ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ನಟಿಯರು ಇಂದು ಹೆಚ್ಚು ಹೆಚ್ಚು ಫೇಮಸ್ ಆಗುತ್ತಾರೆ. ಸಾಮಾನ್ಯರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಸೆಲಿಬ್ರೆಟಿಗಳಾಗುತ್ತಾರೆ. ಹೀಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ನಟಿ ಅಶು ರೆಡ್ಡಿ. ಅಶು ರೆಡ್ಡಿ ಅಂದ್ರೆ ಮುಖ್ಯವಾಗಿ ನೆನಪಿಗೆ ಬರುವುದೇ ತೆಲುಗು ಭಾಷೆಯ ಬಿಗ್ ಬಾಸ್. ಹೌದು ತೆಲುಗು ಬಿಗ್ ಬಾಸ್ ಸೀಸನ್ 3ರಲ್ಲಿ ಅಶು ರೆಡ್ಡಿ ಭಾಗವಹಿಸಿದ್ದರು.
ಅಷ್ಟೇ ಅಲ್ಲ ಸ್ನೇಹಿತರೆ, ಅಶು ರೆಡ್ಡಿ ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗಿ ಬಂದಿರುವ ನಟಿ. ಅಶು ರೆಡ್ಡಿಯವರು ತೆಲುಗು ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ. ಅಶು ರೆಡ್ಡಿ ನೋಡುವುದಕ್ಕೆ ಸೌತ್ ಫೇಮಸ್ ನಟಿ ಸಮಂತಾ ತರವೇ ಇರುವುದರಿಂದ ಅವರನ್ನು ಜೂನಿಯರ್ ಸಮಂತಾ ಎಂದೇ ಕರೆಯಲಾಗುತ್ತದೆ. ಇನ್ನು ಅಶು ರೆಡ್ಡಿ ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ 1.7 ಮಿಲಿಯನ್ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.
ಅಶು ರೆಡ್ಡಿ ವಿಡಿಯೋ ಕ್ರಿಯೇಟರ್ ಕೂಡ ಆಗಿದ್ದು ಸಾಕಷ್ಟು ವಿಡಿಯೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ ವಿವಿಧ ಭಂಗಿಯ ಫೋಟೋಗಳನ್ನು ತೆಗೆಸಿ ಅವುಗಳನ್ನ ಪೋಸ್ಟ್ ಮಾಡುತ್ತಾರೆ. ಅಶು ರೆಡ್ಡಿ ಸಾಕಷ್ಟು ಹಾಟ್ ಫೋಟೋಶೂಟ್ ಕೂಡ ಮಾಡಿಸುತ್ತಾರೆ.
ಈಗಾಗಲೇ ಅವರ ಫೋಟೋಗಳಿಗೆ ಹಾಗೂ ನೇರಾ ನೇರ ಮಾತುಗಳಿಗೆ ಯಾವಾಗಲೂ ಟ್ರೋಲ್ ಆಗುತ್ತಲೇ ಇರುತ್ತಾರೆ. ನಟಿ ಅಶು ರೆಡ್ಡಿ ಇತ್ತೀಚೆಗೆ ಬಿಳಿ ಬಣ್ಣದ ಸಿಂಗಲ್ ಡ್ರೆಸ್ ತೊಟ್ಟು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿ ಅಶು ಅಭಿಮಾನಿಗಳು ಹೌಹಾರಿದ್ದಾರೆ. ಇನ್ನು ಅಶು ಇತ್ತೀಚಿಗೆ ಪ್ಯಾರೀಸ್ ಗೂ ಕೂಡ ಹೋಗಿ ಅಲ್ಲಿಯೂ ಸಕ್ಕತ್ತಾಗಿ ಫೋಸ್ ಕೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ.
ಇನ್ನು ಈ ಹಿಂದೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಬೆನ್ನಿನ ಭಾಗವನ್ನು ತೋರಿಸುವ ಫೋಟೋವನ್ನು ಪೋಸ್ಟ್ ಮಾಡಿರುವ ಅಶು ರೆಡ್ಡಿ ಹಲವರಿಗೆ ನನ್ನ ಬೆನ್ನಿನ ಭಾಗ ತುಂಬಾ ಇಷ್ಟ ಎಂದು ಒಪನ್ ಸ್ಟೇಟ್ಮೆಂಟ್ ಕೂಡ ನೀಡಿದ್ದರು. ಇನ್ನು ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿ ಅಶು ರೆಡ್ಡಿ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು.
ಈ ಬಗ್ಗೆ ಅವರೇ ಸಾಕಷ್ಟು ಭಾರಿ ಹೇಳಿಕೊಂಡಿದ್ದಾರೆ. ಅಲ್ಲದೇ ಪವನ್ ಅವರನ್ನ ಭೇಟಿಯಾಗಿದ್ದಾರೆ. ತಮ್ಮ ಅಭಿಮಾನವನ್ನು ಅಶು ರೆಡ್ಡಿ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ? ತಮ್ಮ ಎದೆಯ ಹಿಂಭಾಗದಲ್ಲಿ ಬೆನ್ನಿನ ಬಳಿ ಪವನ್ ಕಲ್ಯಾಣ್ ಎನ್ನುವ ಹೆಸರನ್ನು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಕೂಡ ಅಶು ರೆಡ್ಡಿ ಟ್ರೊಲ್ ಆಗಿದ್ದರು.
ಸದ್ಯ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಾಮಾಜಿಕ ಜಾಲತಾಣದಲ್ಲಿಯೇ ಹೆಚ್ಚು ಆಕ್ಟಿವ್ ಆಗಿರುವ ಮೋಹನಾಂಗಿ, ಮಾದಕ ನಟಿ ಅಶು ರೆಡ್ಡಿ ಅವರ ಹಾಟ್ ಫೋಟೋಗಳನ್ನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು. ಅಶು ರೆಡ್ಡಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.