ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ಅಚ್ಚುಮೆಚ್ಚಿನ ಧಾರಾವಾಹಿ ಕನ್ನಡತಿ ಅದರಲ್ಲೂ ಕನ್ನಡತಿಯಲ್ಲಿ ಮುಖ್ಯ ಆಕರ್ಷಣೆ ಅಂದರೆ ಅಮ್ಮಮ್ಮನ ಪಾತ್ರ. ಈ ಹಿಂದೆಯೂ ಅಮ್ಮಮ್ಮನ ಪಾತ್ರ ಮುಗಿಸುವುದಾಗಿ ನಿರ್ದೇಶಕರು ಕಥೆ ಹೆಣದಿದ್ರು. ಆದರೆ ಅದೇ ಮತ್ತೆ ಅಮ್ಮಮ್ಮ ಹುಷಾರಾಗಿ ಬಂದಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು ಆದರೆ ಇದೀಗ ಕೊನೆಗೂ ಅಮ್ಮನ ಪಾತ್ರಕ್ಕೆ ತೆರೆ ಎಳೆದಿದ್ದಾರೆ.
ಇದರಿಂದ ಅಭಿಮಾನಿಗಳಿಗೆ ಬಹಳ ನೋವಾಗಿದೆ. ಹೌದು, ಕನ್ನಡತಿಯ ಧಾರಾವಾಹಿಯ ಅಮ್ಮಮ್ಮ ಈ ಪಾತ್ರವನ್ನು ಜನ ಬಹುವಾಗಿ ಮೆಚ್ಚಿಕೊಂಡಿದ್ದರು ಹಳೆಯ ಕಾಲದ ಆಚಾರ ನೀತಿ ಪದ್ಧತಿ, ಅವರ ಅನುಭವದ ಮಾತುಗಳು ಇವೆಲ್ಲವೂ ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು. ರತ್ನಮಾಲ ಆಗಿ ಬಹಳ ದೊಡ್ಡ ಮನೆಯ ಜವಾಬ್ದಾರಿಯನ್ನ ನಿಭಾಯಿಸಿದವರು ಅಮ್ಮಮ್ಮ.
ರತ್ನಮಾಲ ಕೆಫೆ ಹಾಗೂ ರತ್ನಮಾಲ ಶಾಲಾ-ಕಾಲೇಜು ಸಂಸ್ಥೆಯನ್ನು ಒಬ್ಬರೇ ಕಟ್ಟಿ ಬೆಳೆಸಿ ಇದೀಗ ಅದೆಲ್ಲವನ್ನು ಸೊಸೆಯಾದ ಭೂಮಿಯ ಹೆಸರಿಗೆ ಬರೆದು ಮ-ರಣ ಹೊಂದಿದ್ದಾರೆ. ಇಷ್ಟು ವರ್ಷ ಬಹಳ ಕಷ್ಟದಿಂದ ಕಾಪಾಡಿಕೊಂಡು ಕಟ್ಟಿ ಬೆಳೆಸಿದ ಸಾಮ್ರಾಜ್ಯ ಈಗ ಯಾರ ಕೈ ಸೇರುತ್ತೆ ಎನ್ನುವುದು ಎಲ್ಲರ ಕುತೂಹಲ. ಹೌದು ರತ್ನಮಾಲ ಮಾಲ ಕೆಫೆ ಹಾಗೂ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಮನೆಯ ತಂಗಿಯ ಮಕ್ಕಳಿಗೂ ಕೂಡ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸೊಸೆಗೆ ಎಂಡಿ ಪಟ್ಟವನ್ನು ಕೊಟ್ಟ ಬಳಿಕ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಬುದ್ಧಿಗೇಡಿ ಸಾನಿಯಾ ಸದಾ ಕುತಂತ್ರದಿಂದಲೇ ಎಂಡಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಳು ಆದರೆ ಇದು ರತ್ನಮಾಲ ಅವರಿಗೆ ತಿಳಿದು ಕೊನೆಗೆ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆಯಲು ನಿರ್ಧರಿಸಿದ್ದರು.
