Picsart 22 08 09 14 52 31 674

ಕನ್ನಡದ ಖ್ಯಾತ ಸೀರಿಯಲ್ ನಟರ ಪತ್ನಿಯರು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ!!

ಸುದ್ದಿ

ಇಂದು ಸಿನಿಮಾಗಿಂತಲೂ ಸೀರಿಯಲ್ ಗಳ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಯಾಕಂದ್ರೆ ಬಹಳ ಅದ್ಭುತವಾಗಿ. ಅದ್ಧೂರಿಯಾಗಿ ಧಾರಾವಾಹಿಗಳನ್ನು ಚಿತ್ರೀಕರಣ ಮಾಡಲಾಗುತ್ತೆ. ಅತ್ಯುತ್ತಮ ಕಥೆಯನ್ನು ಹೆಣೆಯಲಾಗುತ್ತೆ. ಧಾರಾವಾಹಿಗಳಲ್ಲಿ ನಟಿಸುವ ನಟ ನಟಿಯರು ಕೂಡ ಬಹಳ ಉತ್ತಮವಾಗಿ ನಟನೆಯನ್ನು ಮಾಡುತ್ತಾರೆ. ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸುತ್ತಾರೆ. ಅದರಲ್ಲೂ ಹೊಸಬರಾಗಿ ಸೇರಿಕೊಂಡವರು ಕೂಡ ಬಹಳ ಅನುಭವಿ ನಟರಂತೆ ಅಭಿನಯಿಸುತ್ತಾರೆ.

ಇನ್ನು ಧಾರಾವಾಹಿ ಕಲಾವಿದರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಎಲ್ಲರಿಗೂ ಆಸಕ್ತಿ ಇರುತ್ತೆ. ಹಾಗಾದ್ರೆ ಬನ್ನಿ ಸೀರಿಯಲ್ ನಟರ ಪತ್ನಿಯರು ಯಾರು ಹಾಗೂ ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವಿಲ್ಲಿ ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ಇಂದು ಹೆಚ್ಚು ಫೇಮಸ್ ಆಗಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಆರ್ಯವರ್ಧನ್ ಆಗಿ ನಟಿಸುತ್ತಿರುವ ಅನಿರುದ್ಧ.

ಇವರು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಜೊತೆಜೊತೆಯಲಿ ಧಾರಾವಾಹಿ. ಇವರ ಪತ್ನಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಮಗಳು ಕೀರ್ತಿ. ಕಾಮಿಡಿ ಕಲಾವಿದನಾಗಿರುವ ನಟ ರವಿಶಂಕರ್ ಗೌಡ. ರವಿಶಂಕರ್ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರ್‍ಎ. ಆದರೆ ಇಂದಿಗೂ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದಾರೆ. ಸಿಲ್ಲಿ ಲಲ್ಲಿ ಧಾರಾವಾಹಿಯ ಪಾತ್ರ ಅದಾಗಿತ್ತು.

