ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಪ್ರತಿಭೆಗಳನ್ನು ನಾವು ನೋಡಬಹುದು. ಹೌದು, ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ಅನೇಕ ಕಲಾವಿದರನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು. ಎರಡು ವರ್ಷಗಳ ಹಿಂದೆ ಟಿಕ್ ಟಾಕ್ ಅನ್ನುವ ಆಪ್ ಇತ್ತು. ಅದರಲ್ಲಿ ಅನೇಕ ಮಂದಿ ವಿಡಿಯೋ ಕ್ರಿಯೇಟ್ ಮಾಡಿ ಹಾಕುತ್ತಿದ್ದರು.
ಅದರಿಂದಾಗಿ ಎಷ್ಟೊ ಮಂದಿ ಫೇಮಸ್ ಆಗಿದ್ದರು. ಅದಾದ ನಂತರ ಅದೇ ರೀತಿಯ ಅನೇಕ ಆಪ್ ಗಳು ಬಂದರೂ ಇನ್ಸ್ಟಾಗ್ರಾಂ ರೀಲ್ಸ್ ಅನ್ನು ಅತೀ ಹೆಚ್ಚು ಮಂದಿ ಬಳಸುತ್ತಾರೆ. ಇನ್ಸ್ಟಾಗ್ರಾಂ ಖಾತೆ ಈಗ ಪ್ರತಿಯೊಬ್ಬರು ಕೂಡ ಬಳಸುತ್ತಾರೆ. ಹಾಗಾಗಿ ರೀಲ್ಸ್ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಈ ರೀಲ್ಸ್ ನಲ್ಲಿ ನಾವು ಅನೇಕ ಸ್ಟಾರ್ ಗಳನ್ನು ನೋಡುತ್ತೇವೆ.ಅದರಲ್ಲಿ ಮಧು ಗೌಡ ಬಗ್ಗೆ ಗೊತ್ತಿರಲೇ ಬೇಕು.
ಮುದ್ದಾದ ಮುಖದ ಬೆಂಗಳೂರಿನ ಮಧು ಗೌಡ ಅವರ ರೀಲ್ಸ್ ಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಮಧು ಗೌಡ ಅವರು 20 ವರ್ಷದ ಸುಂದರಿ. ಇವರನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಎಂದೇ ಕರೆಯಲಾಗುತ್ತದೆ. ಇವರನ್ನು ನೋಡಿ ಸಾವಿರಾರು ಹುಡುಗರು ಫಿದಾ ಆಗಿದ್ದಾರೆ. ಅಂತಹ ಚೆಲುವು ಅವರದ್ದು. ಇವರು ರೀಲ್ಸ್ ನಲ್ಲಿ ಸಿನಿಮಾ ಡೈಲಾಗ್ ಹೇಳುವುದು, ಡ್ಯಾನ್ಸ್ ಮಾಡುವುದು, ಹಾಡು ಹಾಡುವ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಇನ್ನು ಇವರ ಜೊತೆ ನಿಶಾ ರವೀಂದ್ರ ಅನ್ನುವ ರೀಲ್ಸ್ ಸ್ಟಾರ್ ಕೂಡ ಇದ್ದಾರೆ. ಇಬ್ಬರೂ ಬೇರೆ ಬೇರೆ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದರೂ, ಹೆಚ್ಚಾಗಿ ಜೊತೆಯಾಗಿ ವಿಡಿಯೋ ಕ್ರಿಯೇಟ್ ಮಾಡುತ್ತಾರೆ. ಮಧು ಗೌಡ ಹಾಗೂ ನಿಶಾ ರವೀಂದ್ರ ಕ್ಲೋಸ್ ಫ್ರೆಂಡ್ಸ್. ಹೀಗಾಗಿ ಹೆಚ್ಚಾಗಿ ಜೊತೆಯಾಗಿ ಡ್ಯಾನ್ಸ್ ವಿಡಿಯೋ, ಕಾಮೆಡಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಇಬ್ಬರೂ ಕೂಡ ನಟನೆ, ನೃತ್ಯ, ಪ್ರಯಾಣ, ಬ್ಲಾಗಿಂಗ್, ಮಾಡೆಲಿಂಗ್, ಇತ್ಯಾದಿಗಳನ್ನು ಇಷ್ಟಪಡುತ್ತಾರೆ.
ಅದರಲ್ಲೂ ಮಾಡೆಲಿಂಗ್ ವಿಷಯದಲ್ಲಿ ಟಾಪ್ ನಲ್ಲಿ ಇದ್ದಾರೆ. . ಅವರು ಅನೇಕ ಪ್ರತಿಷ್ಠಿತ ಮತ್ತು ಹೆಸರಾಂತ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿಯೂ ಕೆಲಸ ಮಾಡುತ್ತಾರೆ. ಇದೆಲ್ಲಾ ಇವರ ರೀಲ್ಸ್ ವೈರಲ್ ಆಗಿರುವುದರ ಪ್ರಭಾವ. ಸೀರೆ, ಒಡವೆ, ಮೇಕಪ್, ಕಾಸ್ಮೆಟಿಕ್ ಮುಂತಾದ ಜಾಹೀರಾತಿನಲ್ಲಿ , ಅದೇ ರೀತಿ ಡ್ರೆಸ್ ಗಳ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಮಧು ಅವರು 5 ಲಕ್ಷದ 2 ಸಾವಿರ ಫಾಲೋವರ್ಸ್ ಹೊಂದಿದ್ದರೆ, ನಿಶಾ ರವೀಂದ್ರ ಅವರು 9 ಲಕ್ಷದ 53 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
ಇಬ್ಬರೂ ಬೇರೆ ಬೇರೆ ಜಾಗಗಳಿಗೆ ಆಗಾಗ್ಗೆ ಟೂರ್ ಹೋಗುತ್ತಾರೆ. ಇದೀಗ ಅಬ್ಬಿ ವಾಲೆ ರೆಸಾರ್ಟ್ ಗೆ ನಿಶಾ ರವೀಂದ್ರ ಹಾಗೂ ಮಧು ಗೌಡ ಹೋಗಿದ್ದು ಅಲ್ಲಿ ಕ್ರಿಕೆಟ್ ಆಡುವಾಗ ಮಸ್ತ್ ಆದ ಕಾಮೆಡಿ ರೀಲ್ಸ್ ಮಾಡಿದ್ದಾರೆ. ಇದಕ್ಕೆ 2 ಲಕ್ಷದ 13 ಸಾವಿರ ಲೈಕ್ಸ್ ಬಂದಿದೆ. 2 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ರೀಲ್ಸ್ ನೋಡಿದರೆ ಖಂಡಿತಾ ಬೋರ್ ಆಗಲ್ಲ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram