ನೀವೆಲ್ಲರೂ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ನೆಚ್ಚಿನ ಸ್ಪರ್ಧೆ ಯಾರು ಅಂತ ಅವರಿಗೆ ವೋಟ್ ಕೂಡ ಮಾಡಿರುತ್ತೀರಾ ಅಲ್ವಾ? ಹೌದು ಈ ವಾರಾಂತ್ಯದಲ್ಲಿ ನಾಮಿನೇಟ್ ಆಗಿರುವ ಹನ್ನೆರಡು ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಪಯಣವನ್ನು ಮುಗಿಸಿ ಮನೆಗೆ ತೆರಳಬಹುದು ಹಾಗಾಗಿ ಈ ಬಿಸಿ ಎಲ್ಲಾ ಬಿಗ್ ಬಾಸ್ ಸ್ಪರ್ಧಿಗಳಿಗೂ ತಟ್ಟಿದೆ. ಆದರೆ ಈ ಬಾರಿ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಟ್ಯಾಕ್ಸ್ ಗಳನ್ನ ಬಹಳ ಗಂಭೀರವಾಗಿ ತೆಗೆದುಕೊಂಡು ಆಟವಾಡಿದ್ದಾರೆ.
ಹೌದು, ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಹೊಸ ಸ್ಪರ್ಧಿಗಳಿರಬಹುದು ಅಥವಾ ಹಳೆಯ ಸ್ಪರ್ಧೆಗಳಿರಬಹುದು ಎಲ್ಲರೂ ಟಾಸ್ಕ್ ಗಳನ್ನು ಬಹಳ ಮುತುವರ್ಜಿಯಿಂದ ಆಟ ಮಾಡಿದ್ದು ಮೊದಲ ವಾರವೇ ಗಮನಕ್ಕೆ ಬಂದಿದೆ. ಆದರೂ ಒಂದೆರಡು ಸ್ಪರ್ಧೆಗಳು ಎಲ್ಲೋ ಕಳೆದು ಹೋದಂತೆ ಇದ್ದದ್ದಂತೂ ನಿಜ ಉದಾಹರಣೆಗೆ ಮಯೂರಿ, ಅಮೂಲ್ಯ ಗೌಡ, ಐಶ್ವರ್ಯ ಪಿಸೆ ಮೊದಲ ದೇವರು ಟಾಸ್ಕ್ ಗಳನ್ನು ಆಡಿದರು ಕೂಡ ಮನೆಯಲ್ಲಿ ಅಷ್ಟಾಗಿ ಜನರೊಂದಿಗೆ ಬೆರೆಯುತ್ತಿಲ್ಲ.
ಅದರಲ್ಲೂ ಅಮೂಲ್ಯ ಗೌಡ ಜನರಿಂದ ಬಹಳ ದೂರವೇ ಉಳಿದಿದ್ದಾರೆ ಅಂತ ಹೇಳಬಹುದು. ಕಮಲಿ ಧಾರಾವಾಹಿಯಲ್ಲಿ ಅತ್ಯಂತ ಸಾಫ್ಟ್ ನೇಚರ್ ಹೊಂದಿರುವ ಕಮಲಿ ಆಗಿ ಇಷ್ಟು ವರ್ಷ ಪಾತ್ರ ನಿಭಾಯಿಸಿದ ಅಮೂಲ್ಯ ಗೌಡ ಇದೀಗ ಬಿಗ್ ಬಾಸ್ ಮನೆಯನ್ನು ಸೇರಿದ್ದಾರೆ. ಅಮೂಲ್ಯ ಗೌಡ ಹಾಗೂ ಹಳೆಯ ಸ್ಪರ್ಧೆಯಾದ ದೀಪಿಕಾ ದಾಸ್ ಇಬ್ಬರು ಜೋಡಿಯಾಗಿ ಈ ವಾರ ಪೂರ್ತಿ ಕಳೆಯುತ್ತಾರೆ.
ಹೌದು ಇವರಿಬ್ಬರೂ ಜೋಡಿಯಾಗಿ ಅರ್ಧಚಂದ್ರದ ಬಾಕ್ಸ್ ಮೇಲೆ ನಿಲುವ ಟಾಸ್ಕ್ ಮಾಡಿದ್ರು. ಮೂರುವರೆ ಗಂಟೆ ಅದರ ಮೇಲೆ ನಿಂತು ಆ ಟಾಸ್ಕ್ ಗೆಲ್ಲುವುದರ ಮೂಲಕ ಅಮೂಲ್ಯ ಗೌಡ ತಮ್ಮ ಸ್ಟ್ರೆಂತ್ ಕೂಡ ತೋರಿಸಿಕೊಟ್ಟಿದ್ದಾರೆ. ಅಮೂಲ್ಯ ಗೌಡ ಅವರ ಟಾಸ್ಕ್ ಆಡುವ ಈ ಸ್ಟ್ರೆಂತ್ ನೋಡಿ ಇತರ ಸ್ಪರ್ಧೆಗಳು ಹೌಹಾರಿದ್ದಾರೆ. ಇನ್ನು ಈ ನಡುವೆಯೂ ಅಮೂಲ್ಯ ಗೌಡ ಈ ಬಾರಿ ಮನೆಯಲ್ಲಿ ಕಳೆದು ಹೋದವರಂತೆ ಇದ್ದದ್ದು ನಿಜ.
