ಏನೇ ಆದರೂ ಸರಿ ನಾನು ಆ ಒಬ್ಬ ವ್ಯಕ್ತಿಯನ್ನು ಮದುವೆ ಆಗೋದು ಫಿಕ್ಸ್ ಎಂದ ಸ್ಯಾಂಡಲ್ ವುಡ್ ಭೂಲೋಕ ಸುಂದರಿ ರಮ್ಯಾ! ಅಬ್ಬಾ ಯಾರು ಗೊತ್ತಾ ಆ ವ್ಯಕ್ತಿ ನೋಡಿ!!

ಸುದ್ದಿ

ಚಂದನ ಮನದ ಮೋಹಕ ತಾರೆ ನಟಿ ರಮ್ಯಾ ಇದೀಗ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತಸದ ವಿಚಾರ. ಚಿತ್ರರಂಗದಲ್ಲಿ ಪೀಕ್ ನಲ್ಲಿ ಇರುವಾಗಲೇ ನಟಿ ರಮ್ಯಾ ಚಿತ್ರರಂಗವನ್ನು ತೊರೆದಿದ್ದರು. ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು ಇದೀಗ ಮತ್ತೆ ಸಿನಿಮಾಕ್ಕೆ ವಾಪಸ್ ಹಾಕ್ತಾ ಇರೋದು ಖುಷಿಯ ವಿಚಾರ.

ಹೌದು ಚಂದನ ಮನದಲ್ಲಿ ನಟಿ ರಮ್ಯಾ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಅವರ ಸಿನಿಮಾಗಳಿಗೆ ಬೇಡಿಕೆ ಯಾವತ್ತೂ ಕಡಿಮೆಯಾಗಿದೆ ಇಲ್ಲ ಆದರೂ ಅವರು ಸಿನಿಮಾ ರಂಗವನ್ನು ತೊರೆದಿದ್ದರು. ರಾಜಕೀಯದಲ್ಲಿ ಸ್ವಲ್ಪ ವರ್ಷ ಕೆಲಸ ಮಾಡಿದ ನಟಿ ರಮ್ಯಾ ಇದೀಗ ಮತ್ತೆ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ರಮ್ಯಾ ಅವರು ಸ್ವಾತಿ ಮುತ್ತಿನ ಮಳೆ ಹನಿಯ ಎನ್ನುವ ವಿಭಿನ್ನವಾದ ಕಥೆಯುಳ್ಳ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿಯ ವಿಜಯದಶಮಿ ದಿನದಂದು ತಮ್ಮ ಹೊಸ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದ್ದರು ಮೋಹಕ ತಾರೆ. ಪದ್ಮಾವತಿ ಈಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾ ಇರೋದು ಅವರ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು ನಟಿಯಾಗಿ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲಿಯೂ ಕೂಡ ರಮ್ಯಾ ತೊಡಗಿಕೊಂಡಿದ್ದಾರೆ ಇತ್ತೀಚಿಗೆ ತಮ್ಮ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯ ಹೆಸರನ್ನು ಬಹಿರಂಗಪಡಿಸಿದ್ದರು.

ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ರಮ್ಯಾ ಅಭಿನಯಿಸುತ್ತಿದ್ದು ಇದರ ನಿರ್ದೇಶನವನ್ನು ಖ್ಯಾತ ನಿರ್ದೇಶಕ ರಾಜ್ ಬಿ ಶೆಟ್ಟಿ ಮಾಡುತ್ತಿದ್ದಾರೆ. ಇತ್ತೀಚಿಗೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅನುಬಂಧ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು ವೇದಿಕೆಯ ಮೇಲೆ ರಮ್ಯಾ ಆಗಮಿಸುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ ಜೋರಾಗಿತ್ತು.

