರು ಬಂದು ಹೋದರು ನೀವೇ ನಮ್ಮ ಸ್ಟಾರ್ ನಟಿ ಅಂತ ಅವರ ಅಭಿಮಾನಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ನಟಿ ರಮ್ಯಾ ತೆರೆಯ ಮೇಲೆ ಕಾಣಿಸಿಕೊಳ್ಳದೆ ಸುಮಾರು 8 ವರ್ಷಗಳೆ ಕಳೆದಿವೆ.
ನಟಿ ರಮ್ಯಾ ಬೇಗ ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಆಗಲಿ ಅಂತ ಅವರ ಅಭಿಮಾನಿಗಳು ದಿನವೂ ಬಯಸುತ್ತಾರೆ. ಅಂದಹಾಗೆ ಈ ಬಾರಿ ಒರ್ ಮ್ಯಾಕ್ಸ್ ವಿಡಿಯೋ ನಡೆಸಿದ ಸಮೀಕ್ಷೆಯಲ್ಲಿ ಐದು ಜನ ಕನ್ನಡದ ಟಾಪ್ ನಟಿಯರಲ್ಲಿ ರಮ್ಯಾ ಅವರಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಇನ್ನು ರಾಧಿಕಾ ಪಂಡಿತ್, ಆಶಿಕಾ ರಂಗನಾಥ್, ರಚಿತಾ ರಾಮ್ ಹಾಗೂ ರಶ್ಮಿಕಾ ಮಂದಣ್ಣ ಹೆಸರು ಇದೆ. ಇದರಲ್ಲಿ ನಂಬರ್ ಒನ್ ಸ್ಥಾನ ಯಾರಿಗೆ ಸಿಕ್ಕಿದೆ ಗೊತ್ತ?
ರಮ್ಯಾ ಅವರು ಒರ್ಮ್ಯಾಕ್ಸ್ ಮೀಡಿಯಾ ಪ್ರಕಟಿಸಿದ ಈ ಪಟ್ಟಿಯಲ್ಲಿ ತನ್ನ ಹೆಸರನ್ನು ಇರುವುದನ್ನು ನೋಡಿ ಟ್ವಿಟರ್ ನಲ್ಲಿ ಖುಷಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾದಿಂದ ದೂರ ಇದ್ರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಸದಾ ಆಕ್ಟಿವ್ ಆಗಿರುತ್ತಾರೆ. ಅವರು ಟ್ವಿಟರ್ ನಲ್ಲಿ ‘ ಕಳೆದ ಎಂಟು ವರ್ಷಗಳಿಂದ ನಾನು ಚಿತ್ರರಂಗದಿಂದ ದೂರ ಉಳಿದಿದ್ದರೂ ಕೂಡ.
ಈ ಪಟ್ಟಿಯಲ್ಲಿ ನನ್ನ ಹೆಸರು ಇದೆ ರಚಿತರಾಮ್, ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಜೊತೆ ಈ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇರುವುದು ಖುಷಿಕೊಟ್ಟಿದೆ’ ಎಂದು ರಮ್ಯಾ ಅವರು ಬರೆದುಕೊಡಿದ್ದಾರೆ. ನಟಿ ರಮ್ಯಾ ಅವರು 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ಎಲ್ಲಾ ಟಾಪ್ ಸ್ಟಾರ್ ನಟರ ಜೊತೆ ಅಭಿನಯಿಸಿರುವ ರಮ್ಯಾ, 2014ರ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ. ನಟಿ ರಮ್ಯಾ ಅಭಿನಯದ ’ನಾಗರಹಾವು’ ಚಿತ್ರ 2016ರಲ್ಲಿ ತೆರೆಕಂಡಿತ್ತು.
ಅವರು ಮತ್ತೆ ನಟನಿಗೆ ಬರಬೇಕು ಎನ್ನುವುದೇ ಅವರ ಅಭಿಮಾನಿಗಳ ಹಾರೈಕೆ. ಇತ್ತೀಚಿಗೆ ಉತ್ತಮ ಕಥೆ ಸಿಕ್ಕರೆ ಮತ್ತೆ ನಟಿಸುತ್ತೇನೆ ಎಂದು ರಮ್ಯಾ ಕೂಡ ಹೇಳಿದ್ದಾರೆ. ಅಂದಹಾಗೆ ಈ ಸಮೀಕ್ಷೆಯ ವರದಿಯ ಪ್ರಕಾರ ಮೊದಲ ಸ್ಥಾನವನ್ನು ಪಡೆದಿರುವುದು ಬೇರೆ ಯಾರು ಅಲ್ಲ ಕಿರಿಕ್ ಪಾರ್ಟಿಯ ನಾಯಕ ನಟಿ ರಶ್ಮಿಕಾ ಮಂದಣ್ಣ! ಸದ್ಯ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕ ಮಂದಣ್ಣ ಕನ್ನಡದ ಟಾಪ್ ಆಫ್ 5 ನಟಿಯರ ಲಿಸ್ಟ್ ನಲ್ಲಿಯೂ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.