ಇದಕ್ಕೆ ಮಯೂರಿ ಅವರು ಅಮೂಲ್ಯವಾದ ಪ್ರಶ್ನೆ ಮಾಡಿದ್ದಾರೆ. ನಿಮ್ಮ ನೇಚರ್ ಹೀಗೆನಾ ಅಂತ ಅಮೂಲ್ಯ ಗೌಡ ಅವರನ್ನು ಕೇಳಿದ್ದಾರೆ. ಅಮೂಲ್ಯ ಗೌಡ ಮಯೂರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು,ವ್ ’ನನ್ನ ನೇಚರ್ ಸ್ವಲ್ಪ ಹಾಗೆ. ನನ್ನನ್ನು ಚೆನ್ನಾಗಿ ಮಾತನಾಡಿಸಿದವರಿಗೆ ಜೊತೆ ನಾನು ತುಂಬಾ ಚೆನ್ನಾಗಿ ಮಾತನಾಡುತ್ತೇನೆ ಆದರೆ ಸ್ವಲ್ಪ ಸಮಯ ಬೇಕು ಅಷ್ಟೇ. ಇದು ನನ್ನ ದುರಹಂಕಾರವಲ್ಲ ನಾನು ಇರೋದೇ ಹೀಗೆ’ ಅಂತ ಹೇಳಿದ್ದಾರೆ.
ಇದರ ಜೊತೆಗೆ ’ಈ ಮನೆಯಲ್ಲಿ ಸ್ವಲ್ಪವೂ ಅಡ್ಜಸ್ಟ್ ಆಗ್ಲಿಲ್ಲ ಸುಮ್ನೆ ದೋಣಿ ತಳ್ತಾ ಇದ್ದೇನೆ ಅಷ್ಟೇ” ಅಂತಲೂ ಹೇಳಿದ್ದಾರೆ. ಹೇಗೆ ಮತ್ತೆ ಅಂತ ಮಯೂರಿ ಮತ್ತೆ ಕೇಳುತ್ತಾರೆ. ಹೇಗೋ ಗೊತ್ತಿಲ್ಲ ಅಂತೂ ಕಷ್ಟವಾಗುತ್ತಿದೆ. ಆದ್ರೂ ಮುಂದುವರಿತಾ ಇದ್ದೇನೆ ಎಂದು ಅಮೂಲ್ಯಾ ಗೌಡ ಹೇಳಿದ್ದಾರೆ. ಹೌದು ಮೊದಲ ವಾರ ಟಾಸ್ಕ್ ಮಾಡಿದರು ಕೂಡ ಇತರ ಸ್ಪರ್ಧಿಗಳ ಜೊತೆ ಬೆರೆತು ಅವರೊಂದಿಗೆ ಇರಲು ಅಮೂಲ್ಯ ಅವರಿಗೆ ಸಾಧ್ಯವಾಗುತ್ತಿಲ್ಲ.
ಅಮುಲ್ಯಾ ಗೌಡ ಸ್ವಬಾವತಃ ಹೆಚ್ಚು ಮಾತನಾಡುವುದಿಲ್ಲವಂತೆ. ಹಾಗಾಗಿ ಅವರು ಈ ವಾರ ಮನೆಯಲ್ಲಿ ಉಳಿದುಕೊಂಡರೆ ಮುಂದಿನ ದಿನಗಳಲ್ಲಿ ಯಾವ ರೀತಿ ಇತರ ಸ್ಪರ್ಧಿಗಳ ಜೊತೆಗೆ ಇರುತ್ತಾರೆ ಅನ್ನೋದನ್ನ ನೋಡಬೇಕು ಅಷ್ಟೇ. ಇನ್ನು ಒರಿಜಿನಲ್ ಬ್ಯುಟಿಯಲ್ಲೀ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಬಿಗ್ ಬಾಸ್ ಮನೆ ಸಿಂಡ್ರೆಲಾ ಎಂದು ಕರೆಯುತ್ತಿದ್ದಾರೆ ಅಭಿಮಾನಿಗಳು. ಬಿಗ್ ಬಾಸ್ ಮನೆಯಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು? ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.