ಯಾಕಂದ್ರೆ ರಮ್ಯಾ ಅಂದರೆ ಕೇವಲ ಹುಡುಗರಿಗೆ ಮಾತ್ರವಲ್ಲ ಅವರಿಗೆ ಸಾಕಷ್ಟು ಮಹಿಳಾ ಅಭಿಮಾನಿಗಳು ಕೂಡ ಇದ್ದಾರೆ. ಅನುಬಂಧ ಅವಾರ್ಡ್ ವೇದಿಕೆಯ ಮೇಲೆ ನಟಿ ರಮ್ಯಾ ಬರುತ್ತಿದ್ದಂತೆ ಎಲ್ಲಾ ಕಲಾವಿದರೂ ಹುಚ್ಚೆದ್ದು ಕುಣಿಸಿದ್ದಾರೆ. ಇನ್ನು ಕನ್ಯಾಕುಮಾರಿ ಧ್ರಾವಾಹಿ ಖ್ಯಾತಿಯ ಚರಣ್ ವೇದಿಕೆಯ ಮೇಲೆಯೇ ರಮ್ಯಾ ಅವರನ್ನು ಹೊಗಳಿದರು. ಜೊತೆಗೆ ಐ ಲವ್ ಯು ಮೇಡಂ ಅಂತ ರಮ್ಯಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇನ್ನು ವೇದಿಕೆಯಲ್ಲಿ ಅಕುಲ್ ಬಾಲಾಜಿ ರಮ್ಯಾ ಅವರಿಗೆ ಮದುವೆಯ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನೀವು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನು ಅಕುಲ್ ಬಾಲಾಜಿ ಕೇಳಿರುವ ಈ ಪ್ರಶ್ನೆಗೆ ಉತ್ತರಿಸಿದ ಮೋಹಕ ತಾರೆ ರಮ್ಯಾ ಅವರು ತಾವು ಮದುವೆಯಾಗುವ ಹುಡುಗ ಸಿಂಗಲ್ ಆಗಿರಬೇಕು. ನಾನು ಸಿಂಗಲ್ ಆಗಿದ್ದೀನಿ ಹಾಗಾಗಿ ಹುಡುಗನು ಸಿಂಗಲ್ ಆಗಿರಬೇಕು.

ಆತ ಒಳ್ಳೆಯ ಮನುಷ್ಯನಾಗಿರಬೇಕು ಆತನಲ್ಲಿ ಕರುಣೆಯ ಗುಣ ಇರಬೇಕು. ಎಂದು ರಮ್ಯಾ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವುದರ ಬಗ್ಗೆ ಕ್ವಾಲಿಟಿ ಲಿಸ್ಟ್ ಕೊಟ್ಟಿದ್ದಾರೆ. ಸದ್ಯ ಈ ಕ್ವಾಲಿಟಿಗಳೆಲ್ಲವೂ ಇರುವ ಹುಡುಗರು ರಮ್ಯಾ ಅವರನ್ನು ಮೆಚ್ಚಿಸಲು ಅವರ ಮುಂದೆ ಕ್ಯೂ ನಿಲ್ಲೋದಕ್ಕೆ ರೆಡಿಯಾಗಿದ್ದಾರೆ. ನಟಿ ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ.

ಕನ್ನಡದ ಬಹುತೇಕ ಎಲ್ಲಾ ಸಿನಿಮಾಗಳ ವಿಮರ್ಶೆ ಮಾಡುತ್ತಾರೆ. ಈ ಹಿಂದೆ ತಾನು ಮತ್ತೆ ನಟಿಸುವುದಾಗಿ ರಮ್ಯಾ ಹೇಳಿದಾಗ, ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸದ್ಯ ಇವರಿಬ್ಬರು ಸೇರ್ ಯಾವುದೇ ಪ್ರಾಜೆಕ್ಟ್ ಮಾಡುತ್ತಿಲ್ಲ. ಬದಲಿಗೆ ರಮ್ಯಾ ರಾಜ್. ಬಿ ಶೆಟ್ಟಿಯವರ ಟೀಮ್ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *