ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಗೊಂಬೆಯಾಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ನೇಹಾ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಇಲ್ಲಿಯೂ ಕೂಡ ಜನರ ಮೆಚ್ಚಿನ ಸ್ಪರ್ಧಿ ಎನಿಸಿದ್ದಾ.ರೆ ಬಹಳ ಸೌಮ್ಯ ಸ್ವಭಾವದ ನೇಹ ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆಗೂ ಚೆನ್ನಾಗಿಯೇ ಬೆರೆತುಕೊಂಡಿದ್ದಾರೆ. ಜೊತೆಗೆ ತಮಗೆ ನೀಡುವ ಟಾಸ್ಕ್ ಗಳನ್ನು ಕೂಡ ಬಹಳ ಅಚ್ಚುಕಟ್ಟಾಗಿ ಪೂರೈಸುತ್ತಿದ್ದಾರೆ.
ಹೌದು, ನೇಹಾ ಗೌಡ ಕನ್ನಡಿಗರಿಗೆ ಚಿರಪರಿಚಿತ ಅವರು ಅಭಿನಯಿಸಿದ್ದು ಒಂದೇ ಧಾರಾವಾಹಿ. ಅದು ಲಕ್ಷ್ಮಿ ಬಾರಮ್ಮ. ಹಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಗೊಂಬೆ ಪಾತ್ರಧಾರಿಯಾಗಿ ನೇಹಾ ಗೌಡ ಅಭಿನಯಿಸುತ್ತಿದ್ದರು. ಈಗಲೂ ನೇಹಾ ಗೌಡ ಅಂದ್ರೆ ಬಹಳ ಜನರಿಗೆ ಗೊತ್ತಾಗಲ್ಲ ಅದೇ ಗೊಂಬೆ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. ನೇಹಾ ಗೌಡ ಲಕ್ಷ್ಮಿ ಬಾರಮ್ಮ ಧಾರವಾಹಿ ನಂತರ ಇತರ ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ರಾಜಾರಾಣಿ ಕಾರ್ಯಕ್ರಮದ ವಿನ್ನರ್ ಕೂಡ ಹೌದು. ಜೊತೆಗೆ ತೆಲಗು ಧಾರಾವಾಹಿಯಲ್ಲೂ ನಟಿಸಿದ್ದಾರೆ. ನೇಹಾ ಗೌಡ ಕಳೆದ ವರ್ಷ ತನ್ನ ಬಹುಕಾಲದ ಗೆಳೆಯ ಚಂದನ್ ಅವರ ಜೊತೆಗೆ ಮದುವೆಯಾಗಿದ್ದಾರೆ. ಮದುವೆಯಾದ ನಂತರ ವಿದೇಶ ಪ್ರವಾಸವನ್ನು ಕೂಡ ಮಾಡಿರುವ ನೇಹಾ ಗೌಡ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿದ್ದರು.
ಇದೀಗ ನೀವು ಅವರನ್ನ ಬಿಗ್ ಬಾಸ್ ಮನೆಯಲ್ಲಿ ಕಾಣಬಹುದು. ಇನ್ನು ಬಿಗ್ ಬಾಸ್ ಈಗಾಗಲೇ ಎಂಟು ಸೀಸನ್ ಮುಗಿಸಿದ್ದು ಹಲವು ಬಾರಿ ನೇಹಾ ಗೌಡ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನೇಹಾ ಗೌಡ ತಿಸ್ಕರಿಸಿದ್ರು. ಇದರ ಕಾರಣವನ್ನು ನೇಹಾ ಗೌಡ ಅವರ ಪತಿ ಚಂದನ್ ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ.
ಹೌದು ನೇಹಾ ಗೌಡ ಅವರಿಗೆ ಅನೇಕ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧೆಯಾಗಿ ಬರುವಂತೆ ಕರೆದಿದ್ದರಂತೆ. ಆದರೆ ನೇಹಾ ಗೌಡ ಮಾತ್ರ ಇದುವರೆಗೆ ಹೋಗಿರಲಿಲ್ಲ. ಇದಕ್ಕೆ ಕಾರಣ ಏನಂದ್ರೆ ಸಮಯದ ಅಭಾವ. ನೇಹಾ ಗೌಡ ಪ್ರತಿ ಬಾರಿ ಬಿಗ್ ಬಾಸ್ ಸೀಸನ್ ನಡೆಯುವಾಗ ಧಾರಾವಾಹಿಯಲ್ಲಿ ಅಥವಾ ಡ್ಯಾನ್ಸ್ ಶೋಗಳಲ್ಲಿ ಬ್ಯುಸಿಯಾಗಿರುತ್ತಿದ್ರು. ಹಾಗಾಗಿ ಅವರಿಗೆ ಬಿಗ್ ಬಾಸ್ ಮನೆಗೆ ತೆರಳಲು ಸಾಧ್ಯವಾಗಲಿಲ್ಲ.
ಆದರೆ ಇದೀಗ ಮದುವೆಯಾದ ಬಳಿಕ ಯಾವುದೇ ದಾರವಾಹಿಯಲ್ಲಿ ಅಥವಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ನೇಹಾ ಗೌಡ. ಹಾಗಾಗಿ ಈ ಬಾರಿ ಯಾವುದೇ ತಲುಪಿಸಿ ಇಲ್ಲದೆ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ ಅಂತ ನೇಹಾ ಗೌಡ ಅವರ ಪತಿ ಚಂದನ್ ಹೇಳಿದ್ದಾರೆ. ಸ್ನೇಹಿತರೆ ನಿಮಗೆ ಇಷ್ಟವಾದ ಬಿಗ್ ಬಾಸ್ ಸ್ಪರ್ಧೆ ನೇಹಾ ಗೌಡ ಆಗಿದ್ರೆ ತಪ್ಪದೇ ಗೊಂಬೆಗೊಂದು ವೋಟ್ ಮಾಡಿ.