ಇವರು ಪ್ರಸಿದ್ಧ ಗಾಯಕಿ ಮಂಜುಳಾ ಗುರುರಾಜ್ ಅವರ ಮಗಳು ಸಂಗೀತ ಗುರುರಾಜ್ ಅವರನ್ನು ಮದುವೆಯಾಗಿದ್ದಾರೆ. ಸಂಗೀತ ಗುರುರಾಜ್ ಕೂಡ ಅತ್ಯದ್ಭುತ ಹಿನ್ನೆಲೆ ಗಾಯಕಿ. ಸಿಹಿಕಹಿ ಚಂದ್ರು. ಧಾರಾವಾಹಿ, ಸಿನಿಮಾ, ಕುಕ್ಕರಿ ಶೋ ಮೊದಲಾದವುಗಳ ಮೂಲಕ ಸಾಕಷ್ಟು ಫೇಮಸ್ ಆಗಿರುವ ನಟ ಸಿಹಿಕಹಿ ಚಂದ್ರು ಅವರ ಪತ್ನಿ ಸಿಹಿ ಕಹಿ ಗೀತಾ. ಇವರು ಕೂಡ ಸಾಕಷ್ಟು ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಇವರ ಮಗಳೂ ಕೂಡ ಸ್ಯಾಂಡಲ್ ವುಡ್ ನ ನಟಿ. ಇನ್ನು ನಟ ಮಾಸ್ಟರ್ ಆನಂದ್. ಅತ್ಯುತ್ತಮ ನಟ ಹಾಗೂ ನಿರೂಪಕರಾಗಿರುವ ಮಾಸ್ಟರ್ ಆನಂದ್ ಯಶಸ್ವಿನಿ ಅವರನ್ನ ಮದುವೆಯಾಗಿದ್ದಾರೆ. ಇವರ ಮಗಳು ವಂಶಿಕಾ ಇಂದು ರಿಯಾಲಿಟೊ ಶೋಗಳ ಮೂಲಕ ಫೇಮಸ್ ಆಗಿದ್ದು ಬಾಲನಟಿಯಾಗಿಯು ಅಭಿನಯಿಸುತ್ತಿದ್ದಾರೆ. ಮುಂದಿನ ಹೆಸರು ನಟ ಮಂಡ್ಯ ರಮೇಶ್.

ಅತ್ಯುತ್ತಮ ನಟ ಹಾಗೂ ಬಹು ಬೇಡಿಕೆಯ ನಟರೂ ಆಗಿರುವ ಮಂಡ್ಯ ರಮೇಶ್ ಅವರು ಸರೋಜಾ ಹೆಗಡೆ ಎನ್ನುವ ಜೊತೆ ವಿವಾಹವಾಗಿದ್ದಾರೆ. ಮಂಡ್ಯ ರಮೇಸ್ ರಂಗಭೂಮಿ ಕಲಾವಿದ. ಇದೀಗ ಧಾರಾವಾಹಿಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ನಿರಂಜನ್ ದೇಶಪಾಂಡೆ. ಮೊದಲು ರೇಡಿಯೋ ಜಾಕಿಯಾಗಿ ಗುರುತಿಸಿಕೊಂಡು ಇದೀಗ ಉತ್ತಮ ನಿರೂಪಕರಿಸಿಸಿರುವ ನಿರಂಜನ್ ದೇಶಪಾಂಡೆ ಯಶಸ್ವಿನಿ ಎಂಬುವರ ಜೊತೆ ಮದುವೆಯಾಗಿದ್ದಾರೆ.

ನಿರಂಜನ್ ಗಿಚ್ಚಿ ಗಿಲಿಗಿಲಿ ಶೋನಲ್ಲಿ ನಿರೂಪಕರಾಗಿದ್ದಾರೆ. ಇವರ ಪತ್ನಿ ಯಶಸ್ವಿನಿ ಈ ಶೋ ನಲ್ಲಿ ಸ್ಪರ್ಧಿಯಾಗಿದ್ದಾರೆ. ಹರೀಶ್ ರಾಜ್. ಕನ್ನಡದ ಬಹಳ ಫೇಮಸ್ ನಟ ಆಗಿರುವ ಹರೀಶ್ ರಾಜ್ ಶೃತಿ ಎಂಬವರ ಜೊತೆ ಮದುವೆಯಾಗಿದ್ದಾರೆ ಹರೀಶ್ ರಾಜ್ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದರು. ಇವಿಷ್ಟು ನಿಮ್ಮ ಮೆಚ್ಚಿನ ನಟರ ಹಾಗೂ ಪತ್ನಿಯರ ಹೆಸರುಗಳು. ಇವರಲ್ಲಿ ನಿಮ್ಮ ನೆಚ್ಚಿನ ನಟರು ಯಾರು ಅನ್ನೋದನ್ನ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *