ಜನರಿಗೆ ಅತ್ಯಂತ ಮನೋರಂಜನೆಯನ್ನು ನೀಡುವ ಬಿಗ್ ಬಾಸ್ ನ 9 ನೇ ಸೀಸನ್ ಆರಂಭವಾಗಿದೆ. ಈ ಬಾರಿ ಸ್ಪರ್ಧಿಗಳ ಆಯ್ಕೆ ಬಹಳ ವಿಶೇಷವಾಗಿದೆ. ಯಾರೂ ಊಹಿಸಲಾಗದ ರೀತಿಯಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ಹೊಸ ಹಾಗೂ ಹಳೆಯ ಸ್ಪರ್ಧಿಗಳ ಸಮಾಗಮ ಬಿಗ್ ಬಾಸ್ ಮನೆಯ ಕಳೆಕಟ್ಟಿದೆ. ಕಳೆದ ತಿಂಗಳು ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಿತ್ತು. ಅದನ್ನು ಹಲವರಿಗೆ ನೋಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದೀಗ ಬಿಗ್ ಬಾಸ್ ಸೀಸನ್ 9 ಆರಂಭವಾಗಿದ್ದು ಹೆಚ್ಚಿನ ವೀಕ್ಷಕರನ್ನು ಪಡೆದುಕೊಂಡಿದೆ.
ಅಂದಹಾಗೆ ಈ ಬಾರಿ ಬಿಗ್ ಬಾಸ್ ನಲ್ಲಿ ಲೇಡಿ ಪವರ್ ಹೆಚ್ಚಾಗಿದೆ. ನೋಡೋದಕ್ಕೆ ಮುದ್ದಾಗಿರುವ ಹುಡುಗಿಯರು ಅಷ್ಟೇ ಅಂತ ಅಂದುಕೊಳ್ಳಬೇಡಿ. ಆಟ ಆಡೋದರಲ್ಲಿಯೂ ಅಷ್ಟೇ ಸ್ಟ್ರಾಂಗ್ ಈ ಹುಡುಗಿಯರು. ಹೌದು, ಹಳೆಯ ಸ್ಪರ್ಧಿಗಳಾದ ಅನುಪಮಾ ಗೌಡ, ದಿವ್ಯ ಉರುಡುಗ ಹಾಗೂ ದೀಪಿಕಾ ದಾಸ್ ಹೆಚ್ಚು ಸ್ಟ್ರಾಂಗ್ ಆಗಿರುವ ಕಂಟೆಸ್ಟೆಂಟ್ ಗಳು.
ಒಮ್ಮೆ ಬಿಗ್ ಬಾಸ್ ಮನೆಯಲ್ಲಿ ಆಟವಾಡಿರುವ ಇವರು ಇದೀಗ ಇನ್ನಷ್ಟು ಹೆಚ್ಚು ಆತ್ಮವಿಶ್ವಾಸದಿಂದ ಆಟ ಶುರುಮಾಡಿದ್ದಾರೆ. ಬಿಗ್ ಬಾಸ್ ಆರಂಭವಾದ ಮೊದಲ ದಿನವೇ ಕ್ಯಾಪ್ಟೆನ್ಸಿ ಟಾಸ್ಕ್ ಗಳು ಆರಂಭವಾಗಿವೆ. ಅದರಲ್ಲೂ ಹಳೆಯ ಹಾಗೂ ಹೊಸ ಸ್ಪರ್ಧಿಗಳ ಜೋಡಿ ಮಾಡಲಾಗಿದೆ. ಇಬ್ಬರು ಜೋಡಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಊಹಿಸಬೇಕು. ಇದು ಪಕ್ಕಾ ಬ್ರೈನ್ ಗೇಮ್.
ಈಗಾಗಲೇ ಪ್ರಶಾಂತ್ ಊಹಿಸಿದ ಪ್ರಕಾರವೇ ಆಗಿದ್ದು ಎರಡು ಪಾಯಿಂಟ್ ಗಳನ್ನು ಕೂಡ ಗಳಿಸಿದ್ದಾರೆ. ಇತ್ತ ನೇಹಾ ಗೌಡ ಹಾಗೂ ಅನುಪಮಾ ಗೌಡ ಮತ್ತು ದೀಪಿಕಾ ದಾಸ್ ಹಾಗೂ ಅಮೂಲ್ಯಾ ಗೌಡ ಈ ಎರಡು ಜೋಡಿಗಳು ಅರ್ಧ ವೃತ್ತದ ಮೇಲೆ ನಿಲ್ಲುವ ಟಾಸ್ಕ್ ನ್ನು ಭರ್ಜರಿಯಾಗಿ ಮುಗಿಸಿದ್ದಾರೆ. ಕನಿಷ್ಠ ನಾಲ್ಕು ಗಂಟೆಗಳ ಕಾಲ ನಿಂತಿದ್ದ ಈ ಜೋಡಿಯಲ್ಲಿ ಕೊನೆಗೆ ಗೆದ್ದಿದ್ದು ದೀಪಿಕಾ ದಾಸ್ ಹಾಗೂ ಅಮೂಲ್ಯಾ ಜೋಡಿ.
ಮೊದಲ ದಿನವೇ ಮಹಿಳಾಮಣಿಯರ ಆಟನೋಡಿ ಬಿಗ್ ಬಾಸ್ ಮನೆಯ ಗಂಡಸರು ಬೆಕ್ಕಸಬೆರಗಾಗಿದ್ದಾರೆ. ಈ ನಡುವೆ ಮಧ್ಯ ರಾತ್ರಿ ಆದರೂ ಅರುಣ್ ಸಾಗರ್ ಅವರ ಮನೋರಂಜನೆ ಹಾಡುಗಳು, ಇತರ ಸ್ಪರ್ಧಿಗಳ ಕುಣಿತ ಟಾಸ್ಕ್ ಮಾಡುತ್ತಿದ್ದ ಸ್ಪರ್ಧಿಗಳಿಗೆ ಇನ್ನಷ್ಟು ಬಲ ತುಂಬಿತ್ತು. ಇದೀಗ ಹೆಚ್ಚು ಟಫ್ ಫೈಟ್ ಶುರುವಾಗಿರೋದು ಮಯೂರಿ ಹಾಗೂ ಸಾನಿಯಾ ಅಯ್ಯರ್ ಮತ್ತು ಅನುಪಮಾ ಗೌಡ ಮತ್ತು ನೇಹಾ ಗೌಡ ಅವರ ಜೋಡಿ ನಡುವೆ.
ಈಗಾಗಲೇ ಮಾತಿನಲ್ಲಿಯೂ ಟಾಸ್ಕ್ ಗಳಲ್ಲಿಯೂ ಪೈಪೋಟಿ ಆರಂಭವಾಗಿದೆ. ಮನೆಗೆ ಬಂದ ಮೊದಲ ದಿನ ಸ್ಪಲ್ಪ ಸೈಲೆಂಟ್ ಆಗಿದ್ದ ಮಯೂರಿ ಇದೀಗ ತಾನು ಆಟವಾಡಲು ಬಂದಿದ್ದು ಅಂತ ಮಾತಿನ ಏಟು ನೀಡಿದ್ದಾರೆ. ನೇಹಾ ಊಟದ ವಿಚಾರದಲ್ಲಿ ಹೇಳಿದ ಮಾತು ನಟಿ ಮಯೂರಿಗೆ ನೋವುಂಟುಮಾಡಿದೆ. ನಾನು ಇಲ್ಲಿ ಸಂಬಂಧ ಬೆಳೆಸಲು ಬಂದಿಲ್ಲ.
ಒಂದೂವರೆ ವರ್ಷದ ಮಗುವನ್ನು ಬಿಟ್ಟು ಬಂದಿದ್ದೇನೆ ಅಂದ್ರೆ ನಾನು ಆಟವಾಡೋದಕ್ಕೆ ಬಂದಿರೋದು ಅಂತ ನೇಹಾ ಹಾಗೂ ಅನುಪಮಾ ಗೌಡ ಅವರಿಗೆ ಚಮಕ್ ಕೊಟ್ಟಿದ್ದಾರೆ ಮಯೂರಿ. ಈಗಾಗಲೇ ಇವರುಗಳ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಆದರೆ ಎಲ್ಲರಿಗೂ ಬಾಯಲ್ಲಿ ಜಗಳವಾಡೋದಕ್ಕಿಂತ ಟಾಸ್ಕ್ ನಲ್ಲಿ ಗೆದ್ದು ತೋರಿಸಬೇಕು ಎನ್ನುವ ಛಲವೇ ಜೋರಾಗಿದೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಸುಟ್ಟ ವಾಸನೆಯಂತೂ ಈಗಲೇ ಬರುತ್ತಿದೆ.