ಈ ವಿಷಯವನ್ನು ಸಾನಿಯಾ ಗೆ ತಲುಪಿಸುವ ಮೊದಲೇ ರತ್ನಮಾಲ ಅವರ ಮಗ ಹರ್ಷಕುಮಾರ್ ಸಾನಿಯಾಳನ್ನು ಎಂಡಿ ಪಟ್ಟದಿಂದ ಇಳಿಸಿದ್ದಾರೆ. ಈತ ಭುವಿ ಜೂನಿಯರ್ ಅಮ್ಮಮ್ಮ ಆಗಿ ಈಗ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ತನ್ನ ಹೆಸರಿಗೆ ರತ್ನಮಾಲ ಮಾಡಿಟ್ಟಿರುವ ಆಸ್ತಿಯ ಬಗ್ಗೆ, ಭೂಮಿಗೆ ಗೊತ್ತಿಲ್ಲ ಆದರೆ ಈ ಟಾಪ್ ಸೀಕ್ರೆಟ್ ವರೂಧಿನಿ ಕೈ ಸೇರಿದೆ.
ಹಾಗಾಗಿ ಭೂಮಿ ಮತ್ತು ಹರ್ಷಗಳನ್ನು ಬೇರೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳೋದಕ್ಕೆ ಹೊರಟಿದ್ದಾಳೆ ವರೂಧಿನಿ. ಇನ್ನು ರತ್ನಮಾಲ ಅಮ್ಮ ಆಗಿ ಜನರ ಮನ ಗೆದ್ದಿದ್ರು ಇದೀಗ ನಿರ್ದೇಶಕರು ಅವರ ಪಾತ್ರವನ್ನು ಮುಗಿಸಿದ್ದಾರೆ ಇದರಿಂದ ಬಹಳ ನೊಂದುಕೊಂಡ ಅವರ ಅಭಿಮಾನಿಗಳು ನಿರ್ದೇಶಕರಿಗೆ ಮೆಸೇಜ್ ಮಾಡಿ ರಥಮಾಲಾ ಪಾತ್ರ ಉಳಿಸಬೇಕಿತ್ತು ಎಂದು ಹೇಳುತ್ತಿದ್ದಾರೆ.
ಇನ್ನು ರತ್ನಮಾಲ ಧಾರವಾಹಿ ಇರುವುದಿಲ್ಲ ಎಂದು ಗೊತ್ತಾಗಿ ಧಾರಾವಾಹಿ ತಂಡದ ಎಲ್ಲಾ ಕಲಾವಿದರು ಕಣ್ಣೀರಿಟ್ಟಿದ್ದಾರೆ. ಅಮ್ಮಮ್ಮ ನನ್ನ ತಬ್ಬಿಕೊಂಡು ಹರ್ಷ ಸ್ವಂತ ಮಗನ ಹಾಗೆ ಅತ್ತಿದ್ದು ನಿಜಕ್ಕೂ ಬೇಸರ ತರಿಸುವಂತದ್ದು. ಈ ವಿಡಿಯೋ ಸದ್ಯಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ 2 ರತ್ನಮಾಲ ಅವರ ಪಾತ್ರವನ್ನು ನಿಭಾಯಿಸಿದ ಚಿತ್ರ ಅವರಿಗೆ ಧಾರಾವಾಹಿ ತಂಡ ಬಹಳ ಪ್ರೀತಿಯಿಂದ ಸಿಹಿ ಹಂಚಿ ಬೀಳ್ಕೊಡುಗೆ ಮಾಡಿದ್ದಾರೆ. ಒಟ್ಟಿನಲ್ಲಿ ಇದೊಂದು ಭಾವುಕ ಕ್ಷಣ ಅಂದ್ರೆ ತಪ್ಪಾಗಲ್ಲ ಧಾರವಾಹಿಯಲ್ಲಿ ಒಂದು ಪಾತ್ರ ಮುಗಿದರೆ ನಿಜ ಜೀವನದಲ್ಲಿ ಆ ಪಾತ್ರ ಮುಗಿದಂತೆ ದುಃಖ ಪಟ್ಟಿದ್ದು ಆಪಾತ್ರಕ್ಕಿದ್ದ ಮಹತ್ವವನ್ನು ತೋರಿಸುತ್ತದೆ.